ಕುಂಬಳೆ: ಕಂಚಿಕಟ್ಟೆ ರಸ್ತೆಯಲ್ಲಿ ನ್ಯೂನತೆ ಕಂಡು ಬಂದಿದ್ದು, ಕಾಂಕ್ರಿಟ್ ಮೇಲೆ ಟಾರ್ ಹಾಕಿ ಅವ್ಯವಹಾರ ಮುಚ್ಚಿಹಾಕುವ ಪ್ರಯತ್ನ ನಡೆದಿದೆ.
ಹದಗೆಟ್ಟ ಕುಂಬಳೆ- ಕಂಚಿಕಟ್ಟೆ ರಸ್ತೆಗೆ ದಿನಗಳ ಹಿಂದೆಯಷ್ಟೇ ಕಾಂಕ್ರೀಟ್ ಕಾಮಗಾರಿ ನಡೆಸಲಾಗಿತ್ತು. ಅದರ ಬೆನ್ನಿಗೇ ಕಾಂಕ್ರೀಟ್ ನಲ್ಲಿ ಬಿರುಕು ಕಂಡುಬಂದಿದ್ದು, ಗುತ್ತಿಗೆದಾರರು ದುರಸ್ತಿ ಮಾಡುವ ನಾಟಕವಾಡಿದ್ದು, ಈ ಪ್ರಯತ್ನಕ್ಕೆ ಸ್ಥಳೀಯರು ತಡೆ ಒಡ್ಡಿದರು.
ಕಾಮಗಾರಿಯ ಆರಂಭದಲ್ಲೇ ದೋಷ ಕಂಡುಬಂದಿದ್ದ ಬಗ್ಗೆ ಸ್ಥಳೀಯರು ಎಚ್ಚರಿಸಿದ್ದರು. ಬಳಿಕ ಕಾಂಕ್ರೀಟ್ ಹಾಕಿದ ಭಾಗದಲ್ಲಿ ಟಾರಿಂಗ್ ಮಾಡಲಾಗಿದೆ. ಭಾನುವಾರ ರಜಾ ದಿನವಾದ ಕಾರಣ ಇಂಜಿನಿಯರ್, ಮೇಲ್ವಿಚಾರಕರು ಇಲ್ಲದೆ ಇಲಾಖೆ ಕೆಲಸ ಮಾಡಲು ಯತ್ನಿಸಿತು. ವೆಲ್ಫೇರ್ ಪಾರ್ಟಿ ಕುಂಬಳೆ ಪಂಚಾಯತಿ ಕಾರ್ಯದರ್ಶಿ ಅಸ್ಲಂ ಸೂರಂಬೈಲ್ ಹಾಗೂ ಕುಂಬಳೆ ಘಟಕದ ಅಧ್ಯಕ್ಷ ವಿಜಯಕುಮಾರ್ ರಸ್ತೆ ಕಾಮಗಾರಿಗೆ ತಡೆ ಒಡ್ಡಿದರು.
ನಿರ್ಮಾಣದಲ್ಲಿ ವಂಚನೆ: ಕಾಂಕ್ರೀಟ್ ಮೇಲೆ ಟಾರಿಂಗ್ ಯತ್ನ: ನಾಗರಿಕರಿಂದ ತಡೆ
0
ಜನವರಿ 22, 2023