ಕಾಸರಗೋಡು: ರಾಜ್ಯದ ವಿವಿಧೆಡೆ ಆಹಾರ ವಿಷಬಾಧೆಗೊಳಗಾಗಿ ಈಗಾಗಲೇ ಕಳೆದೊಂದು ವಾರದಲ್ಲಿ ಇಬ್ಬರು ಮೃತರಾಗಿರುವ ಬೆನ್ನಿಗೇ, ಕಾಸರಗೋಡಲ್ಲೂ ಪ್ರಕರಣವೊಂದು ಕಳವಳಕಾರಿಯಾಗಿ ವರದಿಯಾಗಿದ್ದು, ಸೇವಿಸಿದ ಆಹಾರ ವಿಷಗೊಂಡು ಪದವಿ ವಿದ್ಯಾರ್ಥಿನಿ ಮೃತರಾದ ದಾರುಣ ಘಟನೆ ಬೆಚ್ಚಿ ಬೀಳಿಸಿದೆ.
ಆನ್‍ಲೈನ್ ಮೂಲಕ ಖರೀದಿಸಿದ ಆಹಾರ ಸೇವಿಸಿ ಹೊಟ್ಟೆನೋವು ಕಾಣಿಸಿಕೊಂಡು ಪದವಿ ವಿದ್ಯಾರ್ಥಿನಿ ಸಾವನ್ನಪ್ಪಿದ್ದಾಳೆ. ಪೆರುಂಬಳ ಬೇನೂರಿನ ಅಂಜುಶ್ರೀ ಪಾರ್ವತಿ (19) ಮೃತರು. ಆನ್‍ಲೈನ್‍ನಲ್ಲಿ ಖರೀದಿಸಿದ ಆಹಾರ ಸೇವಿಸಿ ಅಂಜುಶ್ರೀ ಅಸ್ವಸ್ಥರಾಗಿದ್ದರು. ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಅಂಜುಶ್ರೀ ಮೃತಪಟ್ಟಿದ್ದಾರೆ. ಸಂಬಂಧಿಕರು ಮೇಲ್ಪರಂಪ ಪೋಲೀಸರಿಗೆ ದೂರು ನೀಡಿದ್ದಾರೆ. ಕಳೆದ ಆರು ದಿನಗಳಲ್ಲಿ ರಾಜ್ಯದಲ್ಲಿ ವಿಷಾಹಾರ ಸೇವನೆಯಿಂದ ಇಬ್ಬರು ಸಾವನ್ನಪ್ಪಿದ್ದಾರೆ. ಮಂಜೇಶ್ವರ ಗೋವಿಂದಪೈ ಸರ್ಕಾರಿ ಕಾಲೇಜಿನಲ್ಲಿ ಈಕೆ ಬಿ.ಕಾಂ ವಿದ್ಯಾರ್ಥಿನಿ. ಇವರು ದಿವಂಗತ ಕುಮಾರನ್ ಮತ್ತು ಅಂಬಿಕಾ ದಂಪತಿಯ ಪುತ್ರಿ.
ಕಳೆದ ಮೇ ತಿಂಗಳಲ್ಲೂ ಕಾಸರಗೋಡಿನಲ್ಲಿ ವಿಷಾಹಾರ ಸೇವನೆಯಿಂದ ಸಾವು ಸಂಭವಿಸಿತ್ತು. ಅಂದು ಚೆರುವತ್ತೂರಿನ ದೇವಾನಂದ(16)ಎಂಬ ಬಾಲಕಿ ಮೃತಪಟ್ಟಿದ್ದಳು. ಕೊಟ್ಟಾಯಂನಲ್ಲಿ ನರ್ಸ್ ಸಾವಿನ ನಂತರ, ರಾಜ್ಯದಲ್ಲಿ ವ್ಯಾಪಕವಾಗಿ ಆಹಾರ ಸುರಕ್ಷತೆ ತಪಾಸಣೆ ನಡೆಸುತ್ತಿರುವಾಗಲೇ ಮತ್ತೊಂದು ಸಾವು ಸಂಭವಿಸಿದೆ.
ಆಹಾರ ವಿಷಬಾಧೆ: ಕಾಸರಗೋಡಿನ ವಿದ್ಯಾರ್ಥಿನಿ ಬಲಿ
0
ಜನವರಿ 07, 2023
Tags