ಕಾಸರಗೋಡು: ಕನ್ನಡದ ಹಿರಿಯ ವಿದ್ವಾಂಸ, ಕನ್ನಡ ಪ್ರಾಧ್ಯಾಪಕ, ಪ್ರಾಚಾರ್ಯ ದಿ.ಪಿ.ಸುಬ್ರಾಯ ಭಟ್ಟ ಅವರ ಜನ್ಮಶತಮಾನೋತ್ಸವ ಸಮಿತಿಯ ಮೂರನೇ ಸಭೆಯು ಕಾಸರಗೋಡು ಸರ್ಕಾರಿ ಕಾಲೇಜಿನ ಕನ್ನಡ ವಿಭಾಗದಲ್ಲಿ ನಡೆಯಿತು.
ಶತಮಾನೋತ್ಸವ ಸಮಿತಿಯ ಅಧ್ಯಕ್ಷ ಪ್ರೊ. ಪಿ.ಶ್ರೀಕೃಷ್ಣ ಭಟ್ ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ಪ್ರೊ.ಪಿ.ಎನ್.ಮೂಡಿತ್ತಾಯ ಸಮಿತಿ ಚಟುವಟಿಕೆಗಳ ಕುರಿತು ಮಾಹಿತಿ ನೀಡಿದರು. 2023 ಫೆಬ್ರವರಿ 26ರಂದು ಕಾಸರಗೋಡು ಸರ್ಕಾರಿ ಕಾಲೇಜಿನ ಸಭಾಂಗಣದಲ್ಲಿ ಸುಬ್ರಾಯಭಟ್ ಜನ್ಮ ಶತಮಾನೋತ್ಸವ ಕಾರ್ಯಕ್ರಮವನ್ನು ಸಾಹಿತ್ಯಿಕ ಮತ್ತು ಸಾಂಸ್ಕøತಿಕ ಕಾರ್ಯಕ್ರಮಗಳೊಂದಿಗೆ ವೈವಿಧ್ಯಪೂರ್ಣವಾಗಿ ಆಚರಿಸಲು ತೀರ್ಮಾನಿಸಲಾಯಿತು. ಜನ್ಮಶತಮಾನೋತ್ಸವದ ನೆನಪಿಗಾಗಿ ಸುಬ್ರಾಯಭಟ್ಟ ಅವರ ವಿದ್ಯಾರ್ಥಿವೃಂದದವರು, ಸಂಬಂಧಿಕರು, ಅಭಿಮಾನಿಗಳು ಬರೆದ ಲೇಖನಗಳನ್ನು ಒಳಗೊಂಡ ಅಭಿನಂದನ ಗ್ರಂಥವನ್ನು ಈ ಸಂದರ್ಭ ಬಿಡುಗಡೆಗೊಳಿಸಲಾಗುವುದು. ಸುಬ್ರಾಯಭಟ್ಟ ಜನ್ಮ ಶತವiನೋತ್ಸವ ಕಾರ್ಯಕ್ರಮಗಳ ಯಶಸ್ವಿಗಾಗಿ ವಿವಿಧ ಉಪಸಮಿತಿಗಳನ್ನು ರಚಿಸಲಾಯಿತು. ಶತಮಾನೋತ್ಸವ ಸಮಿತಿ ಗೌರವಾಧ್ಯಕ್ಷರಾಗಿ ಜಯದೇವ ಖಂಡಿಗೆ, ಅಧ್ಯಕ್ಷರಾಗಿ ಪ್ರೊ.ಪಿ.ಶ್ರೀಕೃಷ್ಣಭಟ್, ಪ್ರಧಾನ ಕಾರ್ಯದರ್ಶಿಯಾಗಿ ಪ್ರೊ.ಪಿ.ಎನ್. ಮೂಡಿತ್ತಾಯ, ಕೋಶಾಧಿಕಾರಿಯಾಗಿ ಪ್ರೊ.ಎ.ಶ್ರೀನಾಥ, ಸ್ಮರಣ ಸಂಚಿಕೆಯ ಪ್ರಧಾನ ಸಂಪಾದಕರಾಗಿ ಡಾ.ಪ್ರಮೀಳಾಮಾಧವ ಅವರನ್ನು ಆಯ್ಕೆ ಮಾಡಲಾಗಿದೆ.
ಕಾರ್ಯಕ್ರಮ ಸಂಯೋಜನ ಸಮಿತಿಯ ಸಂಚಾಲಕರಾಗಿ ಡಾ.ರತ್ನಾಕರ ಮಲ್ಲಮೂಲೆ, ಸ್ವಾಗತ ಸಮಿತಿಸಂಚಾಲಕಿಯಾಗಿ ಸುಜಾತ ಎಸ್, ಆರ್ಥಿಕ ಸಮಿತಿ ಸಂಚಾಲಕರಾಗಿ ಪ್ರೊ.ಎ.ಶ್ರೀನಾಥ, ಆಹಾರ ಸಮಿತಿಯ ಸಂಚಾಲಕರಾಗಿ ಡಾ.ಆಶಾಲತಾ.ಸಿ.ಕೆ, ಪ್ರಚಾರ ¸ಮಿತಿಯಸಂಚಾಲಕರಾಗಿ ಡಾ.ಶ್ರೀಧರ ಏತಡ್ಕ, ಸ್ಮರಣಸಂಚಿಕೆಯ ಸಂಚಾಲಕರಾಗಿ ಡಾ.ಯು.ಶಂಕರನಾರಾಯಣ ಭಟ್ ಅವರನ್ನು ಆಯ್ಕೆ ಮಾಡಲಾಯಿತು. ಸಭಯೆಯಲ್ಲಿ ಕೆ.ಶಶಿಧರ ಐಎಎಸ್, ಡಾ.ಕೆ.ಕಮಲಾಕ್ಷ, ಕೆ.ನಾರಾಯಣ, ಪಿ.ಎಸ್.ಕೇಶವ ಭಟ್ ಕಾರ್ಕಳ, ಎಸ್.ವಿ.ಭಟ್, ಪಿ.ವಿ.ಕೇಶವ, ವಾಣಿ ಪಿ.ಎಸ್, ವಿನಯಾ.ಜಿ.ಭಟ್, ಸವಿತಾ.ಬಿ, ವೇದಾವತಿ.ಎಸ್, ಡಾ.ಮಹೇಶ್ವರಿ.ಯು, ಡಾ.ರಾಧಾಕೃಷ್ಣ ಬೆಳ್ಳೂರು, ಕೃಷ್ಣಪ್ರಸಾದ್‍ಪಿ.ಎಸ್ ಉಪಸ್ಥಿತರಿದ್ದರು. ಕನ್ನಡವಿಭಾಗದಮುಖ್ಯಸ್ಥೆ ಸುಜಾತಾ ಎಸ್‍ಸ್ವಾಗತಿಸಿದರು.
ಕಾಸರಗೋಡು ಸರ್ಕಾರಿ ಕಾಲೇಜಿನಲ್ಲಿ ಪ್ರೊ.ಪಿ.ಸುಬ್ರಾಯ ಭಟ್ ಜನ್ಮಶತಮಾನೋತ್ಸವ ಆಚರಣೆ: ಸಿದ್ಧತಾ ಸಭೆ
0
ಜನವರಿ 20, 2023
Tags