ಕಾಸರಗೋಡು: ಗ್ರ್ರಾಮೀಣ ಪ್ರದೇಶದ ಸ್ಥಳೀಯ ಸಮಸ್ಯೆಗಳತ್ತ ಬೆಳಕುಚೆಲ್ಲುವ ಮೂಲಕ ಸರ್ಕಾರದ ಸೆಳೆಯುವಲ್ಲಿ ಪತ್ರಿಕಾ ಮಾಧ್ಯಮಗಳ ಪಾತ್ರ ಮಹತ್ತರವಾದುದು ಎಂಬುದಾಗಿ ಶಾಸಕ ಎನ್.ಎ ನೆಲ್ಲಿಕುನ್ನು ತಿಳಿಸಿದ್ದಾರೆ.
ಅವರು ಪ್ರೆಸ್ ಕ್ಲಬ್ ವತಿಯಿಂದ ಪ್ರೆಸ್‍ಕ್ಲಬ್ ಸಭಾಂಗಣದಲ್ಲಿ ಆಯೋಜಿಸಲಾದ ಹಿರಿಯ ಪತ್ರಕರ್ತ ಕೆ.ಕೃಷ್ಣನ್ ಸಂಸ್ಮರಣೆ ಮತ್ತು ಕೆ. ಕೃಷ್ಣನ್ ಸ್ಮಾರಕ ಸ್ಥಳೀಯ ಪತ್ರಕರ್ತ ಪ್ರಶಸ್ತಿ ವಿತರಣಾ ಸಮಾರಂಭ ಉದ್ಘಾಟಿಸಿ ಮಾತನಾಡಿದರು. ಪ್ರೆಸ್ ಕ್ಲಬ್ ಅಧ್ಯಕ್ಷ ಮುಹಮ್ಮದ್ ಹಾಶಿಂ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭ ಪತ್ರಕರ್ತ, ಮಲಪ್ಪುರಂ ಪೊನ್ನಾನಿಯ ಜಿಬೇಶ್ ವೈಲಿಪ್ಪಾಟ್ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು. ಎ. ಅಬ್ದುಲ್ ರಹಮಾನ್ ಅವರು ಕೆ. ಕೃಷ್ಣನ್ ಸಂಸ್ಮರಣಾ ಭಾಷಣ ಮಾಡಿದರು. 'ಮಾಧ್ಯಮಗಳು ಏನು ಹೇಳುತ್ತವೆ ಮತ್ತು ಏನು ಹೇಳಬೇಕು' ಎಂಬ ವಿಷಯದ ಬಗ್ಗೆ ಲೇಖಕ ಕೆ.ಟಿ. ಬಾಬುರಾಜ್ ಉಪನ್ಯಾಸ ನೀಡಿದರು. ಜಿಲ್ಲಾ ಮಾಹಿತಿ ಅಧಿಕಾರಿ ಎಂ. ಮಧುಸೂದನನ್, ಪದ್ಮನಾಭನ್ ಬ್ಲಾತ್ತೂರ್, ಪ್ರೆಸ್ ಕ್ಲಬ್ ಉಪಾಧ್ಯಕ್ಷ ನಹಾಸ್ ಪಿ ಮುಹಮ್ಮದ್ ಉಪಸ್ಥಿತರಿದ್ದರು. ಪ್ರೆಸ್ ಕ್ಲಬ್ ಜತೆ ಕಾರ್ಯದರ್ಶಿ ಪ್ರದೀಪ್ ನಾರಾಯಣನ್ ಪ್ರಶಸ್ತಿ ವಿಜೇತರ ಪರಿಚಯ ನೀಡಿದರು. ಪ್ರಶಸ್ತಿ ಪುರಸ್ಕøತ ಜಿಬೇಶ್ ವಿ. ಅನಿಸಿಕೆ ವ್ಯಕ್ತಪಡಿಸಿದರು. ಕಾರ್ಯದರ್ಶಿ ಪದ್ಮೇಶ ಕೆ.ವಿ ಸ್ವಾಗತಿಸಿದರು. ಕೋಶಾಧಿಕಾರಿ ಶೈಜು ಪಿಲಾತ್ತರ ವಂದಿಸಿದರು.
ಪತ್ರಕರ್ತ ಕೆ.ಕೃಷ್ಣನ್ ಸಂಸ್ಮರಣೆ, ಪ್ರಶಸ್ತಿ ಪ್ರದಾನ ಸಮಾರಂಭ
0
ಜನವರಿ 27, 2023
Tags