ಕಾಸರಗೋಡು: ಜನರಲ್ ಆಸ್ಪತ್ರೆಯ ಅಮ್ಮತೊಟ್ಟಿಲು ಚಟುವಟಿಕೆರಹಿತವಗಿದ್ದು, ಈ ನಿಟ್ಟಿನಲ್ಲಿ ಮಗುವನ್ನು ಸ್ಪತ್ರೆಗೆ ದಾಖಲಿಸಲಿಚ್ಛಿಸುವವರು ತುರ್ತು ನಿಗಾ ಘಟಕದ ದೂರವಾಣಿ ಸಂಖ್ಯೆಗೆ (04994 222999)ಕರೆಮಾಡಿ, ಮಗುವನ್ನು ಹಸ್ತಾಂತರಿಸಬಹುದಾಗಿದೆ. ಈ ಸಂಖ್ಯೆಗೆ ಕರೆಮಾಡಿದಲ್ಲಿ ಮಗುವನ್ನು ಎಲ್ಲಿಗೆ ಕರೆದೊಯ್ಯಬೇಕು ಎಂಬ ಸೂಚನೆಗಳನ್ನು ನೀಡಲಾಗುವುದು, ಜತೆಗೆ ಗೌಪ್ಯತೆಯನ್ನು ಕಾಪಾಡಲಾಗುತ್ತದೆ ಎಂದು ಕಾಸರಗೋಡು ಸರ್ಕಾರಿ ಜನರಲ್ ಆಸ್ಪತ್ರೆಯ ಅಧೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಜನರಲ್ ಆಸ್ಪತ್ರೆಯ ಸನಿಹ ಚಟುವಟಿಕೆ ನಡೆಸುತ್ತಿದ್ದ 'ಅಮ್ಮ ತೊಟ್ಟಿಲು' ಚಟುವಟಿಕೆ ಸ್ಥಗಿತಗೊಂಡ ಪರಿಣಾಮ ಕಟ್ಟಡಕ್ಕೆ ಬೀಗ ಜಡಿಯಲಾದ ಬಗ್ಗೆ 'ವಿಜಯವಾಣಿ'ವಿಶೇಷ ವರದಿ ಪ್ರಕಟಿಸಿತ್ತು. ಅನೈತಿಕ ಸಂಪರ್ಕದಿಂದ ಹುಟ್ಟಿದ ಅಥವಾ ತಮಗೆ ಬೇಡವಾದ ಮಗುವನ್ನು ಹಾದಿಬದಿ ಎಸೆಯುವುದನ್ನು ತಪ್ಪಿಸಲು ರಾಜ್ಯ ಮಕ್ಕಳ ಕಲ್ಯಾಣ ಸಮಿತಿ ವತಿಯಿಂದ ಈ ವಿಶೇಷ ಅಮ್ಮ ತೊಟ್ಟಿಲು ಯೋಜನೆಯನ್ನು ಹಲವು ವರ್ಷಗಳ ಹಿಂದೆ ಸ್ಥಾಪಿಸಲಾಗಿತ್ತು. ಅಮ್ಮ ತೊಟ್ಟಿಲು ಮೂಲಕ ಈಗಾಗಲೇ ಹಲವಾರು ಮಕ್ಕಳು ಆಸ್ಪತ್ರೆಗೆ ಸೇರ್ಪಡೆಗೊಂಡಿದೆ. ಏಕಾಏಕಿ ಅಮ್ಮ ತೊಟ್ಟಿಲು ಸೇವೆ ಸ್ಥಗಿತಗೊಳಿಸಲಾಗಿತ್ತು. ಅಮ್ಮ ತೊಟ್ಟಿಲು ಸೇವೆಯಲ್ಲಿನ ತಾಂತ್ರಿಕ ಅಡಚಣೆ ಹಿನ್ನೆಲೆಯಲ್ಲಿ ತಾತ್ಕಾಲಿಕವಾಗಿ ಮುಚ್ಚಲಾಗಿದೆ ಎಂದು ಆಸ್ಪತ್ರೆ ಅಧಿಕಾರಿಗಳು ತಿಳಿಸಿದ್ದರು.
ಅಮ್ಮ ತೊಟ್ಟಿಲು ಚಟುವಟಿಕೆ ಸ್ಥಗಿತ-ಬದಲಿ ನಂಬರ್‍ಗೆ ಕರೆಮಾಡಲು ಮನವಿ
0
January 12, 2023
Tags