ಕಾಸರಗೋಡು: ಹಿಂದಕ್ಕೆ ಚಲಿಸಿದ ಬಸ್ಸಿನಡಿ ಬಿದ್ದು ಮೂರರ ಹರೆಯದ ಬಾಲಕ ಮೃತಪಟ್ಟಿದ್ದು, ರಕ್ಷಿಸಲು ಮುಂದಾದ ತಾಯಿಗೂ ಗಾಯಗಳುಂಟಾಗಿದೆ. ಚೆರ್ಕಳದಲ್ಲಿ ಅಪಘಾತ ನಡೆದಿದ್ದು, ಪುತ್ತಿಗೆ ಮುಖಾರಿಕಂಡದ ಬಾಡಿಗೆ ಕೊಠಡಿಯಲ್ಲಿ ವಾಸಿಸುವ ಆಶಿಕ್-ಸುಬ್ಯದ ದಂಪತಿ ಪುತ್ರ ಅಬ್ದುಲ್ ವಾಹಿದ್(3)ಮೃತಪಟ್ಟ ಬಾಲಕ. ತಾಯಿ ಸುಬೈದ ಗಾಯಗೊಂಡಿದ್ದು, ಆಸ್ಪತ್ರೆ ದಾಖಲಾಗಿದ್ದಾರೆ.
ಬೇಕಲದಲ್ಲಿ ನಡೆಯುವ ಬೀಚ್‍ಫೆಸ್ಟ್‍ಗೆ ತೆರಳಲು ಪತಿಯ ತಾಯಿ ಮತ್ತು ತನ್ನ ಇಬ್ಬರು ಮಕ್ಕಳೊಂದಿಗೆ ಚೆರ್ಕಳ ಆಗಮಿಸಿದ್ದರು. ಈ ಸಂದರ್ಭ ಹೊಸದುರ್ಗ ತೆರಳುವ ಖಾಸಗಿ ಬಸ್ಸನ್ನು ಹಿಂದಕ್ಕೆ ತೆಗೆಯುವ ಮಧ್ಯೆ ಬಾಲಕ ಚಕ್ರದಡಿ ಸಿಲುಕಿದ್ದನು. ಈತನನ್ನು ರಕ್ಷಿಸುವ ಯತ್ನದಲ್ಲಿ ತಾಯಿ ಸುಬೈದ ಅವರಿಗೂ ಗಾಯಗಳುಂಟಾಗಿದೆ. ಬಸ್ ಚಾಲಕ ರಾಜೇಶ್ ಎಂಬಾತನ ವಿರುದ್ಧ ಕೇಸು ದಾಖಲಿಸಿಕೊಂಡಿರುವ ವಿದ್ಯಾನಗರ ಠಾಣೆ ಪೊಲೀಸರು ಬಸ್ಸನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.
ಹಿಂದಕ್ಕೆ ಚಲಿಸುತ್ತಿದ್ದ ಬಸ್ಸಿನ ಚಕ್ರದಡಿ ಸಿಲುಕಿ ಬಾಲಕ ಮೃತ್ಯು, ರಕ್ಷಿಸಲೆತ್ನಿಸಿದ ತಾಯಿಗೆ ಗಾಯ
0
ಜನವರಿ 02, 2023