ಕಾಸರಗೋಡು: ನುಳ್ಳಿಪ್ಪಾಡಿಯ ಸೀತಮ್ಮ ಪುರುಷ ನಾಯಕ ಸ್ಮಾರಕ ಕನ್ನಡ ಭÀವನ ಮತ್ತು ಗ್ರಂಥಾಲಯದ ಸ್ಥಾಪಕಾಧ್ಯಕ್ಷ, ಕರ್ನಾಟಕ ಇತಿಹಾಸ ಅಕಾಡೆಮಿ ಕೇರಳ ಘಟಕ ಪ್ರಧಾನ ಕಾರ್ಯದರ್ಶಿ ವಾಮನ್ ರಾವ್ ಬೇಕಲ್ ಅವರಿಗೆ ಪ್ರತಿಷ್ಠೆಯ ಜೆಸಿ ಪ್ರಶಸ್ತಿ ಪ್ರದಾನ ನಡೆಯಿತು.
ಮುಖ್ಯ ಅತಿಥಿ ಜೆಸಿಐ ರಾಷ್ಟ್ರೀಯ ಉಪಾಧ್ಯಕ್ಷ ಜೆಸಿಐ ಪಿಪಿಪಿ ಜೈಸನ್ ಥೋಮಸ್ ಪ್ರಶಸ್ತಿ ಪ್ರದಾನ ಮಾಡಿದರು. ಕಾರ್ಯಕ್ರಮದಲ್ಲಿ ಪದ್ಮನಾಭನ್ ಚೆಟ್ಟಿ ಅಧ್ಯಕ್ಷತೆ ವಹಿಸಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಜೆಸಿಐ ಪಿಪಿಪಿ ನಿಜಿಲ್ ನಾರಾಯಣನ್, ಜೆಎಫ್‍ಎಸ್ ಪ್ರಮೋದ್ ಕುಮಾರ್, ಜೆಸಿಐ ಪಿಪಿಪಿ ಸಮೀರ್ ಕೆ.ಟಿ. ಮೊದಲಾದವರು ಭಾಗವಹಿಸಿದರು. ಜೆಸಿ ಸರ್ಫುದ್ದೀನ್, ಜೆಎಫ್‍ಎಸ್ ಯುನೈಸ್ ಪಿ, ಜೆಎಫ್‍ಎಂ ವಿಜಯನ್ ಶಂಕರಂಪಾಡಿ, ಜೆಸಿ ವಾಮನ್ ಕುಮಾರ್, ಜೆಎಫ್‍ಪಿ ಪ್ರಶೀಶ್ ಕುಮಾರ್ ಮೊದಲಾದವರು ಉಪಸ್ಥಿತರಿದ್ದರು.