ಕಾಸರಗೋಡು: ರೈಲ್ವೆ ಟಿಕೆಟ್ ಕಾಯ್ದಿರಿಸುವಿಕೆಗೆ ಜಿಲ್ಲಾಧಿಕಾರಿ ಕಛೇರಿಯಲ್ಲೂ ಸಔಕರ್ಯ ಏರ್ಪಡಿಸಲಾಗಿದೆ. ಜಿಲ್ಲಾಧಿಕಾರಿ ಕಚೇರಿಯ ಮುಖ್ಯ ಕಟ್ಟಡದಲ್ಲಿ ಮೀಸಲು (ರಿಸವೇ9ಶನ್) ಕೌಂಟರ್ ಮತ್ತೆ ಕಾರ್ಯಾರಂಭಗೊಂಡಿದ್ದು, ಕೌಂಟರ್ ಸೇವೆಯು ಕೆಲಸದ ದಿನಗಳಲ್ಲಿ ಬೆಳಿಗ್ಗೆ 10 ಗಂಟೆಯಿಂದ ಮಧ್ಯಾಹ್ನ 1 ಗಂಟೆಯ ವರೆಗೆ ಲಭ್ಯವಿರಲಿದೆ. ಸಾಮಾನ್ಯ ಕಾಯ್ದಿರಿಸುವಿಕೆಯನ್ನು ಹೊರತುಪಡಿಸಿ, ತಾತ್ಕಾಲಿಕ ಎಸಿ ಮತ್ತು ನಾನ್ ಎಸಿ ಟಿಕೆಟ್‍ಗಳಿಗೆ ಪ್ರತ್ಯೇಕ ಕೌಂಟರ್‍ಗಳು ಕಾರ್ಯಪ್ರವೃತ್ತವಾಗಿದೆ. ರೈಲ್ವೆ ಟಿಕೆಟ್ ಕೌಂಟರ್‍ಗಳಲ್ಲಿ ಕಂದಾಯ ಇಲಾಖೆ ನೌಕರರು ಕಾರ್ಯನಿರ್ವಹಿಸಲಿದ್ದು, ನೌಕರರು ಮತ್ತು ಸಾರ್ವಜನಿಕರು ಕೌಂಟರ್ ನ ಪ್ರಯೋಜನವನ್ನು ಪಡೆದುಕೊಳ್ಳಬಹುದು ಎಂದು ಪ್ರಕಟಣೆ ತಿಳಿಸಿದೆ.
ಜಿಲ್ಲಾಧಿಕಾರಿ ಕಚೇರಿಯಲ್ಲಿ ರೈಲ್ವೆ ಟಿಕೆಟ್ ಕೌಂಟರ್ ಸೇವೆ ಆರಂಭ
0
ಜನವರಿ 10, 2023
Tags