ಕಾಸರಗೋಡು: ಹುಬ್ಬಳ್ಳಿ ಸನಿಹದ ಹಾನಗಲ್‍ನಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಮೂವರು ಮೃತಪಟ್ಟು ಗಂಭೀರಗಾಯಗೊಂಡಿದ್ದ ಎರಡರ ಹರೆಯದ ಮಗುವೂ ಮೃತಪಟ್ಟಿದೆ. ಅಪಘಾತದಲ್ಲಿ ಮೃತಪಟ್ಟಿರುವ ಕಾಸರಗೋಡು ತಳಂಗರೆ ಸುಸ್ರತ್ ನಗರ ನಿವಾಸಿ ಮಹಮ್ಮದ್‍ಕುಞ(65) ಅವರ ಮೊಮ್ಮಗಳು ಆಯಿಷಾ ಮೃತಪಟ್ಟ ಬಾಲೆ. ಅಪಘಾತದಲ್ಲಿ ತಲೆಗೆ ಗಂಭೀರ ಗಾಯಗೊಂಡಿದ್ದ ಆಯಿಷಾಳನ್ನು ಅಲ್ಲಿನ ಆಸ್ಪತ್ರೆಯ ತುರ್ತು ಚಿಕಿತ್ಸಾ ಘಟಕದಲ್ಲಿ ದಾಖಲಿಸಲಾಗಿತ್ತು. ಈ ಮೂಲಕ ಅಪಘಾತದಲ್ಲಿ ಮೃತಪಟ್ಟವರ ಸಂಖ್ಯೆ ನಾಲ್ಕಕ್ಕೇರಿದೆ. ಳಂಗರೆ ಸುಸ್ರತ್ ನಗರ ನಿವಾಸಿ ಮಹಮ್ಮದ್‍ಕುಞÂ(65) ಇವರ ಪತ್ನಿ ಆಯಿಷಾ(62)ಅಪಘಾತ ನಡೆದಂದು ಹಾಗೂ ಇವರ ಪುತ್ರ ಸಿಯಾಜ್-ಸಜ್ನಾ ದಂಪತಿ ಪುತ್ರ ಮಹಮ್ಮದ್(3)ಮರುದಿನ ಮೃತಪಟ್ಟಿದ್ದರು. ಮೃvಮಹಮ್ಮದ್‍ಕುಞÂ ಅವರ ಪುತ್ರ ಪುತ್ರ ಸಿಯಾಜ್, ಸೊಸೆ ಸಜ್ನಾ ಗಂಭೀರ ಗಾಯಗೊಂಡಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿದ್ದಾರೆ. ಕಾಸರಗೋಡಿನಿಂದ ಹುಬ್ಬಳ್ಳಿಗೆ ಕಾರಿನಲ್ಲಿ ತೆರಳುವ ಹಾದಿಮಧ್ಯೆ ಹಾನಗಲ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಡಿ. 27ರಂದು ಕಾರು ಮತ್ತು ಬಸ್ ಮಧ್ಯೆ ಅಪಘಾತ ಸಂಭವಿಸಿತ್ತು. ಬಾಲಕಿ ಮೃತದೇಹ ಳಂಗರೆ ಮಲಿಕ್‍ದೀನಾರ್ ಮಸೀದಿ ಪ್ರಾಂಗಣದಲ್ಲಿ ದಫನಮಾಡಲಯಿತು.
ಹಾನಗಲ್‍ನಲ್ಲಿ ಅಪಘಾತ-ಗಾಯಾಳು ಬಾಲಕಿಯೂ ಮೃತ್ಯು: ಸಾವಿನ ಸಂಖ್ಯೆ ನಾಲ್ಕಕ್ಕೇರಿಕೆ
0
ಜನವರಿ 02, 2023