ಕೋಝಿಕ್ಕೋಡ್: ಹರತಾಳ ನೆಪದಲ್ಲಿ ಹಿಂಸಾಚಾರ ಎಬ್ಬಿಸಿದ ಪ್ರಕರಣದಲ್ಲಿ ಪಾಪ್ಯುಲರ್ ಫ್ರಂಟ್ ಭಯೋತ್ಪಾದಕರ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳುವಂತೆ ಆದೇಶಿಸಿರುವ ಹೈಕೋರ್ಟ್ ವಿರುದ್ಧ ಜಮಾತೆ ಇಸ್ಲಾಮಿ ಯುವ ಘಟಕ ಹೈಕೋರ್ಟನ್ನೇ ಟೀಕಿಸಿದೆ.
ಪ್ರತಿವಾದಿಗಳಿಗೆ ಪರಿಹಾರ ನೀಡಲು ಹೈಕೋರ್ಟ್ ತೋರಿದ ಅತಿಯಾದ ಆಸಕ್ತಿ ತಾರತಮ್ಯ ಎಂದು ಸಾಲಿಡಾರಿಟಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.
ತರಾತುರಿಯಲ್ಲಿ ತೀರ್ಪಿನ ಅನುಷ್ಠಾನದ ಹಿಂದೆ ನ್ಯಾಯಾಲಯದ ಹಿತಾಸಕ್ತಿಗಳನ್ನು ಸಮಂಜಸವಾಗಿ ಅನುಮಾನಿಸಬೇಕು ಎಂದು ಸಂಘಟನೆ ಆರೋಪಿಸಿದೆ. ಹರತಾಳಕ್ಕೆ ಸಂಬಂಧಿಸಿದಂತೆ ಬಂಧಿತರಾಗಿದ್ದವರು ನಿಗದಿತ ಮೊತ್ತದೊಂದಿಗೆ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದರು. ಅದನ್ನು ಬಿಟ್ಟು ಕೆಎಸ್‍ಆರ್‍ಟಿಸಿಯು ತನ್ನ ಬೇಡಿಕೆಯ 5.2 ಕೋಟಿ ರೂಪಾಯಿ ನಷ್ಟದ ವಿವರವನ್ನು ಇನ್ನೂ ಸಲ್ಲಿಸದಿರುವಾಗ ಅದೇ ಮೊತ್ತವನ್ನು ಮುಟ್ಟುಗೋಲು ಹಾಕಿಕೊಳ್ಳುವುದು ಸರಿಯಲ್ಲ ಎಂದು ಸಾಲಿಡಾಟಿ ಹೇಳಿದೆ. ಕೇರಳದ ಇತಿಹಾಸದಲ್ಲೇ ಮೊಟ್ಟಮೊದಲ ಬಾರಿಗೆ ಹರತಾಳದ ಹಿನ್ನಲೆಯಲ್ಲಿ ಮನೆ ಜಪ್ತಿ, ಆಸ್ತಿ ಜಪ್ತಿ ನಡೆಯುತ್ತಿದೆ. ನ್ಯಾಯಾಲಯದ ಮಧ್ಯಸ್ಥಿಕೆ ತಾರತಮ್ಯದಿಂದ ಕೂಡಿದೆ ಎಂದು ಸಾಲಿಡಾರಿಟಿಯ ಹೇಳಿಕೆ ಆರೋಪಿಸಿದೆ.
ಹರತಾಳ ನೆಪದಲ್ಲಿ ಹಿಂಸಾಚಾರ ಎಸಗಿದ ಭಯೋತ್ಪಾದಕರ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳಲು ನೀಡಲಾಗಿದ್ದ ಕಾಲಾವಕಾಶ ನಿನ್ನೆ ಸಂಜೆ 5 ಗಂಟೆಗೆ ಕೊನೆಗೊಂಡಿದೆ. ಜಪ್ತಿ ಪ್ರಕ್ರಿಯೆಯಲ್ಲಿ ವಿಳಂಬ ಮಾಡುತ್ತಿರುವ ಸರಕಾರವನ್ನು ನ್ಯಾಯಾಲಯ ತೀವ್ರವಾಗಿ ಟೀಕಿಸಿತ್ತು. ಬಳಿಕ ಎರಡು ದಿನದಲ್ಲಿ ಜಪ್ತಿ ಪ್ರಕ್ರಿಯೆ ಪೂರ್ಣಗೊಳಿಸಿ ವರದಿ ನೀಡಲು ಮುಂದಾಯಿತು.
ಪಾಪ್ಯುಲರ್ ಫ್ರಂಟ್ ಭಯೋತ್ಪಾದಕರ ವಿರುದ್ಧ ಜಪ್ತಿ; ಹೈಕೋರ್ಟ್ ಅನ್ನು ಟೀಕಿಸಿದ ಜಮಾ ಅತೆ ಇಸ್ಲಾಮಿಯ ಯುವ ಸಂಘಟನೆ
0
ಜನವರಿ 21, 2023