ತಿರುವನಂತಪುರಂ: ಮಹಿಳಾ ಆಯೋಗ ಮತ್ತು ಮಹಿಳಾ ರಕ್ಷಣಾ ಸಂಘಟನೆಗಳ ಪ್ರತಿಭಟನೆಯ ಬೆನ್ನಲ್ಲೇ ವರದಕ್ಷಿಣೆ ನಿಷೇಧ ನಿಯಮ ಪರಿಷ್ಕರಿಸಲು ಮುಂದಾಗಿದೆ.
ವಧುವಿಗೆ ಪಾಲಕರು ನೀಡುವ ಉಡುಗೊರೆ ಗರಿಷ್ಠ 1 ಲಕ್ಷ ಹಾಗೂ 10 ಪವನ್ ಆಗಿರಬೇಕು ಎಂಬ ಷರತ್ತು ಸದ್ಯದಲ್ಲೇ ಜಾರಿಗೆ ಬರಲಿದೆ. ವಿವಾಹಕ್ಕೂ ಮುನ್ನ ವಧು-ವರರಿಗೆ ಕೌನ್ಸೆಲಿಂಗ್ ನೀಡುವ ಅವಕಾಶವೂ ಇದೆ.
ಈ ಕುರಿತು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ನಿರ್ದೇಶಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಈ ನಿಟ್ಟಿನಲ್ಲಿ ಸ್ಥಳೀಯಾಡಳಿತ ಇಲಾಖೆಯ ಸೂಚನೆಯನ್ನೂ ಕೇಳಲಾಗಿದೆ. ಸಂಬಂಧಪಟ್ಟ ಇಲಾಖೆಗಳೊಂದಿಗೆ ಚರ್ಚಿಸಿದ ನಂತರ ತಿದ್ದುಪಡಿಯ ಕರಡನ್ನು ಇಲಾಖೆಗೆ ಕಳುಹಿಸಲಾಗುವುದು. ಮಹಿಳಾ ಆಯೋಗ ಮಾಡಿರುವ ಕೆಲವು ಶಿಫಾರಸುಗಳನ್ನು ಜಾರಿಗೆ ತರಲು ಕಾಯ್ದೆಗೆ ತಿದ್ದುಪಡಿ ತರಬೇಕಾಗುತ್ತದೆ. ಅವುಗಳನ್ನು ಕೇಂದ್ರ ಸರ್ಕಾರದ ಪರಿಗಣನೆಗೆ ಕಳುಹಿಸಲಾಗುವುದು.
ಕೊಲ್ಲಂ ನಿವಾಸಿ ವಿಸ್ಮಯಾ ಆತ್ಮಹತ್ಯೆ ಬಳಿಕ ಮಹಿಳಾ ಆಯೋಗವು ವರದಕ್ಷಿಣೆ ನಿಷೇಧ ನಿಯಮಗಳನ್ನು ಪರಿಷ್ಕರಿಸಲು ಶಿಫಾರಸುಗಳನ್ನು ನೀಡಿತ್ತು. ಆದರೆ ಸರ್ಕಾರ ಬಿಡುಗಡೆ ಮಾಡಿಲ್ಲ, ಕ್ರಮ ಕೈಗೊಂಡಿಲ್ಲ. ಮಹಿಳಾ ಆಯೋಗ ಮತ್ತು ಮಹಿಳಾ ರಕ್ಷಣಾ ಸಂಘಟನೆಗಳ ಒತ್ತಡದ ಭಾಗವಾಗಿ ಪಿಣರಾಯಿ ಸರ್ಕಾರ ಕ್ರಮ ಕೈಗೊಳ್ಳಲು ಸಿದ್ಧತೆ ನಡೆಸಿದೆ.
ಪ್ರೌಢಶಾಲೆಯಿಂದಲೇ ಪಠ್ಯಪುಸ್ತಕಗಳಲ್ಲಿ ಕೌಟುಂಬಿಕ ದೌರ್ಜನ್ಯ ತಡೆ ಕಾಯಿದೆ, ವರದಕ್ಷಿಣೆ ನಿಷೇಧ ಕಾಯಿದೆ ಹಾಗೂ ಪೋಕ್ಸೊ ಕಾಯ್ದೆಯ ಅಧ್ಯಾಯಗಳನ್ನು ಸೇರಿಸಬೇಕೆಂಬ ಆಯೋಗದ ಶಿಫಾರಸ್ಸು ಜಾರಿಯಾಗಿಲ್ಲ.
ಹೊಸ ಕಾನೂನು ಬರಲಿದೆ: ವಧುವಿಗೆ ಗರಿಷ್ಠ ಒಂದು ಲಕ್ಷ ರೂ. ಮತ್ತು ಹತ್ತು ಪವನ್ ಉಡುಗೊರೆ ಮಾತ್ರ: ವರದಕ್ಷಿಣೆ ನಿಷೇಧ ನಿಯಮ ಪರಿಷ್ಕರಣೆಯತ್ತ
0
ಜನವರಿ 21, 2023