ಕಾಸರಗೋಡು: ನವಕೇರಳ ಕ್ರಿಯಾ ಯೋಜನೆ-ಎರಡರ ಅನ್ವಯ ಜಿಲ್ಲಾ ಶುಚಿತ್ವ ಮಿಷನ್, ನವಕೇರಳ ಮಿಷನ್ ಮತ್ತು ಕಾಞಂಗಾಡು ನಗರಸಭೆ ಜಂಟಿಯಾಗಿ ತ್ಯಾಜ್ಯ ಮುಕ್ತ ಕೇರಳ ಅಭಿಯಾನ ಕಾರ್ಯಕ್ರಮವನ್ನು ನಗರಸಭೆ ವ್ಯಪ್ತಿಯ ರೈಲ್ವೆ ನಿಲ್ದಾಣ ವಠಾರದಲ್ಲಿ ಪ್ರಾರಂಭಿಸಲಾಯಿತು.
ನಗರಸಭೆ ಅಧ್ಯಕ್ಷ ಕೆ.ವಿ. ಸುಜಾತಾ ಸಮಾರಂಭ ಉದ್ಘಾಟಿಸಿ ಮಾತನಾಡಿ, ಮುಂದಿನ ದಿನಗಳಲ್ಲಿ ನಗರಸಭಾ ವಾರ್ಡ್‍ಗಳಲ್ಲಿಯೂ ಸ್ವಚ್ಛತಾ ಕಾರ್ಯ ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು. ನಗರಸಭಾ ಉಪಾಧ್ಯಕ್ಷ ಬಿಲ್ಟೆಕ್ ಅಬ್ದುಲ್ಲ ಅಧ್ಯಕ್ಷತೆ ವಹಿಸಿದ್ದರು. ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷೆ ಕೆ.ವಿ.ಸರಸ್ವತಿ, ಅಭಿವೃದ್ಧಿ ಸ್ಥಾಯಿ ಸಮಿತಿ ಅಧ್ಯಕ್ಷೆ ಕೆ.ಲತಾ, ಲೋಕೋಪಯೋಗಿ ಸ್ಥಾಯಿ ಸಮಿತಿ ಅಧ್ಯಕ್ಷ ಕೆ.ಅನೀಶನ್, ನಗರಸಭಾ ಸದಸ್ಯರಾದ ಟಿ.ವಿ.ಸುಜಿತ್ ಕುಮಾರ್,ಪಿ.ವಿ.ಮೋಹನನ್, ನಗರಸಭೆ ಕಾರ್ಯದರ್ಶಿ ಪಿ.ಶ್ರೀಜಿತ್, ಜೆಎಚ್‍ಐಗಳಾದ ವಿ.ವಿ.ಬೀನಾ, ಬಿಜು ಆನೂರ್, ಶಿಜು ಉಪಸ್ಥಿತರಿದ್ದರು. ಸ್ವಚ್ಛತಾ ಕಾರ್ಯದಲ್ಲಿ ಹಸಿರು ಕ್ರಿಯಾ ಸೇನೆಯ ಸದಸ್ಯರು, ಸ್ವಚ್ಛತಾ ಸಮಿತಿ ಕಾರ್ಯಕರ್ತರು, ಸ್ವಯಂ ಸೇವಕರು ಪಾಲ್ಗೊಂಡಿದ್ದರು.
ಕಾಞಂಗಾಡು ನಗರಸಭೆಯಲ್ಲಿ ತ್ಯಾಜ್ಯಮುಕ್ತ ಕೇರಳ-ಕಸ ಸಂಗ್ರಹ ಅಭಿಯಾನಕ್ಕೆ ಚಾಲನೆ
0
ಜನವರಿ 30, 2023
Tags