ಕಾಸರಗೋಡು: ರಾಮಪ್ರಸಾದ್ ಕಾಸರಗೋಡು 60-ಅಭಿನಂದನೆ ಸಮಿತಿ ವತಿಯಿಂದ ಜ.20ರಂದು ತಾಳಿಪಡ್ಪು ಹೋಟೆಲ್ ಉಡುಪಿ ಗಾರ್ಡನ್ ನ ಮಥುರಾ ಸಭಾಂಗಣದಲ್ಲಿ ನಡೆಯಲಿರುವ ದಿನ ಪೂರ್ತಿ ನಡೆಯಲಿರುವ 'ಯಕ್ಷಗಾಯನ-ವಚನೋತ್ಸವ'ಕಾರ್ಯಕ್ರಮದ ಸಿದ್ಧತಾ ಸಭೆ ಮಥುರಾ ಸಭಾಂಗಣದಲ್ಲಿ ನಡೆಯಿತು. ಈ ಸಂದರ್ಭ ವಿವಿಧ ವಿಚಾರಗಳ ಚರ್ಚೆ ನಡೆಯಿತು. ಈ ಸಂದರ್ಭ ಇತ್ತೀಚೆಗೆ ಕಾಸರಗೋಡು ಶ್ರೀ ಮಲ್ಲಿಕಾರ್ಜುನ ದೇವಾಲಯ ಆವರಣದಲ್ಲಿ ನಡೆದ ಸಾರ್ವಜನಿಕ ಅಭಿನಂದನೆ-ಕಾಸರಗೋಡು ಯಕ್ಷೆuಟಿಜeಜಿiಟಿeಜತ್ಸವ ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದ ಮಹನೀಯರನ್ನು ಅಭಿನಂದಿಸುವ ಕಾರ್ಯಕ್ರಮ ನಡೆಯಿತು.
ಸಮಿತಿ ಅಧ್ಯಕ್ಷ ಕೆ.ಎನ್.ವೆಂಕಟ್ರಮಣ ಹೊಳ್ಳ ಅಧ್ಯಕ್ಷತೆ ವಹಿಸಿದ್ದರು. ಪ್ರಧಾನ ಕಾರ್ಯದರ್ಶಿ ಶಿವರಾಮ ಕಾಸರಗೋಡು, ರಾಮಪ್ರಸಾದ್ ಕಾಸರಗೋಡು, ಪತ್ರಕರ್ತ ವೀಜಿ. ಕಾಸರಗೋಡು, ಹೋಟೆಲ್ ಪ್ರಬಂಧಕ ಭರತ್ ಶೆಟ್ಟಿ ಉಪಸ್ಥಿತರಿದ್ದರು.
ಕಾಸರಗೋಡಿನಲ್ಲಿ ಯಕ್ಷಗಾಯನ-ವಚನೋತ್ಸವ-ಸಿದ್ಧತಾ ಸಭೆ
0
ಜನವರಿ 08, 2023