ಬದಿಯಡ್ಕ : ಕನ್ನಡ ಸಾಹಿತ್ಯ ಲೋಕದ ಸಾಧಕ,ಕತೆಗಾರ ಕೆ.ವಿ.ತಿರುಮಲೇಶ್ ಅವರಿಗೆ ನುಡಿ ನಮನದ ಶ್ರದ್ಧಾಂಜಲಿ ಕಾರ್ಯಕ್ರಮ ನೀರ್ಚಾಲು ಮೇಲಿನ ಪೇಟೆಯಲ್ಲಿ ಜರಗಿತು.
ಸಾಹಿತ್ಯಾಭಿಮಾನಿಗಳು ವತಿಯಿಂದ ನಡೆದ ಕಾರ್ಯಕ್ರಮದಲ್ಲಿ ಕಾಸರಗೋಡು ಸರಕಾರಿ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಡಾ.ರತ್ನಾಕರ ಮಲ್ಲಮೂಲೆ, ಹಿರಿಯ ಕವಿ,ಪತ್ರಕರ್ತ ರಾಧಾಕೃಷ್ಣ ಉಳಿಯತ್ತಡ್ಕ,ನಿವೃತ್ತ ಗ್ರಾಮಾಧಿಕಾರಿ ಕೃಷ್ಣ ಡಿ.ದರ್ಬೆತ್ತಡ್ಕ, ಅಂಬೇಡ್ಜರ್ ವಿಚಾರ ವೇದಿಕೆಯ ಅಧ್ಯಕ್ಷ ರಾಮ ಪಟ್ಟಾಜೆ,ಬೊಳಿಕೆ ಜಾನಪದ ಕಲಾ ತಂಡದ ನಿರ್ದೇಶಕ ಶಂಕರ ಸ್ವಾಮಿಕೃಪಾ, ಕವಯತ್ರಿ ದಿವ್ಯಾ ಗಟ್ಟಿ ಉಳಿಯ, ವನಜಾಕ್ಷಿ ಚಂಬ್ರಕಾನ, ಹಿತೇಶ್ ಕುಮಾರ್ ನೀರ್ಚಾಲು ಮೊದಲಾದವರು ನುಡಿ ನಮನ ಸಲ್ಲಿಸಿದರು.ಸುಂದರ ಬಾರಡ್ಕ ಸ್ವಾಗತಿಸಿ ಪ್ರಸ್ತಾವಿಕವಾಗಿ ಮಾತನಾಡಿದರು.
ನೀರ್ಚಾಲಿನಲ್ಲಿ ಸಾಹಿತ್ಯಾಭಿಮಾನಿಗಳಿಂದ ಕತೆಗಾರ ಕೆ.ವಿ.ತಿರುಮಲೇಶ್ ಗೆ ನುಡಿ ನಮನದ ಶ್ರದ್ಧಾಂಜಲಿ
0
ಜನವರಿ 31, 2023
Tags