ಕಾಸರಗೋಡು: ಜಿಲ್ಲಾ ಮಟ್ಟದ ಜಂತುಹುಳು ನಿವಾರಣಾ ದಿನವನ್ನು ಚೆರ್ಕಳ ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಶಾಸಕ ಎನ್.ಎ.ನೆಲ್ಲಿಕುನ್ನು ಉದ್ಘಾಟಿಸಿದರು. ಚೆಂಗಳ ಗ್ರಾಮ ಪಂಚಾಯತ್ ಅಧ್ಯಕ್ಷ ಖಾದರ್ ಬದರಿಯಾ ಅಧ್ಯಕ್ಷತೆ ವಹಿಸಿದ್ದರು.
ಸಮಾರಂಭ ಉದ್ಘಾಟಿಸಿ ಶಾಸಕ ಎನ್.ಎ ನೆಲ್ಲಿಕುನ್ನು ಮಾತನಾಡಿ, ಮಣ್ಣಿನಿಂದ ಹರಡುವ ಜಂತುಹುಳು ಮಕ್ಕಳಲ್ಲಿ ಹೆಚ್ಚಾಗಿ ಕಾಡುತ್ತಿದ್ದು, ಇದು ಸಾರ್ವಜನಿಕ ಆರೋಗ್ಯ ಸಮಸ್ಯೆಯಾಗಿಯೇ ಉಳಿದಿದೆ. ಆರೋಗ್ಯ ಇಲಾಖೆ ಕೈಗೊಂಡಿರುವ ಮುಂಜಾಗ್ರತಾ ಕ್ರಮಗಳಿಂದ ಪೆÇೀಲಿಯೊ, ದಡಾರ, ರುಬೆಲ್ಲಾ, ಕ್ಷಯ ಮುಂತಾದ ಕಾಯಿಲೆಗಳಿಂದ ಜನರನ್ನು ಪಾರು ಮಾಡಲು ಸಾಧ್ಯವಾಗಿದೆ. ಲಸಿಕೆ ವಿರುದ್ಧ ಹರಡುತ್ತಿರುವ ಸುಳ್ಳುಪ್ರಚಾರಕ್ಕೆ ಜನತೆ ಕಿವಿಗೊಡಬಾರದು ಎಂದು ತಿಳಿಸಿದರು.
ಜಿಲ್ಲಾ ಟಿಬಿ ಮತ್ತು ಏಡ್ಸ್ ನಿಯಂತ್ರಣಾಧಿಕಾರಿ ಎ.ಮುರಳೀಧರ ನಲ್ಲೂರಾಯ, ಜಿಲ್ಲಾ ಮಾಹಿತಿ ಅಧಿಕಾರಿ ಎಂ.ಮಧುಸೂಧನನ್, ಮುಳಿಯಾರಿನ ಸಾಮಾಜಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಶಮೀಮಾ ತನ್ವೀರ್, ಚೆಂಗಳ ಪಂಚಾಯಿತಿ ಸ್ಥಾಯಿ ಸಮಿತಿ ಆರೋಗ್ಯ ಅಧ್ಯಕ್ಷ ಸಲೀಂ ಎಡನೀರು, ಜಿಲ್ಲಾ ಎಂಸಿಎಚ್ ಅಧಿಕಾರಿ ಎನ್.ಜಿ ತಂಗಮಣಿ, ಗ್ರಾಮ ಪಂಚಾಯಿತಿ ಸದಸ್ಯೆ ಹಸೀನಾ ರಶೀದಿ, ಜಿಎಚ್‍ಎಸ್‍ಎಸ್ ಪ್ರಾಂಶುಪಾಲ ಟಿ.ವಿ ವಿನೋದ್ ಕುಮಾರ್, ಮುಖ್ಯ ಶಿಕ್ಷಕ ಎಂ.ಎಂ. ಅಬ್ದುಲ್ ಖಾದರ್, ಪಿಟಿಎ ಅಧ್ಯಕ್ಷ ಶುಕೂರ್ ಚೆರ್ಕಳ, ಮುಂತಾದವರು ಉಪಸ್ಥಿತರಿದ್ದರು. ಆರ್ ಸಿಎಚ್ ಜಿಲ್ಲಾ ಅಧಿಕಾರಿ ಡಾ.ಟಿ.ಪಿ. ಅಮೀನ ಸ್ವಾಗತಿಸಿದರು. ಚೆಂಗಳ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಕೆವಿನ್ ವಾಟ್ಸನ್ ವಂದಿಸಿದರು.
ಶಾಲೆ, ಅಂಗನವಾಡಿಗಳಲ್ಲಿ 1 ರಿಂದ 19 ವರ್ಷದ ಮಕ್ಕಳಿಗೆ ಅಲ್ಬೆಂಡಜೋಲ್ ಮಾತ್ರೆಗಳನ್ನು ವಿತರಿಸಲಾಗುತ್ತದೆ. ಜಿಲ್ಲೆಯಲ್ಲಿ 1 ರಿಂದ 19 ವರ್ಷದೊಳಗಿನ 387185 ಮಕ್ಕಳಿಗೆ ಜ.17ರಂದು ಜಂತುಹುಳು ನಿವಾರಣಾ ಮಾತ್ರೆ (ಅಲ್ಬಂಡಜೋಲ್)ವಿತರಿಸಲು ಯೋಜನೆಯಿರಿಸಲಾಗಿದೆ. ಕಾಸರಗೋಡು ಜಿಲ್ಲಾಡಳಿತ, ಆರೋಗ್ಯ, ಸ್ಥಳೀಯಾಡಳಿತ, ಶಿಕ್ಷಣ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗಳು, ಸಾರ್ವಜನಿಕ ಪ್ರತಿನಿಧಿಗಳು ಮತ್ತು ಸ್ವಯಂಸೇವಾ ಸಂಸ್ಥೆಗಳ ಸಹಯೋಗದಲ್ಲಿ ಜಂತುಹುಳು ನಿವಾರಣಾ ದಿನ ಚಟುವಟಿಕೆ ನಡೆಯುತ್ತಿದೆ.
ಲಸಿಕೆ ವಿರುದ್ಧದ ಸುಳ್ಳುಪ್ರಚಾರಕ್ಕೆ ಜನತೆ ಕಿವಿಗೊಡಬಾರದು: ಎನ್.ಎ.ನೆಲ್ಲಿಕುನ್ನು ಶಾಸಕ
0
ಜನವರಿ 18, 2023
Tags