ಕಾಸರಗೋಡು: ಗಡಿನಾಡು ಕಾಸರಗೋಡಿನಲ್ಲಿ ಕನ್ನಡ ಭಾಷೆ ಮತ್ತು ಕನ್ನಡಿಗರನ್ನು ಎಡರಂಗ ಸರ್ಕಾರ ದಮನಿಸಲು ಯತ್ನಿಸುತ್ತಿರುವುದಾಗಿ ಬಿಜೆಪಿ ರಜ್ಯ ಸಮಿತಿ ಅಧ್ಯಕ್ಷ ಕೆ. ಸುರೇಂದ್ರನ್ ಕಾಸರಗೋಡು ಬಿಜೆಪಿ ಜಿಲ್ಲಾ ಕಚೇರಿ ಸಭಾಂಗಣದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಕೋಯಿಕ್ಕೋಡಿನಲ್ಲಿ ನಡೆದ ರಾಜ್ಯ ಶಾಲಾಕಲೋತ್ಸವದಲ್ಲಿ ಯಕ್ಷಗಾನ ಕಲೆಗೆ ಅವಮಾನ ಮಾಡುವ ಮೂಲಕ ಕನ್ನಡ ಸಂಸ್ಕøತಿಯ ವಿರುದ್ಧ ಸರ್ಕಾರ ಹಾಗೂ ಶಿಕ್ಷಣ ಇಲಾಖೆಯು ತನ್ನ ಅಸಹಿಷ್ಣುತೆಯನ್ನು ಹೊರಹಾಕಿದೆ. ಯಕ್ಷಗಾನ ಸ್ಪರ್ಧೆಯಲ್ಲಿ ಭಾಗವಹಿಸುವ ವಿದ್ಯಾರ್ಥಿಗಳಲ್ಲಿ ಭಯ ಹುಟ್ಟಿಸುವ ರೀತಿಯಲ್ಲಿ ಅಲ್ಲಿನ ಮೇಕಪ್ ಸಾಂಗ್ರಿಗಳನ್ನು ಚಲ್ಲಾಪಿಲ್ಲಿಗೊಳಿಸಲಾಗಿದೆ.ಇದು ಏಷ್ಯಾದಲ್ಲೇ ಅತಿ ದೊಡ್ಡ ಕಲೋತ್ಸವ ಎಂಬ ಹೆಗ್ಗಳಿಕೆ ಪಡೆದಿರುವ ಶಾಲಾಕಲೋತ್ಸವಕ್ಕೆ ಎಸಗಿದ ಅಪಚಾರವಾಗಿದೆ. ಶಾಲಾ ಕಲೋತ್ಸವದ ಹೆಸರಲ್ಲಿ ರಾಜ್ಯದಲ್ಲಿ ಕೋಮು ಧ್ರುವೀಕರಣಕ್ಕೆ ಎಡರಂಗ ಸರ್ಕಾರ ಪ್ರಯತ್ನಿಸುತ್ತಿದೆ. ಇದರ ಭಾಗವಾಗಿ ಸ್ವಾಗತ ಹಾಡು ಮತ್ತು ಆಹಾರ ವಿತರಣೆ ವಿಷಯವನ್ನು ಸರ್ಕಾರ ವಿವಾದಾತ್ಮಕವಾಗಿ ಚಿತ್ರಿಸಿರುವುದಾಗಿ ತಿಳಿಸಿದರು. ಮಂಜೇಶ್ವರ ವಿಧಾನಸಭಾ ಚುನಾವಣೆ ಹೆಸರಲ್ಲಿ ಬಿಜೆಪಿ ವಿರುದ್ಧ ಸರ್ಕಾರ ಸುಳ್ಳು ಪ್ರಚಾರದಲ್ಲಿ ತೊಡಗಿದೆ. ಸುಂದರ ಅವರ ದೂರಿನಲ್ಲಿ ಎಲ್ಲೂ ತನ್ನನ್ನು ಜಾತಿ ಹೆಸರಲ್ಲಿ ನಿಂದಿಸಿರುವ ಬಗ್ಗೆ ಚಕಾರವೆತ್ತಿಲ್ಲ. ಸಿಪಿಎಂ ಕಾರ್ಯಕರ್ತನೊಬ್ಬ ಮುಖ್ಯಮಂತ್ರಿಗೆ ದೂರು ನೀಡುವ ಮೂಲಕ ಸುಂದರ ಅವರನ್ನು ಜಾತಿ ಹೆಸರಲ್ಲಿ ನಿಂದಿಸಿರುವುದಾಗಿ ಸುಳ್ಳು ಆರೋಪ ಹೊರಿಸಿರುವುದು ಬಿಜೆಪಿಯ ಮೇಲಿನ ದ್ವೇಷ ಸಾಧನೆಗೆ ಸಾಕ್ಷಿಯಾಗಿದೆ. ಬಿಜೆಪಿ ಪಕ್ಷ ಹಾಗೂ ಪಕ್ಷದ ಮುಖಂಡರ ವಿರುದ್ಧ ಸುಳ್ಳು ಹೇಳಿಕೆ ನೀಡುವ ನಿಟ್ಟಿನಲ್ಲಿ ಸುಂದರ ಅವರಿಗೆ ಕೆಲಸ ಕೊಡಿಸಿ, ಹಣದ ಆಮಿಷವೊಡ್ಡಿದವರು ಈ ಎಲ್ಲ ಪ್ರಶ್ನೆಗಳಿಗೆ ಉತ್ತರ ನೀಡಬೇಕಾಗಿಬರಬಹುದು ಎಂದು ತಿಳಿಸಿದರು.
ಸುದ್ದಿಗೋಷ್ಟಿಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ರವೀಶ ತಂತ್ರಿ ಕುಂಟಾರು, ಸುರೇಶ್ ಕುಮಾರ್ ಶೆಟ್ಟಿ ಉಪಸ್ಥಿತರಿದ್ದರು.
ಕನ್ನಡ ಭಾಷೆ ಮತ್ತು ಕನ್ನಡಿಗರನ್ನು ದಮನಿಸಲು ಎಡರಂಗ ಸರ್ಕಾರ ಪ್ರಯತ್ನ-ಬಿಜೆಪಿ
0
ಜನವರಿ 13, 2023