ಬದಿಯಡ್ಕ: ಮಾನ್ಯ ಶ್ರೀ ಅಯ್ಯಪ್ಪ ಭಜನಾ ಮಂದಿರದ 41ನೇ ವಾರ್ಷಿಕೋತ್ಸವ ಹಾಗೂ ಶ್ರೀ ಅಯ್ಯಪ್ಪನ್ ತಿರುವಿಳಕ್ ಮಹೋತ್ಸವದ ಅಂಗವಾಗಿ ವೈಷ್ಣವಿ ನಾಟ್ಯಾಲಯ ಪುತ್ತೂರು ಇವರಿಂದ ಶಬರಿಮಲೆ ಸ್ವಾಮಿ ಅಯ್ಯಪ್ಪ ನೃತ್ಯ ರೂಪಕ ಹಾಗೂ ಭರತನಾಟ್ಯ ಕಾರ್ಯಕ್ರಮ ಜರಗಿತು.
ವೈಷ್ಣವಿ ನಾಟ್ಯಾಲಯದ ನಿರ್ದೇಶಕಿ ವಿದುಷಿ ಯೋಗೀಶ್ವರಿ ಜಯಪ್ರಕಾಶ್ ಪುತ್ತೂರು ಇವರ ನೃತ್ಯ ಸಂಯೋಜನೆ ಹಾಗೂ ಪರಿಕಲ್ಪನೆಯಲ್ಲಿ 9ನೇ ಪ್ರದರ್ಶನ ಕಂಡ ನೃತ್ಯ ರೂಪಕಕ್ಕೆ ಅಶ್ವಿನಿ ಕೋಡಿಬೈಲ್ ಸಾಹಿತ್ಯ ರಚಿಸಿದ್ದರು. ಸಂಗೀತ, ರಾಗ ಸಂಯೋಜನೆ ಹಾಗೂ ಹಾಡುಗಾರಿಕೆಯನ್ನು ರಾಷ್ಟ್ರ ಪ್ರಶಸ್ತಿ ವಿಜೇತ ವಿದ್ವಾನ್ ವೆಳ್ಳಿಕೋತ್ ವಿಷ್ಣು ಭಟ್, ವಸಂತಕುಮಾರ್ ಗೋಸಾಡ, ಮೃದಂಗದಲ್ಲಿ ವಿದ್ವಾನ್ ಗೀತೆಶ್ ಕುಮಾರ್ ನೀಲೇಶ್ವರ, ಕೊಳಲು ವಿದ್ವಾನ್ ರಾಜಗೋಪಾಲ ಕಾಂಞಗಾಡು, ಕೀಬೋರ್ಡ್ ಪುರುಷೋತ್ತಮ ಕೊಪ್ಪಲ್ ಹಾಗೂ ರಿದಂನಲ್ಲಿ ರವಿಕಾಂತ್ ಮಾನ್ಯ ಸಹಕರಿಸಿದ್ದರು. ಫ್ರೆಂಡ್ಸ್ ಮಾನ್ಯ ಪ್ರಾಯೋಜಕತ್ವದಲ್ಲಿ ಕಾರ್ಯಕ್ರಮ ಜನಮನ್ನಣೆಯೊಂದಿಗೆ ನೆರವೇರಿತು. ಪ್ರಾಯೋಜಕರ ವತಿಯಿಂದ ನೃತ್ಯ ನಿರ್ದೇಶಕಿ ವಿದುಷಿ ಯೋಗೀಶ್ವರಿ ಜಯಪ್ರಕಾಶ್ ಇವರನ್ನು ಗೌರವಿಸಲಾಯಿತು.
ಮಾನ್ಯದಲ್ಲಿ ಪ್ರದರ್ಶನಗೊಂಡ ವೈಷ್ಣವಿ ನಾಟ್ಯಾಲಯದ "ಶಬರಿಮಲೆ ಸ್ವಾಮಿ ಅಯ್ಯಪ್ಪ" ನೃತ್ಯ ರೂಪಕ
0
ಜನವರಿ 02, 2023