ಕಾಸರಗೋಡು: ಮಧೂರು ಗ್ರಾಮ ಪಂಚಾಯಿತಿ, ಕುಟುಂಬಶ್ರೀ ಸಿಡಿಎಸ್, ಬಾಲಸಭಾ ಮಾರ್ಗದರ್ಶನದಲ್ಲಿ "ಆಟದ ಉಯ್ಯಾಲೆ'ಎಂಬ ವಿನೋದ ಮತ್ತು ಶೈಕ್ಷಣಿಕ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಮಧೂರು ಗ್ರಮ ಪಂಚಾಯಿತಿ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಕೆ.ಗೋಪಾಲಕೃಷ್ಣ ಉದ್ಘಾಟಿಸಿದರು.
ಸಿಡಿಎಸ್ ಅಧ್ಯಕ್ಷೆ ಸುಮಾ ಎ. ಅಧ್ಯಕ್ಷತೆ ವಹಿಸಿದ್ದರು. ಪಂಚಾಯಿತಿ ಉಪಾಧ್ಯಕ್ಷೆ ಸ್ಮಿಜಾ, ಸ್ಥಾಯಿ ಸಮಿತಿ ಅಧ್ಯಕ್ಷರು, ಗ್ರಾಮ ಪಂಚಯಿತಿ ಸದಸ್ಯರಾದ ರತೀಶ್, ಉದಯಕುಮಾರ್, ರಾಧಾ, ಉಷಾ, ಸದಸ್ಯ ಕಾರ್ಯದರ್ಶಿ ಪಿ. ಪೀತಾಂಬರನ್ ಉಪಸ್ಥಿತರಿದ್ದರು. ಬಾಲಸಭಾ 'ಆಟದ ಉಯ್ಯಾಲೆ'ಕಾರ್ಯಕ್ರಮದಂಗವಾಗಿ ಯು.ಪಿ ಮತ್ತು ಹೈಸ್ಕೂಲ್ ಮಟ್ಟದಲ್ಲಿ ವಿಶೇಷ ರಸಪ್ರಶ್ನೆ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು.. ಬಾಲಚಂದ್ರನ್ ಕೋಟೋಡಿ ಬಾಲಸಭಾ ಮಕ್ಕಳೊಂದಿಗೆ ಸಂವಾದ ನಡೆಸಿದರು. ವಿವಿಧ ಕಲಾ ಮತ್ತು ಕ್ರೀಡಾ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ಸಿಡಿಎಸ್ ಸದಸ್ಯೆ ಸುಚಿತ್ರಾ ಸ್ವಾಗತಿಸಿದರು. ಸಿಡಿಎಸ್ ಉಪಾಧ್ಯಕ್ಷೆ ಶ್ರೀಲತಾ ವಂದಿಸಿದರು.
ಮಧೂರು ಪಂಚಾಯಿತಿ ಸಿಡಿಎಸ್‍ನಿಂದ ಆಟದ ಉಯ್ಯಾಲೆ' ವಇಶಿಷ್ಟ ಕಾರ್ಯಕ್ರಮ
0
ಜನವರಿ 02, 2023