ಕಾಸರಗೋಡು: ಬಿಜೆಪಿ ರಾಜ್ಯಾಧ್ಯಕ್ಷ ಕೆ. ಸುರೇಂದ್ರನ್ ಅವರನ್ನು ಒಂದನೇ ಅರೋಪಿಯನ್ನಾಗಿ ಬಿಜೆಪಿ ಮುಖಂಡರ ವಿರುದ್ಧ ಕ್ರೈಂ ಬ್ರಾಂಚ್ ನ್ಯಾಯಾಲಯಕ್ಕೆ ಸಲ್ಲಿಸಿರುವ ಆರೋಪ ಪಟ್ಟಿ ಸಿಪಿಎಂನ ಗೂಢಾಲೋಚನೆಯ ತಂತ್ರವಾಗಿದೆ ಎಂದು ಬಿಜೆಪಿ ರಆಝ್ಯ ಸಮಿತಿ ಕಾರ್ಯದರ್ಶಿ ಕೆ.ಶ್ರೀಕಾಂತ್ ಸುದ್ದಿಗೋಷ್ಠೀಯಲ್ಲಿ ತಿಳಿಸಿದ್ದಾರೆ.
ಬಿಎಸ್‍ಪಿ ಅಭ್ಯರ್ಥಿ ಸುಂದರ ಹಾಗೂ ಎಡರಂಗ ಅಬ್ಯರ್ಥಿ ವಿ.ವಿ ರಮೇಶನ್ ನೀಡಿರುವ ಹೇಳಿಕೆಗಳಲ್ಲಿ ಪರಿಶಿಷ್ಟ ಜಾತಿ ದೌರ್ಜನ್ಯ ತಡೆ ಕಾಯ್ದೆಗೆ ಸಂಬಂಧಿಸಿದಂತೆ ಯಾವುದೇ ಉಲ್ಲೇಖವಿಲ್ಲ. ಸ್ಪಷ್ಟ ಸಾಕ್ಷ್ಯಾಧಾರಗಳ ಕೊರತೆಯಿಂದಾಗಿ ಒಂದು ವರ್ಷದ ನಂತರ ಚಾರ್ಜ್ ಶೀಟ್ ಸಲ್ಲಿಕೆಯಾಗಿದೆ. ಆಲುವಾದ ಸಿಪಿಎಂ ಆಜ್ಞಾನುವರ್ತಿ ಸುರೇಶ್ ಕುಮಾರ್ ಆರು ತಿಂಗಳ ನೀಡಿದ ದಊರಿನ ಆಧಾರದಲ್ಲಿ ಪರಿಶಿಷ್ಟ ಜಾತಿ ದೌರ್ಜನ್ಯ ಕಾಯ್ದೆ ಸೇರ್ಪಡೆಗೊಳಿಸಲಾಗಿದೆ. ಕಾಸರಗೋಡು ಜಿಲ್ಲೆಯವರಲ್ಲದ ಸುರೇಶ್ ಅವರು ಸಿಪಿಎಂ ಸೂಚನೆ ಮೇರೆಗೆ ಮುಖ್ಯಮಂತ್ರಿಗಳಿಗೆ ದೂರು ಕಳುಹಿಸುತ್ತಿದ್ದಾರೆ. ದೂರನ್ನು ಮುಖ್ಯಮಂತ್ರಿ ಕ್ರೈಂ ಬ್ರಂಚ್‍ಗೆ ರವಾಣಿಸಿದ್ದಾರೆ. ಬಿಜೆಪಿಯನ್ನು ನಾಶ ಮಾಡುವ ಏಕೈಕ ಉದ್ದೇಶ ಇದರಲ್ಲಿ ಅಡಕವಾಗಿದೆ. ಇದು ಸಿಪಿಎಂ ಮತ್ತು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ವಿಶೇಷ ಆಸಕ್ತಿಯನ್ವಯ ದಾಖಲಾದ ಪ್ರಕರಣವಾಗಿದೆ. ಸುಂದರ ತಾನು ಸ್ವಯಂಪ್ರೇರಿತವಾಗಿ ಅಭ್ಯರ್ಥಿತನದಿಂದ ಹಿಂದೆ ಸರಿಯುತ್ತಿರುವುದಾಗಿ ಪೆÇಲೀಸರಿಗೆ ಹೇಳಿಕೆ ನೀಡಿದ್ದರು. ಸಿಪಿಎಂಗೆ ಮಾಡಿದ ಸಹಾಯಕ್ಕೆ ಪ್ರತಿಫಲವಾಗಿ, ಸುಂದರ ಅವರಿಗೆ ಸಿಪಿಎಂ ನಿಯಂತ್ರಿತ ಸಹಕಾರಿ ಆಸ್ಪತ್ರೆಯಲ್ಲಿ ಅವರ ವಯಸ್ಸನ್ನೂ ಲೆಕ್ಕಿಸದೆ ಕೆಲಸ ಕೊಡಿಸಲಾಗಿದೆ. ಕೆ.ಸುರೇಂದ್ರನ್ ವಿರುದ್ಧದ ಪ್ರಕರಣ ಕಪೋಲಕಲ್ಪಿತವಾಗಿದ್ದು, ಇದನ್ನು ರಾಜಕೀಯವಾಗಿ ಮತ್ತು ಕಾನೂನಾತ್ಮಕವಾಗಿ ಎದುರಿಸಲಿದ್ದೇವೆ ಎಂದು ಶ್ರೀಕಾಂತ್ ಹೇಳಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಜಿಲ್ಲಾಧ್ಯಕ್ಷ ರವೀಶ ತಂತ್ರಿ ಕುಂಟಾರು, ಪ್ರಧಾನ ಕಾರ್ಯದರ್ಶಿ ವಿಜಯಕುಮಾರ್ ರೈ ಉಪಸ್ಥಿತರಿದ್ದರು.
ಬಿಜೆಪಿ ಮುಖಂಡರ ವಿರುದ್ಧ ಆರೋಪ ಪಟ್ಟಿ ಸಲ್ಲಿಕೆ ಸಿಪಿಎಂನ ಪಿತೂರಿ: ಕೆ.ಶ್ರೀಕಾಂತ್
0
ಜನವರಿ 11, 2023
Tags