ತಿರುವನಂತಪುರಂ: ರಾಜ್ಯದಲ್ಲಿ ಆಹಾರ ಸುರಕ್ಷತೆ ಎಚ್ಚರಿಕೆ ಇರುವ ಲೇಬಲ್(ಚೀಟಿ) ಅಥವಾ ಸ್ಟಿಕ್ಕರ್ ಇಲ್ಲದ ಆಹಾರ ಪೊಟ್ಟಣಗಳ ಮೇಲೆ ನಿಷೇಧ ಹೇರಲಾಗಿದೆ.
ಈ ಕುರಿತು ಆರೋಗ್ಯ ಇಲಾಖೆ ಆದೇಶ ಹೊರಡಿಸಿದೆ. ಆಹಾರಗಳನ್ನು ಅಡುಗೆ ಮಾಡಿದ ದಿನಾಂಕ, ಸಮಯ ಮತ್ತು ಎಷ್ಟು ಸಮಯದೊಳಗೆ ಸೇವಿಸಬೇಕು ಎಂಬ ಬಗ್ಗೆ ಸ್ಟಿಕ್ಕರ್‍ನಲ್ಲಿ ನಮೂದಿಸಬೇಕು ಎಂದು ಸೂಚಿಸಲಾಗಿದೆ.
ಆಹಾರ ಸುರಕ್ಷತಾ ಮಾನದಂಡಗಳ ನಿಯಮಗಳ ಪ್ರಕಾರ ಹೆಚ್ಚಿನ ಅಪಾಯದ, ಬಿಸಿ ಆಹಾರಗಳು ಎಂದು ವರ್ಗೀಕರಿಸಲಾದ ಆಹಾರವನ್ನು ಅಡುಗೆ ಮಾಡಿದ ಎರಡು ಗಂಟೆಗಳ ಒಳಗೆ ಸೇವಿಸಬೇಕು. ಅಂತಹ ಆಹಾರವು ತಲುಪಲು ಹೆಚ್ಚು ಸಮಯ ತೆಗೆದುಕೊಳ್ಳುವ ಸ್ಥಳಗಳಿಗೆ ಪ್ರಯಾಣದ ಸಮಯದಲ್ಲಿ 60 ಡಿಗ್ರಿ ತಾಪಮಾನವನ್ನು ನಿರ್ವಹಿಸಬೇಕು. ಕೋಣೆಯ ಉμÁ್ಣಂಶದಲ್ಲಿ ಎರಡು ಗಂಟೆಗಳಿಗಿಂತ ಹೆಚ್ಚು ಕಾಲ ಸಂಗ್ರಹಿಸಿದರೆ ಈ ಆಹಾರಗಳು ಆರೋಗ್ಯಕ್ಕೆ ಹಾನಿಕರ ಮತ್ತು ಮಾನವ ಬಳಕೆಗೆ ಯೋಗ್ಯವಲ್ಲದ ಸಾಧ್ಯತೆಯಿದೆ. ಹೀಗಾಗಿ ಕೆಲವು ನಿಬರ್ಂಧಗಳು ಅಗತ್ಯ ಎಂಬುದನ್ನು ಕಂಡು ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಆರೋಗ್ಯ ಸಚಿವೆ ವೀಣಾ ಜಾರ್ಜ್ ಹೇಳಿದ್ದಾರೆ.
ಹೋಟೆಲ್ ಪಾರ್ಸೆಲ್ ಗಳ ಮೇಲೆ ನಿಯಂತ್ರಣ: ದಿನಾಂಕ ಮತ್ತು ಸಮಯ ಸ್ಟಿಕ್ಕರ್ ಕಡ್ಡಾಯ: ಸರ್ಕಾರದ ಆದೇಶ
0
ಜನವರಿ 21, 2023
Tags