ತಿರುವನಂತಪುರ: ರಾಜ್ಯ ಪೋಲೀಸ್ ಇಲಾಖೆಯಲ್ಲಿ ವಿವಿಧ ಪ್ರಕರಣಗಳಲ್ಲಿ ಭಾಗಿಯಾಗಿರುವವರ ಪಟ್ಟಿಯನ್ನು ಸಲ್ಲಿಸುವಂತೆ ಐಜಿಗಳು ಮತ್ತು ಜಿಲ್ಲಾ ಪೋಲೀಸ್ ಮುಖ್ಯಸ್ಥರಿಗೆ ಡಿಜಿಪಿ ಸೂಚಿಸಿದ್ದಾರೆ.
ಪೋಕ್ಸೊ, ವಿಜಿಲೆನ್ಸ್ ಪ್ರಕರಣ ಮತ್ತು ಕೆಟ್ಟ ನಡತೆಯ ಬಗ್ಗೆ ವರದಿಯಾದವರ ಪಟ್ಟಿಯನ್ನು ಸಲ್ಲಿಸಲು ಸೂಚಿಸಲಾಗಿದೆ. ಮಂಗಳವಾರ ಸಂಜೆಯೊಳಗೆ ವರದಿ ಸಲ್ಲಿಕೆಯಾಗುವ ನಿರೀಕ್ಷೆಯಿದೆ.
ಸಿವಿಲ್ ಪೋಲೀಸ್ ಅಧಿಕಾರಿಗಳ ಮಾಹಿತಿಯನ್ನು ಅಂಚೆ ಮೂಲಕ ಡಿವೈಎಸ್ಪಿ ಅವರಿಗೆ ಕಳುಹಿಸಲು ಸೂಚಿಸಲಾಗಿದೆ. ಮಾಫಿಯಾ ಗ್ಯಾಂಗ್ ಸಂಪರ್ಕ ಪತ್ತೆಯಾದ ನಂತರ ಪೆÇಲೀಸ್ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ. ಇದರ ಬೆನ್ನಲ್ಲೇ ಪೋಲೀಸ್ ವರಿಷ್ಠರು ವಿವಿಧ ಪ್ರಕರಣಗಳಲ್ಲಿ ಭಾಗಿಯಾಗಿರುವವರ ಮಾಹಿತಿ ಕೇಳಿದ್ದಾರೆ.
ಇಂದು 24 ಎಸ್‍ಎಚ್‍ಒಗಳನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಲಾಗಿದೆ. ಈ ಪ್ರಕ್ರಿಯೆಯು ನೇರವಾಗಿ ವಜಾಗೊಂಡವರಿಗೆ ಬದಲಿ ನೇಮಕಾತಿಯನ್ನೂ ಒಳಗೊಂಡಿದೆ. ಭೂ ಮಾಫಿಯಾ ನಂಟು ಪತ್ತೆಯಾದ ಹಿನ್ನೆಲೆಯಲ್ಲಿ ಅಮಾನತುಗೊಂಡಿದ್ದ ತಿರುವಳ್ಳಂ ಎಸ್‍ಎಚ್‍ಒ ಸುರೇಶ್ ವಿ ನಾಯರ್ ಅವರನ್ನು ಪುನಃ ಕೆಲಸಕ್ಕೆ ಸೇರಿಸಲಾಗಿದೆ.
ಖಾಕಿಯೊಳಗಿನ ಖದೀಮರು: ಪಟ್ಟಿ ಸಲ್ಲಿಸುವಂತೆ ರಾಜ್ಯ ಪೋಲೀಸ್ ಮುಖ್ಯಸ್ಥರಿಂದ ಸೂಚನೆ
0
ಜನವರಿ 21, 2023