ಬೆಲ್ಲವನ್ನು ಇಷ್ಟಪಡದವರು ಯಾರೂ ಇರಲಿಕ್ಕಿಲ್ಲವೇನೋ? ಕರಾವಳಿ ಬದಿಯ ಅಡುಗೆ ಪದ್ಧತಿಗಳಲ್ಲಿ ಕಡ್ಡಾಯವಾಗಿ ಬೆಲ್ಲವನ್ನು ಬಳಸುತ್ತಾರೆ. ಹಳ್ಳಿ ಕಡೆಗಳಲ್ಲಿ ಮನೆಗೆ ಯಾರಾದರೂ ಅತಿಥಿಗಳು ಬಂದರೆ ಅವರಿಗೆ ನೀರಿನೊಂದಿಗೆ ಬೆಲ್ಲವನ್ನು ಕೊಡುವ ಸಂಪ್ರದಾಯವಿದೆ.
ಇದರಿಂದ ದೇಹಕ್ಕೂ ಹಲವಾರು ಉಪಯೋಗಗಳಿವೆ.
ದಿನನಿತ್ಯ ಇದನ್ನು ನಿಯಮಿತವಾಗಿ ಸೇವಿಸುವುದರಿಂದ ಲಿವರ್ ನಲ್ಲಿರುವ ಕಶ್ಮಲಗಳು ಹೊರಹೋಗುತ್ತವೆ. ಊಟ ಮಾಡಿದ ಬಳಿಕ ಒಂದು ತುಂಡು ಬೆಲ್ಲ ತಿನ್ನುವುದರಿಂದ ಜೀರ್ಣಕ್ರಿಯೆ ಉತ್ತಮವಾಗುತ್ತವೆ ಮತ್ತು ಮಲಬದ್ಧತೆ ಸಮಸ್ಯೆಯೂ ದೂರವಾಗುತ್ತದೆ. ಬೆಲ್ಲ ರಕ್ತಹೀನತೆಯ ಸಮಸ್ಯೆಯನ್ನು ನಿವಾರಿಸಿ ಹಿಮೋಗ್ಲೋಬಿನ್ ಹೆಚ್ಚಿಸುತ್ತದೆ.
ಬೆಲ್ಲದಲ್ಲಿ ಪೊಟ್ಯಾಶಿಯಂ ಅಂಶ ಹೇರಳವಾಗಿದೆ. ಇದರಲ್ಲಿ ಐರನ್ ಕೂಡಾ ಸಾಕಷ್ಟಿದ್ದು ಗರ್ಭಿಣಿಯರು ತಿಂದರೆ ಬಹಳ ಒಳ್ಳೆಯದು. ಆದರೆ ಬೆಲ್ಲವನ್ನು ಕೊಳ್ಳುವ ಮೊದಲು ಎಚ್ಚರಿಕೆ ವಹಿಸಬೇಕಾದ್ದು ಬಹಳ ಮುಖ್ಯ. ಸದ್ಯ ಅಂಗಡಿಗಳಲ್ಲಿ ಸಿಗುವ ಬೆಲ್ಲದಲ್ಲಿ ಕಲಬೆರಕೆ ಅಂಶ ಹೆಚ್ಚಾಗಿದ್ದು ಉತ್ತಮ ಗುಣಮಟ್ಟದ ಬೆಲ್ಲದ ಅಯ್ಕೆ ಬಹಳ ಮುಖ್ಯ. ಊಟದ ಬಳಿಕ ಒಂದು ತುಂಡು ಬೆಲ್ಲ ತಿನ್ನಿ, ನಿಮ್ಮ ಆರೋಗ್ಯ ರಕ್ಷಿಸಿಕೊಳ್ಳಿ.
ಊಟದ ನಂತರ ನೀವೂ ಬೆಲ್ಲ ತಿನ್ನುತ್ತೀರಾ.?
0
ಜನವರಿ 19, 2023
Tags