ಮಕ್ಕಳಿಗೆ ಸ್ವರ್ಣಪ್ರಾಶನನ ನೀಡಲಾಗುವುದು. ಪ್ರತೀ ತಿಂಗಳು ಪುಷ್ಯಾ ನಕ್ಷತ್ರದ ದಿನದಂದು ಮಕ್ಕಳಿಗೆ ಸ್ವರ್ಣಪ್ರಾಶನ ನೀಡಲಾಗುವುದು. ಮಕ್ಕಳಿಗೆಸ್ವರ್ಣಪ್ರಾಶನ ನೀಡುವುದರಿಂದ ತುಂಬಾನೇ ಆರೋಗ್ಯಕರ ಪ್ರಯೋಜನಗಳಿವೆ.
2023ರಲ್ಲಿ ಸ್ವರ್ಣಪ್ರಾಶನದ ದಿನಾಂಕಗಳು ಹಾಗೂ ಇದನ್ನು ಪುಷ್ಯ ನಕ್ಷತ್ರದ ದಿನದಂದೇ ನೀಡಬೇಕು ಏಕೆ, ಇದನ್ನು ನೀಡುವುದರಿಂದ ಮಗುವಿಗೆ ದೊರೆಯುವ ಪ್ರಯೋಜನಗಳೇನು ಎಂದು ನೋಡೋಣ:
ಸ್ವರ್ಣಪ್ರಾಶ ದಿನಾಂಕ ಮುಗಿದಿದೆ (ಜನವರಿ 8ಕ್ಕೆ ಇತ್ತು, ಈ ತಿಂಗಳು ಕೊಡದಿದ್ದರೆ ಮುಂದಿನ ತಿಂಗಳಿನಿಂದ ನೀಡಬಹುದು)
ಪುಷ್ಯಾ ನಕ್ಷತ್ರ ಪ್ರಾರಂಭ ಮತ್ತು ಮುಕ್ತಾಯ: ಬೆಳಗ್ಗೆ 9ರಿಂದ ಫೆಬ್ರವರಿ, 5 ಭಾನುವಾರ 12:13ಕ್ಕೆ ಮುಕ್ತಾಯ
ಮಾರ್ಚ್ 4, ಶುಕ್ರವಾರ
ಪುಷ್ಯಾ ನಕ್ಷತ್ರ ಪ್ರಾರಂಭ ಮತ್ತು ಮುಕ್ತಾಯ: ಮಾರ್ಚ್ 3 ಸಂಜೆ 03:43ರಿಂದ ಮಾರ್ಚ್ 4, ಸಂಜೆ 06:41ರವರೆಗೆ ಇರಲಿದೆ.
ಮಾರ್ಚ್ 31, ಗುರುವಾರ: ಮಾರ್ಚ್ 30 ರಾತ್ರಿ 10:59ಕ್ಕೆ ಪ್ರಾರಂಭವಾಗಿ ಮಾರ್ಚ್ 31 ಮಧ್ಯರಾತ್ರಿಗೆ ಮುಕ್ತಾಯ
ಏಪ್ರಿಲ್ 27, ಗುರುವಾರ:
ಪುಷ್ಯಾ ನಕ್ಷತ್ರ ಪ್ರಾರಂಭ ಮತ್ತು ಮುಕ್ತಾಯ: ಬೆಳಗ್ಗೆ 7 ಗಂಟೆಯಿಂದ ಏಪ್ರಿಲ್ 28 ಬೆಳಗ್ಗೆ 9:53ರವರೆಗೆ
ಮೇ 25, ಬುಧವಾರ: ಮೇ 24 ಸಂಜೆ 03:06ಕ್ಕೆ ಪ್ರಾರಂಭವಾಗಿ ಮೇ 25ರಂದು ಸಂಜೆ 05:54ಕ್ಕೆ ಮುಕ್ತಾಯ
ಜೂನ್ 20, ಮಂಗಳವಾರ
ಪುಷ್ಯಾ ನಕ್ಷತ್ರ ಪ್ರಾರಂಭ ಮತ್ತು ಮುಕ್ತಾಯ: ಜೂನ್ 20 ರಾತ್ರಿ 10:37ಕ್ಕೆ ಪ್ರಾರಂಭವಾಗಿ ಜೂನ್ 22 ಬೆಳಗ್ಗೆ 01: 21ಕ್ಕೆ ಮುಕ್ತಾಯ.
ಜುಲೈ 18, ಮಂಗಳವಾರ
ಪುಷ್ಯಾ ನಕ್ಷತ್ರ ಪ್ರಾರಂಭ ಮತ್ತು ಮುಕ್ತಾಯ: ಜುಲೈ 18 ಬೆಳಗ್ಗೆ 05:11ರಿಂದ ಪ್ರಾರಂಭವಾಗಿ ಜಲೈ 19 07:58ಕ್ಕೆ ಮುಕ್ತಾಯ
ಆಗಸ್ಟ್ 14, ಸೋಮವಾರ
ಪುಷ್ಯಾ ನಕ್ಷತ್ರ ಪ್ರಾರಂಭ ಮತ್ತು ಮುಕ್ತಾಯ: ಆಗಸ್ಟ್ 14 ಬೆಳಗ್ಗೆ 11:07ರಿಂದ ಪ್ರಾರಂಭವಾಗಿ ಆಗಸ್ಟ್ 15 ಮಧ್ಯಾಹ್ನ 01:59ಕ್ಕೆ ಮುಕ್ತಾಯ
ಸೆಪ್ಟೆಂಬರ್ 10, ಭಾನುವಾರ
ಪುಷ್ಯಾ ನಕ್ಷತ್ರ ಪ್ರಾರಂಭ ಮತ್ತು ಮುಕ್ತಾಯ: ಸೆಪ್ಟೆಂಬರ್ ಸಂಜೆ 05:06ರಿಂದ ಪ್ರಾರಂಭವಾಗಿ ಸೆಪ್ಟೆಂಬರ್ 11 ರಾತ್ರಿ 08:11ಕ್ಕೆ ಮುಕ್ತಾಯ
ಅಕ್ಟೋಬರ್ 8, ಶನಿವಾರ
ಪುಷ್ಯಾ ನಕ್ಷತ್ರ ಪ್ರಾರಂಭ ಮತ್ತು ಮುಕ್ತಾಯ: ಅಕ್ಟೋಬರ್ 7 ರಾತ್ರಿ 11:57ಕ್ಕೆ ಪ್ರಾರಂಭವಾಗಿ ಅಕ್ಟೋಬರ್ 09 ಬೆಳಗ್ಗೆ 2:45ಕ್ಕೆ ಮುಕ್ತಾಯ
ನವೆಂಬರ್ 4, ಶನಿವಾರ
ಪುಷ್ಯಾ ನಕ್ಷತ್ರ ಪ್ರಾರಂಭ ಮತ್ತು ಮುಕ್ತಾಯ: ಬೆಳಗ್ಗೆ 11:57ಕ್ಕೆ ಪ್ರಾರಂಭವಾಗಿ ನವೆಂಬರ್ 05 ಬೆಳಗ್ಗೆ 10:29ರವರೆಗೆ ಇರಲಿದೆ
ಡಿಸೆಂಬರ್ 2, ಶುಕ್ರವಾರ:
ಡಿಸೆಮಬರ್ 1 ಸಂಜೆ 04:40ಕ್ಕೆ ಪ್ರಾರಂಭವಾಗಿ ಡೆಸೆಮಬರ್ 02, ಸಂಜೆ 06:54ಕ್ಕೆ ಮುಕ್ತಾಯ
ಡಿಸೆಂಬರ್ 29, ಶುಕ್ರವಾರ
ಡಿಸೆಂಬರ್ 29 ಬೆಳಗ್ಗೆ 01:05ಕ್ಕೆ ಪ್ರಾರಂಭವಾಗಿ ಡಿಸೆಂಬರ್ 30 ಬೆಳಗ್ಗೆ 03:10ಕ್ಕೆ ಮುಕ್ತಾಯ.
ಸ್ವರ್ಣಪ್ರಾಶನ ಎಂದರೇನು?
ಗಿಡಮೂಲಿಕೆಗಳಿಂದ ತಯಾರಿಸಿದ ಔಷಧೀಯ ದ್ರವವನ್ನು ಮಗುವಿಗೆ ನೀಡುವುದು. ಇದಕ್ಕೆಸ್ವರ್ಣಪ್ರಾಶನ, ಸ್ವರ್ಣ ಬಿಂದು ಎಂದು ಕರೆಯಲಾಗುವುದು.
ಇದು ಮಗುವಿನ ರೋಗ ನಿರೋಧಕ ಶಕ್ತಿ ಹೆಚ್ಚಲು ಹಾಗೂ ಬುದ್ಧಿ ಶಕ್ತಿಹೆಚ್ಚಿಸಲು ತುಂಬಾನೇ ಸಹಕಾರಿ. ಈ ಸ್ವರ್ಣಬಿಂದು ಕೊಡುವುದರಿಂದ ಮಕ್ಕಳು ಆಗಾಗ ಕಾಯಿಲೆ ಬೀಳುವುದನ್ನು ತಡೆಗಟ್ಟಬಹುದು ಜೊತೆಗೆ ಮಗುವಿನಲ್ಲಿ ಕಲಿಕಾ ಸಾಮರ್ಥ್ಯ ಹೆಚ್ಚಲು ಇದು ಸಹಕಾರಿಯಾಗಿದೆ.
ಸ್ವರ್ಣಪ್ರಾಶನ ಯಾವಾಗ ನೀಡಬೇಕು
ಪ್ರತಿದಿನ ನೀಡುವುದಾದರೆ ಕಡಿಮೆಯೆಂದರೆ ಒಮದು ತಿಂಗಳು ಅಥವಾ 3-6 ತಿಂಗಳವರೆಗೆ ನೀಡಬಹುದು. ಇನ್ನು ಇದನ್ನು ತಿಂಗಳಿಗೊಮ್ಮೆ ನೀಡುವುದಾದರೆ 30-90 ತಿಂಗಳು ನೀಡಬೇಕು. ಪುಷ್ಯಾ ನಕ್ಷತ್ರ ಪ್ರತೀ 27 ದಿನಕ್ಕೊಮ್ಮೆ ಬರುವುದು.
ಯಾವಾಗ ಸ್ವರ್ಣಬಿಂದು ನೀಡಬೇಕು
ಪುಷ್ಯಾ ನಕ್ಷತ್ರದ ದಿನದಂದು ಬೆಳಗ್ಗೆ ಖಾಲಿ ಹೊಟ್ಟೆಗೆ ನೀಡಬೇಕು.
ಎಷ್ಟು ವರ್ಷದವರೆಗೆ ನೀಡಬಹುದು
ಹುಟ್ಟಿದ ಮಗುವಿನಿಮದ ಹಿಡಿದು 16 ವರ್ಷದವರೆಗೆ ನೀಡಬಹುದು
ದಿನಾ ನೀಡುವುದಾದರೆ ಅನುದಿನ ಸುವರ್ಣ ಪ್ರಾಶ ನೀಡಲಾಗುವುದು.
ಪುಷ್ಯಾ ನಕ್ಷತ್ರದಂದು ನೀಡುವುದಾದರೆಸ್ವರ್ಣಪ್ರಾಶನನ ಅಥವಾ ಸ್ವರ್ಣ ಬಿಂದು ನೀಡಲಾಗುವುದು.
ಸ್ವರ್ಣಪ್ರಾಶನ ಪುಷ್ಯಾ ನಕ್ಷತ್ರದಂದು ನೀಡಲು ಕಾರಣವೇನು?
ಪುಷ್ಯಾ ನಕ್ಷತ್ರ 27 ದಿನಕ್ಕೊಮ್ಮೆ ಬರುತ್ತದೆ, ಅಲ್ಲದೆ ಈ ದಿನದಂದು ಗಿಡಮೂಲಿಕೆಗಳಲ್ಲಿ ಶಕ್ತಿ ಅಧಿಕವಿರುತ್ತದೆ ಎಂದು ಹೇಳಲಾಗುವುದು. ಆದ್ದರಿಂದ ಸ್ವರ್ಣಪ್ರಾಶನ ಪುಷ್ಯಾನಕ್ಷತ್ರದಂದು ನೀಡಲಾಗುವುದು.
ಸ್ವರ್ಣಪ್ರಾಶನ ಎಷ್ಟು ನೀಡಬೇಕು?
ಸ್ವರ್ಣಪ್ರಾಶನ ಎರಡು ಹನಿ ಹಾಕಿದರೆ ಸಾಕು, ಇದನ್ನು ಕ್ಲಿನಿಕ್‌ಗೆ (ಆಯುರ್ವೇದ) ಹೋಗಿ ಹಾಕಿಸಬಹುದು ಅಥವಾಸ್ವರ್ಣಪ್ರಾಶನ ಡಬ್ಬ ಖರೀದಿಸಿ ಒಂದು ವರ್ಷದವರೆಗೆ ಬಳಸಬಹುದು.
ಸ್ವರ್ಣಪ್ರಾಶನ ನೀಡುವುದರಿಂದ ಮಗುವಿಗೆ ದೊರೆಯುವ ಪ್ರಯೋಜನಗಳು
* ಶೀತ, ಕೆಮ್ಮು ಈ ಬಗೆಯ ಸಮಸ್ಯೆ ತಡೆಗಟ್ಟುತ್ತದೆ, ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ
* ಜ್ಞಾಪಕ ಶಕ್ತಿ ಹೆಚ್ಚಿಸುತ್ತದೆ, ಸ್ಪಷ್ಟವಾಗಿ ಮಾತನಾಡುತ್ತಾರೆ, ಬುದ್ಧಿಶಕ್ತಿ ಹೆಚ್ಚುವುದು
* ತ್ವಚೆ ಕಾಂತಿ ಹೆಚ್ಚುವುದು
* ಜೀರ್ಣಕ್ರಿಯೆಗೆ ಒಳ್ಲೆಯದು, ಕಿವಿ ಹಾಗೂ ಕಣ್ಣಿನ ಆರೋಗ್ಯಕ್ಕೆ ಒಳ್ಳೆಯದು
* ಮಕ್ಕಳು ತುಂಬಾ ಹಠ ಹಿಡಿಯುವುದು, ಹಿಂಜರಿಕೆ, ಹೈಪರ್‌ಆಕ್ಟಿವ್ ಇವೆಲ್ಲಾ ಇರಲ್ಲ
ಸ್ವರ್ಣಪ್ರಾಶ ಮಕ್ಕಳಿಗೆ ನೀಡುವುದು ಸುರಕ್ಷಿತವೇ?
The National Center for Biotechnology Information ಮಕ್ಕಳಿಗೆಸ್ವರ್ಣಪ್ರಾಶನ ನೀಡುವುದು ಸುರಕ್ಷಿತ ಎಂದು ಹೇಳಿದೆ.
ಮಕ್ಕಳಿಗೆ ಕೆಮ್ಮು, ಶೀತ, ಜ್ವರವಿದ್ದಾಗ ಸ್ವರ್ಣಪ್ರಾಶನ ನೀಡಬೇಡಿ.