ಪುಣೆ: ಶ್ರೀಕೃಷ್ಣ ಮತ್ತು ಭಗವಂತ ಹನುಮನು ವಿಶ್ವದ ಶ್ರೇಷ್ಠ ರಾಜತಾಂತ್ರಿಕರು ಎಂದು ವಿದೇಶಾಂಗ ಸಚಿವ ಎಸ್ ಜೈಶಂಕರ್ ಹೇಳಿದ್ದಾರೆ.
ಮಹಾರಾಷ್ಟ್ರದ ಪುಣೆ ನಗರದಲ್ಲಿ ತಮ್ಮ 'ದಿ ಇಂಡಿಯಾ ವೇ' ಪುಸ್ತಕವನ್ನು ಮರಾಠಿ ಭಾಷಾಂತರ 'ಭಾರತ ಮಾರ್ಗ' ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರಾಜತಾಂತ್ರಿಕತೆಯ ದೃಷ್ಟಿಕೋನದಲ್ಲಿ ಭಗವಾನ್ ಶ್ರೀ ಕೃಷ್ಣ ಹಾಗೂ ಹನುಮಂತರನ್ನ ಗಮನಿಸಬೇಕು.
ಅವರು ಎಂತಹ ಪರಿಸ್ಥಿತಿ ಬಂದರೂ ಜಾಣ್ಮೆಯ ಹಾಗೂ ತಾಳ್ಮೆಯ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದ್ದರು ಎಂದು ಹೇಳಿದ್ದಾರೆ.
ಹನುಮನು ಶ್ರೀಲಂಕಾ ಪ್ರವೇಶಿಸಿ ಸೀತಾ ದೇವಿಯನ್ನು ಸಂಪರ್ಕಿಸಿದ್ದರು. ಲಂಕಾ ದಹನ ಮಾಡಿದ್ದರು ಎಂದು ಪೌರಣಿಕ ಹಿನ್ನಲೆಯನ್ನ ಉಲ್ಲೇಖಿಸಿದ್ದಾರೆ. ಮಹಾಭಾರತದ ಅರ್ಜುನನ ಸಂದಿಗ್ಧತೆಯನ್ನು ಹೇಗೆ ಶ್ರೀಕೃಷ್ಣ ನಿವಾರಿಸಿದರು. ಕುರುಕ್ಷೇತ್ರದ ಅನೇಕ ಉದಾಹರಣೆಯನ್ನು ಸ್ಮರಿಸಿದ್ದಾರೆ.
ಇಂದಿನ ಅಂತರರಾಷ್ಟ್ರೀಯ ಸಂಬಂಧಗಳಿಗೆ ಸಂಬಂಧಿಸಿದ ವಿಶ್ವದ 10 ದೊಡ್ಡ ಕಾರ್ಯತಂತ್ರದ ಪರಿಕಲ್ಪನೆಗಳಿಗೆ, ಮಹಾಭಾರತದ ಪ್ರತಿಯೊಂದು ಪರಿಕಲ್ಪನೆಗಳು ಸಮಾನವಾದ್ದದ್ದು ಎಂದಿದ್ದಾರೆ.