ಪೆರ್ಲ: ಶ್ರೀ ಶಾರದಾ ಮರಾಟಿ ಸಮಾಜ ಸೇವಾ ಸಂಘದ ಸತತ ಪ್ರಯತ್ನದ ಫಲವಾಗಿ ಎಣ್ಮಕಜೆ ಬುಡಕಟ್ಟು ವಿಭಾಗ ವಿಸ್ತರಣಾ ಕಚೇರಿ(ಟ್ರೈಬಲ್ ಎಕ್ಸ್‍ಟೆನ್ಷನ್ ಆಫೀಸ್) ಹಳೇ ಕಟ್ಟಡದಿಂದ ಶುಕ್ರವಾರ ಪಂಚಾಯತಿ ಕಾರ್ಯಾಲಯ ಹತ್ತಿರವಿರುವ ಪೆರ್ಲದ ಹಳೆ ಪ್ರಾಥಮಿಕ ಆರೋಗ್ಯ ಕೇಂದ್ರದ ಕಟ್ಟಡ ಕ್ಕೆ ಸ್ಥಳಾಂತರಗೊಂಡಿದೆ.
ಕಳೆದ ಹಲವು ವರ್ಷಗಳಿಂದ ಯಾವುದೇ ಪ್ರಾಥಮಿಕ ಸೌಕರ್ಯಗಳಿಲ್ಲದೆ ನರಕ ಯಾತನೆಯನ್ನು ಅನುಭವಿಸುತ್ತಾ ಬಂದಿದ್ದ ಎಣ್ಮಕಜೆ ಬುಡಕಟ್ಟು ವಿಭಾಗ ವಿಸ್ತರಣಾ ಕಚೇರಿಗೆ ಕೊನೆಗೂ ಈ ಮೂಲಕ ವಿಮೋಚನೆಯ ಭಾಗ್ಯ ಒಲಿದುಬಂದಿದೆ.
ಶ್ರೀಶಾರದಾ ಮರಾಟಿ ಸಮಾಜ ಸೇವಾ ಸಂಘ ಕಳೆದ ಒಂದು ವರ್ಷದಿಂದೀಚೆ ಕಚೇರಿಗೆ ಸ್ವಂತ ಸ್ಥಳ ಹಾಗೂ ಕಟ್ಟಡಕ್ಕೆ ಬೇಕಾಗಿ ಎಸ್.ಸಿ/ಎಸ್.ಟಿ ಸಚಿವರಿಂದ ತೊಡಗಿ ಜಿಲ್ಲಾಧಿಕಾರಿಯವರಿಗೆ ಹಲವು ಮನವಿಗಳನ್ನು ಸಲ್ಲಿಸುತ್ತಿತ್ತು. ಅದರ ಫಲವಾಗಿ ಪೆರ್ಲದ ಪ್ರಾಥಮಿಕ ಆರೋಗ್ಯ ಕೇಂದ್ರ ಸಮೀಪದ ಹಳೆಯ ಕಟ್ಟಡಕ್ಕೆ ಸ್ಥಳವನ್ನು ನಿಗದಿ ಪಡಿಸಲಾಯಿತು.ಸಂಘದ ಮನವಿಗೆ ಸ್ಪಂದಿಸಿದ ಜಿಲ್ಲಾಧಿಕಾರಿಯವರು ಪ್ರಾಥಮಿಕ ಆರೋಗ್ಯ ಕೇಂದ್ರದ ಹತ್ತಿರವಿರುವ ಸರ್ಕಾರಿ ಜಾಗವನ್ನು ನಿಗದಿ ಪಡಿಸಲು ಗ್ರಾಮಾಧಿಕಾರರಿಗಳಿಗೆ ಆದೇಶವನ್ನು ನೀಡಿದರು. ಇದೇ ಸಂದರ್ಭದಲ್ಲಿ ಸಂಘಟನೆಯು ಎಣ್ಮಕಜೆ ಪಂಚಾಯತಿ ಅಧ್ಯಕ್ಷರಿಗೆ ಮನವಿ ಸಲ್ಲಿಸಿ ತೆರವುಗೊಂಡಿರುವ ಪೆರ್ಲ ಸÀರ್ಕಾರಿ ಆಸ್ಪತ್ರೆ ಕಟ್ಟಡದಲ್ಲಿ ತಾತ್ಕಾಲಿಕವಾಗಿ ಸ್ವಂತ ಕಟ್ಟಡ ಬರುವವರೆಗೆ ಸ್ಥಳಾವಕಾಶವನ್ನು ಕಲ್ಪಿಸಲು ಮನವಿ ಮಾಡಿತು. ಮನವಿಗೆ ಸ್ಪಂದಿಸಿದ ಎಣ್ಮಕಜೆ ಪಂಚಾಯತಿ ಹಳೆ ಆಸತ್ರೆ ಕಟ್ಟಡಕ್ಕೆ ಸ್ಥಳಾಂತರಿಸಲು ಒಪ್ಪಿಗೆಯನ್ನು ನೀಡಿತು.