ಬದಿಯಡ್ಕ: ಬಡಗು ಶಬರಿಮಲೆ ಉಬ್ರಂಗಳ ಶ್ರೀ ಮಹಾದೇವ ಪಾರ್ವತೀ ಶ್ರೀ ಶಾಸ್ತಾರ ದೇವಸ್ಥಾನದ ಜಾತ್ರೋತ್ಸವದಂಗವಾಗಿ ವಿಶೇಷ ಪಾಟು ಉತ್ಸವ ಬುಧವಾರ ಜರಗಿತು. ಬೆಳಗ್ಗೆ `ಕಳೋತ್ಲರಿ' ಪಾಟು ಉತ್ಸವದ ಮಂಗಲೋತ್ಸವ, ಶ್ರೀದೇವರಿಗೆ ನವಕಾಭಿಷೇಕ, ತುಲಾಭಾರ ಸೇವೆ ನಡೆಯಿತು. ಮಧ್ಯಾಹ್ನ ಮಹಾಪೂಜೆ, ಅನ್ನದಾನ, ಸಂಜೆ ಯಕ್ಷಕೂಟ ಕದ್ರಿ ಮತ್ತು ಪ್ರಸಿದ್ಧ ಕಲಾವಿದರ ಕೂಡುವಿಕೆಯಿಂದ ಕದ್ರಿ ರಾಮಚಂದ್ರ ಭಟ್ ನಿರ್ದೇಶನದಲ್ಲಿ ಸುದರ್ಶನ ಗರ್ವಭಂಗ, ಭಾರ್ಗವ ವಿಜಯ ಯಕ್ಷಗಾನ ಬಯಲಾಟ ಪ್ರದರ್ಶನಗೊಂಡಿತು.
ಮಂಗಳವಾರ ಸಂಜೆ ಅಭಿಜ್ಞಾ ಹರೀಶ್ ಕರಂದಕ್ಕಾಡ್ ಅವರಿಂದ ಯೋಗ ಪ್ರದರ್ಶನ, ಕಾಮಿಡಿ ಉತ್ಸವ ಫೇಮ್ ರತೀಶ್ ಕುಂಡಡ್ಕ ಇವರ ಟ್ರಾಕ್ ಭಕ್ತಿಗಾನಸುಧಾ, ಗಿನ್ನೆಸ್ ರೆಕಾರ್ಡ್ ಕಲಾವಿದ ಸುರೇಶ್ ಯಾದವ್ ಅವರ ಮಿಮಿಕ್ರಿ ವನ್ ಮೇನ್ ಶೋ ಶ್ರೀ ಕ್ಷೇತ್ರ ಉಬ್ರಂಗಳದ ಯುವ ವಿಭಾಗದ ಪ್ರಾಯೋಜಕತ್ವದಲ್ಲಿ ಜರಗಿತು. ರಾತ್ರಿ ಪಾರ್ವತಿ ದೇವಿಗೆ ಹೂವಿನಪೂಜೆ, ಮಹಾಕಾರ್ತಿಕ ಪೂಜೆ ಜರಗಿತು.
ಉಬ್ರಂಗಳದಲ್ಲಿ ವಿಶೇಷ ಪಾಟು ಉತ್ಸವ ಮಂಗಲ
0
ಜನವರಿ 05, 2023