ಕಾಸರಗೋಡು: ಯಕ್ಷಗಾನ ಆರಾಧನಾ ಕಲೆಯಾಗಿದ್ದು, ದೇವರನ್ನು ಸಾಕ್ಷಾತ್ಕರಿಸಿಕೊಳ್ಳುವ ಶಕ್ತಿ ಕಲೆಗಿದೆ ಎಂದು ಎಡನೀರು ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ತಿಳಿಸಿದ್ದಾರೆ.
ಅವರುತಾಳಿಪಡ್ಪು ಹೋಟೆಲ್ ಉಡುಪಿ ಗಾರ್ಡನ್‍ನ ಮಥುರಾ ಸಭಾಂಗಣದಲ್ಲಿ ಶುಕ್ರವಾರ ನಡೆದ ವಿಶಿಷ್ಟ 'ಕಾಸರಗೋಡು ಯಕ್ಷಗಾಯನ-ವಚನೋತ್ಸವ'ಕಾರ್ಯಕ್ರಮ ಉದ್ಘಾಟಿಸಿ ಆಶೀರ್ವಚನ ನೀಡಿದರು.
ಭಗವಂತನನ್ನು ಯಕ್ಷಗಾನದ ಮೂಲಕವೂ ಆರಾಧಿಸಬಹುದಾಗಿದೆ.ಕಲಾರಾಧನೆ ಮೂಲಕ ಸಲ್ಲುವ ಪೂಜೆಯಿಂದ ದೇವರೂ ಸಂಪ್ರೀತನಾಗುತ್ತಾನೆ. ಅರುವತ್ತನೇ ವಸಂತೋತ್ಸವ ಕಾರ್ಯಕ್ರಮ ಆಚರಿಸಿಕೊಳ್ಳುತ್ತಿರುವ ಉದ್ಯಮಿ ರಾಮ್‍ಪ್ರಸಾದ್ ಓರ್ವ ಕಲಾಪ್ರೇಮಿಯಾಗಿದ್ದು, ಎಡನೀರು ಮಠದೊಂದಿಗಿನ ಧಾರ್ಮಿಕ, ಸಾಂಸ್ಕøತಿಕ, ಕಲಾ ಕಾರ್ಯಕ್ರಮಗಳಿಗೆ ನಿರಂತರ ಪ್ರೋತ್ಸಾಹ ನೀಡುತ್ತಿದ್ದಾರೆ. ಇವರ ಕಲಾಸೇವೆ ಸಮಾಜಕ್ಕೆ ಆದರ್ಶವಾದುದು ಎಂದು ತಿಳಿಸಿದರು.
ಕಾರ್ಯಕ್ರಮ ಸಮಿತಿ ಕಾರ್ಯದರ್ಶಿ ಕೆ.ಎನ್ ವೆಂಕಟ್ರಮಣ ಹೊಳ್ಳ ಅಧ್ಯಕ್ಷತೆ ವಹಿಸಿದ್ದರು. ನಿವೃತ್ತ ಪ್ರಾಂಶುಪಾಲ ರಾಜೇಂದ್ರ ಕಲ್ಲೂರಾಯ ಎಡನೀರು, ನಗರಸಭಾ ಸದಸ್ಯೆ ಅಶ್ವಿನಿ ಜಿ. ನಾಯ್ಕ್ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ರಾಮ್ ಪ್ರಸಾದ್ ಕಾಸರಗೋಡು ಉಪಸ್ಥಿತರಿದ್ದರು. ಈ ಸಂದರ್ಭ ನಡೆದ ಗಾನವೈಭವ ಕಾರ್ಯಕ್ರಮದಲ್ಲಿ ಭಾಗವತರಾಗಿ ಪುತ್ತಿಗೆ ರಘುರಾಮ ಹೊಳ್ಳ, ಡಾ. ಸತೀಶ್ ಪುಣಿಂಚಿತ್ತಾಯ ಪೆರ್ಲ, ಡಾ, ಸತ್ಯನಾರಾಯಣ ಪುಣಿಂಚಿತ್ತಾಯ ಪೆರ್ಲ, ಚೆಂಡೆಯಲ್ಲಿ ಕೌಶಿಕ್ ರಾವ್ ಪುತ್ತಿಗೆ, ಮದ್ದಳೆಯಲ್ಲಿ ಲವಕುಮಾರ್ ಐಲ, ಚಕ್ರತಾಳದಲ್ಲಿ ಮುರರಿ ಭಟ್ ಪಂಜಿಗದ್ದೆ ಸಹಕರಿಸಿದರು.
ಮಧ್ಯಾಹ್ನ ನಡೆದ ಮೊದಲ ಯಕ್ಷಗಾನ ತಾಳಮದ್ದಳೆ'ಅಂಗದ ಸಂಧಾನ'ದಲ್ಲಿ ಭಾಗವತರಾಗಿ ಪಟ್ಲ ಸತೀಶ್ ಶೆಟ್ಟಿ ಭಾಗವಹಿಸಿದ್ದರು. ಅರ್ಥಧಾರಿಗಳಾಗಿ ಉಜಿರೆ ಅಶೋಕ್ ಭಟ್, ಸರ್ಪಂಗಳ ಈಶ್ವರ ಭಟ್, ದಿವಾಣ ಶಿವಶಂಕರ ಭಟ್ ಸಹಕರಿಸಿದರು. ಡಾ. ಸತೀಶ್ ಪುಣಿಂಚಿತ್ತಾಯ ಕಾರ್ಯಕ್ರಮ ನಿರೂಪಿಸಿದರು. ಶಿವರಾಂ ಕಾಸರಗೋಡು ಸ್ವಾಗತಿಸಿದರು. ವೀಜಿ ಕಾಸರಗೋಡು ವಂದಿಸಿದರು.
ಯಕ್ಷಗಾನ ಆರಾಧನಾ ಕಲೆ-'ಕಾಸರಗೋಡು ಯಕ್ಷಗಾಯನ-ವಚನೋತ್ಸವ'ಕಾರ್ಯಕ್ರಮ ಉದ್ಘಾಟಿಸಿ ಎಡನೀರುಶ್ರೀ ಬಣ್ಣನೆ
0
ಜನವರಿ 20, 2023
Tags