ಬದಿಯಡ್ಕ: ಭರತನಾಟ್ಯದ ಸಾವಿರ ವೇದಿಕೆಗಳಲ್ಲಿ ಹಿನ್ನೆಲೆ ಗಾಯನವನ್ನು ನೀಡಿದ ಪ್ರಸಿದ್ಧ ಸಂಗೀತಗಾರ, ರಾಷ್ಟ್ರಪ್ರಶಸ್ತಿ ಪುರಸ್ಕøತ ವಿದ್ವಾನ್ ವೆಳ್ಳಿಕೋತ್ ವಿಷ್ಣು ಭಟ್ ಅವರನ್ನು ಶ್ರೀರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳು ಅನುಗ್ರಹಿಸಿದರು. ಮಾಣಿ ಪೆರಾಜೆ ಶ್ರೀರಾಮಚಂದ್ರಾಪುರ ಮಠದ ನೂತನ ಶಿಲಾಮಯ ಗರ್ಭಗುಡಿಯಲ್ಲಿ ಶ್ರೀರಾಮದೇವರ ಪುನಃಪ್ರತಿಷ್ಠಾ ಕಾರ್ಯಕ್ರಮದ ಧರ್ಮಸಭೆಯಲ್ಲಿ ಶ್ರೀಗಳು ಅನುಗ್ರಹ ಮಂತ್ರಾಕ್ಷತೆಯನ್ನಿತ್ತು ಆಶೀರ್ವದಿಸಿದರು.
ನಂತರ ನಡೆದ ಸಾಂಸ್ಕøತಿಕ ಕಾರ್ಯಕ್ರಮದಲ್ಲಿ ವೈಷ್ಣವಿ ನಾಟ್ಯಾಲಯ ಪುತ್ತೂರು ವಿದುಷಿ ಯೋಗೀಶ್ವರೀ ಜಯಪ್ರಕಾಶ್ ಅವರ ಶಿಷ್ಯವೃಂದದವರಿಂದ ಭರತನಾಟ್ಯ ಕಾರ್ಯಕ್ರಮ ಜನಮನಸೂರೆಗೊಂಡಿತು. ವಿದ್ಯಾರ್ಥಿಗಳಾದ ವಿದುಷಿ ರೂಪಾ ಕನಕಪ್ಪಾಡಿ, ಅರ್ಪಿತಾ ಮುಳ್ಳೇರಿಯ, ಶಮಾ ವಳಕ್ಕುಂಜ, ಅಂಕಿತಾ ಬೆಳ್ಳಾರೆ, ಸಮನ್ವಿತಾ ವಳಕ್ಕುಂಜ ನೃತ್ಯ ಪ್ರದರ್ಶನವನ್ನು ನೀಡಿದರು. ಹಿಮ್ಮೇಳದಲ್ಲಿ ನಟುವಾಂಗದಲ್ಲಿ ವಿದುಷಿ ಯೋಗೀಶ್ವರೀ, ಹಾಡುಗಾರಿಕೆಯಲ್ಲಿ ವಿದ್ವಾನ್ ವೆಳ್ಳಿಕೋತ್ ವಿಷ್ಣು ಭಟ್, ಮೃದಂಗದಲ್ಲಿ ಗೀತೇಶ್ ಕುಮಾರ್ ನೀಲೇಶ್ವರ, ಕೊಳಲಿನಲ್ಲಿ ರಾಜಗೋಪಾಲ ಕಾಞಂಗಾಡು ಜೊತೆಗೂಡಿದರು.
ಮಾಣಿಮಠದಲ್ಲಿ ರಾಘವೇಶ್ವರ ಶ್ರೀಗಳಿಂದ ಅನುಗ್ರಹ ಮಂತ್ರಾಕ್ಷತೆ: ಸಾವಿರ ಭರತನಾಟ್ಯ ವೇದಿಕೆಯಲ್ಲಿ ಗಾಯನ ನೀಡಿದ ವೆಳ್ಳಿಕೋತ್ ವಿಷ್ಣು ಭಟ್
0
ಜನವರಿ 26, 2023