ಬದಿಯಡ್ಕ: ಕುಂಬ್ಡಾಜೆ ಗ್ರಾಮ ಸೇವಾ ಗ್ರಂಥಾಲಯ ಏತಡ್ಕ, ಇದರ ಆಶ್ರಯದಲ್ಲಿ ವಿವೇಕಾನಂದ ಜಯಂತಿಯನ್ನು ಆಚರಿಸಲಾಯಿತು. ಸುಬ್ರಹ್ಮಣ್ಯ ವೈ.ವಿ. ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಕುಮಾರಿ ಶ್ರೀನೀಕಾ ಒಡಂಗಲ್ಲು ಭಾಗವಹಿಸಿ, ವಿವೇಕಾನಂದರ ತತ್ವ ಆದರ್ಶಗಳನ್ನು ಮೈಗೂಡಿಸಿಕೊಳ್ಳಬೇಕು, ಗುರಿ ಮುಟ್ಟುವ ತನಕ ಶ್ರದ್ದೆಯಿಂದ ಕೆಲಸ ಮಾಡಬೇಕು ಎಂದು ಹೇಳಿದಳು.
ಕೆ.ನರಸಿಂಹ ಭಟ್ ಅವರು ವಿವೇಕಾನಂದರ ಕುರಿತು ಬರೆದ ಮುಕ್ತಕ ವಾಚಿಸಿದರು. ಆಶಾ ವಿ. ಪ್ರಾರ್ಥನೆ ಮಾಡಿದರು. ಕಾರ್ಯದರ್ಶಿ ವೇಣುಗೋಪಾಲ್ ಕೆ ಸ್ವಾಗತಿಸಿ, ವೈ.ಕೆ ಗಣಪತಿ ಭಟ್ ವಂದಿಸಿದರು.
ಏತಡ್ಕದಲ್ಲಿ ವಿವೇಕಾನಂದ ಜಯಂತಿ ಆಚರಣೆ
0
ಜನವರಿ 15, 2023
Tags