ಪೆರ್ಲ : ಜಿಲ್ಲಾ ಅಗಸರ ಯಾನೆ ಮಡಿವಾಳರ ಸಂಘದ ದಶಮಾನೋತ್ಸವ ಸಮಾರಂಭ ಜ. 29ರಂದು ಪೆರ್ಲ ಶ್ರೀ ಗಣೇಶ ಮಂದಿರದಲ್ಲಿ ಜರುಗಲಿದೆ. ಅಂದು ಬೆಳಿಗ್ಗೆ 9.30 ಕ್ಕೆ ಸಂಘದ ಗೌರವಾಧ್ಯಕ್ಷ ಸಚ್ಚಿದಾನಂದ ಖಂಡೇರಿ ಧ್ವಜರೋಹಣ ನಡೆಸುವರು. ಈ ಸಂದರ್ಭ ಕುಲದೇವರಾದ ಶ್ರೀ ವೀರಭದ್ರ ದೇವರಿಗೆ ಪುಷ್ಪಾರ್ಚನೆಯೊಂದಿಗೆ ಸಭಾ ಕಾರ್ಯಕ್ರಮ ನಡೆಯುವುದು. ಆರ್.ರಘು ಕೌಟಿಲ್ಯ ಮೈಸೂರು ಸಮಾರಂಭ ಉದ್ಘಾಟಿಸುವರು. ಸಂಘದ ಅಧ್ಯಕ್ಷ ಕೆ. ಬಾಬು ನೀರ್ಚಾಲು ಅಧ್ಯಕ್ಷತೆ ವಹಿಸುವರು. ಪರಮಪೂಜ್ಯ ಶ್ರೀ ಮುಕ್ತಾನಂದ ಸ್ವಾಮೀಜಿ ಕರಿಂಜೆ ಮಾಡುಬಿದ್ರೆ ಆಶೀರ್ವಚನ ನೀಡುವರು.
ದ.ಕ.ಜಿಲ್ಲಾ ಮಾಡಿವಾಳರ ಸಂಘದ ಅಧ್ಯಕ್ಷ ವಿಶ್ವನಾಥ ಕಾಟಿಪಳ್ಳ, ಉಡುಪಿ ಜಿಲ್ಲಾ ಮಡಿವಾಳರ ಸಂಘದ ಅಧ್ಯಕ್ಷಪ್ರದೀಪ ಉಡುಪಿ, ಬೆಳ್ತಂಗಡಿ ತಾಲೂಕು ಮಡಿವಾಳರ ಸಂಘದ ಅಧ್ಯಕ್ಷ ಶ್ರೀಧರ ಪಿಲಾತ ಬೆಟ್ಟು, ಪುತ್ತೂರು ತಾಲೂಕು ಮಡಿವಾಳರ ಸಂಘದ ಅಧ್ಯಕ್ಷ ಪಿ.ಎನ್. ಸುಭಾಶ್ಚಂದ್ರ, ಸುಳ್ಯ ತಾಲೂಕು ಮಡಿವಾಳರ ಸಂಘದ ಅಧ್ಯಕ್ಷ ನಾಗರಾಜ ಅಜ್ಜಾವರ, ಮೂಲ್ಕಿ ತಾಲೂಕು ಮಡಿವಾಳರ ಸಂಘದ ಅಧ್ಯಕ್ಷ ಸದಾಶಿವ ಹೊಸದುರ್ಗ, ಮೂಡುಬಿದ್ರೆ ತಾಲೂಕು ಮಡಿವಾಳರ ಸಂಘದ ಅಧ್ಯಕ್ಷ ಶಿವಾನಂದ ಕೊಡಂಗಲ್ಲು, ಬಂಟ್ವಾಳ ತಾಲೂಕು ಮಡಿವಾಳರ ಸಂಘದ ಅಧ್ಯಕ್ಷ ಎನ್. ಕೆ.ಶಿವ, ಕಾರ್ಕಳ ತಾಲೂಕು ಮಡಿವಾಳರ ಸಂಘದ ಅಧ್ಯಕ್ಷ ಸುರೇಶ್ ಕಾರ್ಕಳ, ಸುಧೀರ್ ವಿ. ಚೆರುವತ್ತೂರು, ಡಾ. ಜಯ ರಾಜನ್ ಪಯ್ಯನೂರು. ಮಧುಸೂಧನ್ ಕಾಞ್ಞಂಗಾಡು, ಪದೃನಾಭನ್ ಕೆ. ಮತ್ತು ರಾಷ್ಟ್ರೀಯ ಮಹಿಳಾ ಆಯೋಗ, ಭಾರತ ಸರಕಾರದ ನಿಕಟ ಪೂರ್ವ ಸದಸ್ಯೆ ಶ್ಯಾಮಲಾ ಎಸ್. ಕುಂದರ್ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸುವರು.
ಈ ಸಂದರ್ಭ ಸಮಾಜದ ಹಿರಿಯರು, ಪ್ರತಿಭಾನ್ವಿತರು, ವಿವಿಧ ರಂಗಗಳಲ್ಲಿ ವಿಶಿಷ್ಟ ಸೇವೆ ಸಲ್ಲಿಸಿದವರಿಗೆ ಗೌರವಾರ್ಪಣೆ ನಡೆಯುವುದು. ಕಾರ್ಯಕ್ರಮದ ಅಂಗವಾಗಿ ಮಡಿವಾಳ ಯೂತ್ ಹಾಗೂ ಸಮಾಜದ ಮಕ್ಕಳಿಂದ' ಕಲಾ ಸಾಂಸ್ಕøತಿಕ' ಕಾರ್ಯಕ್ರಮ ಜರಗಲಿದೆ. ಸಮಾಜದ ಪ್ರತಿಭ್ವಾನಿತ ವಿದ್ಯಾರ್ಥಿಗಳಿಗೆ 'ವಿದ್ಯಾನಿಧಿ' ವಿತರಣೆ, ಕ್ರೀಡಾ ಕೂಟದ ಬಹುಮಾನ ವಿತರಣೆ ಜರಗಲಿದೆ. ಸಂಜೆ 6ಕ್ಕೆ ಸಮಾರೋಪ ಸಮಾರಂಭ ನಡೆಯುವುದು.