ಕಾಸರಗೋಡು: ಪತ್ರಕರ್ತ ಜಿಬೇಶ್ ವೈಲಿಪ್ಪಾಟ್ ಅವರು ಕಾಸರಗೋಡು ಪ್ರೆಸ್ ಕ್ಲಬ್ ವತಿಯಿಂದ ಕೊಡಮಾಡುವ ಹಿರಿಯ ಪತ್ರಕರ್ತ ಕೆ.ಕೃಷ್ಣನ್ ಸ್ಮಾರಕ ಸ್ಥಳೀಯ ಪತ್ರಕರ್ತ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಬಂದರು ಅಭಿವೃದ್ಧಿ ಬಗ್ಗೆ ಸರ್ಕಾರದ ಕಣ್ಣು ತೆರೆಸುವ ನಿಟ್ಟಿನಲ್ಲಿ'ಚಟುವಟಿಕೆ ನಡೆಸದ ಪೊನ್ನಾನಿ ಬಂದರು' ಎಂಬ ವಿಶೇಷ ಲೇಖನ ಪ್ರಕಟಿಸಿದ್ದು, ಇದನ್ನು ಆಯ್ಕೆತಂಡ ಪ್ರಶಸ್ತಿಗೆ ಪರಿಗಣಿಸಿತ್ತು. ಜಿಲ್ಲಾ ಮಾಹಿತಿ ಅಧಿಕಾರಿ ಎಂ. ಮಧುಸೂದನನ್,, ಪದ್ಮನಾಭನ್ ಬ್ಲಾತೂರ್ ಮತ್ತು ಯು. ರಾಜೀವ್ ಅವರನ್ನೊಳಗೊಂಡ ಸಮಿತಿ ಈ ಆಯ್ಕೆ ನಡೆಸಿದೆ. ಪ್ರಶಸ್ತಿ 10ಸಾವಿರ ರೂ. ನಗದು, ಪ್ರಶಸ್ತಿ ಫಲಕ ಹೊಂದಿದ್ದು, ಜ.27ರಂದು ಬೆಳಗ್ಗೆ 11ಕ್ಕೆ ಕಾಸರಗೋಡು ಪ್ರೆಸ್‍ಕ್ಲಬ್ ಸಭಾಂಗಣದಲ್ಲಿ ನಡೆಯುವ ಕೆ. ಕೃಷ್ಣನ್ ಸಂಸ್ಮರಣಾ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ನಡೆಯುವುದು.
ಜಿಬೇಶ್ ವೈಲಿಪ್ಪಾಟ್ ಅವರಿಗೆ ಕೆ.ಕೃಷ್ಣನ್ ಸ್ಮಾರಕ ಪತ್ರಕರ್ತ ಪ್ರಶಸ್ತಿ
0
ಜನವರಿ 26, 2023