ಕಾಸರಗೋಡು: ಕೇರಳ ಸರ್ಕಾರಿ ವೈದ್ಯಾಧಿಕಾರಿಗಳ ಸಂಘಟನೆ(ಕೆ.ಜಿ.ಎಂ.ಒ.ಎ)ಕಾಸರಗೋಡು ಜಿಲ್ಲಾ ಘಟಕದ 2023ನೇ ಸಾಲಿನ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.
ಡಾ. ರಮೇಶ್ ಡಿ.ಜಿ ಅಧ್ಯಕ್ಷ, ಡಾ. ಶಕೀಲ್ ಅನ್ವರ್ ಮತ್ತು ಡಾ. ಶಮೀಮಾ ತನ್ವೀರ್ (ಉಪಾಧ್ಯಕ್ಷರು), ಡಾ. ಶಿನ್ಸಿ ವಿ.ಕೆ ಪ್ರಧಾನ ಕಾರ್ಯದರ್ಶಿ, ಡಾ. ರಾಜು ಮ್ಯಾಥ್ಯೂ ಸಿರಿಯಕ್ ಕೋಶಾಧಿಕಾರಿ, ಡಾ.ಧನ್ಯ ಮನೋಜ್ (ಜತೆ ಕಾರ್ಯದರ್ಶಿ) ಡಾ. ಮಹಮ್ಮದ್ ರಿಯಾಜ್ (ನಿರ್ಮಾಣ ಸಮಿತಿ ಅಧ್ಯಕ್ಷ) ಡಾ. ರವೀಂದ್ರನ್ ಕೆ.ಒ (ಆಂತರಿಕ ಲೆಕ್ಕ ಪರಿಶೋಧಕರು) ತಾಲೂಕು ಸಂಚಾಲಕರಾಗಿ ಡಾ. ಪ್ರಭಾಕರ ರೈ (ಮಂಜೇಶ್ವರ) ಡಾ.ನಾರಾಯಣ ಪ್ರದಿಪ್(ಕಾಸರಗೋಡು) ಡಾ. ಧನೀಶ್ (ಹೊಸದುರ್ಗ) ಡಾ.ವಿಶ್ವ ಕಿರಣ್(ವೆಳ್ಳರಿಕುಂಡಿ)ಅವರನ್ನು ಆಯ್ಕೆ ಮಾಡಲಾಯಿತು.
ಈ ಬಗ್ಗೆ ನಡೆದ ಸಮಾರಂಭದಲ್ಲಿ ಸಂಗಟನೆ ಅಧ್ಯಕ್ಷ ಡಾ. ಸಿ.ಎಂ.ಕಾಯಿಞÂ ಅಧ್ಯಕ್ಷತೆ ವಹಿಸಿದ್ದರು.
ಕಾರ್ಯದರ್ಶಿ ಡಾ.ರಾಜು ಮ್ಯಾಥ್ಯೂ ಸಿರಿಯಕ್ ಹಾಗೂ ಕೋಶಾಧಿಕಾರಿ ಅರುಣ್ ಪಿ.ವಿ. ಉಪಸ್ಥಿತರಿದ್ದರು. ಡಾ.ಜಮಾಲ್ ಅಹ್ಮದ್ ಎ ಚುನಾವಣಾಧಿಕಾರಿಯಾಗಿ ಮೇಲ್ವಿಚಾರಣೆ ನಡೆಸಿದರು. ಫೆ. 12ರಂದು ಕಾಞಂಗಾಡು ಕೆಜಿಎಂಓಎ ಕಚೇರಿಯಲ್ಲಿ ನಡೆಯುವ ಸಮಾರಂಭದಲ್ಲಿ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ನಡೆಯಲಿರುವುದಾಗಿ ನೂತನ ಪದಾಧಿಕಾರಿಗಳು ತಿಳಿಸಿದ್ದಾರೆ.
ಸರ್ಕಾರಿ ವೈದ್ಯಾದಿಕಾರಿಗಳ ಸಂಘಟನೆ ಜಿಲ್ಲಾಘಟಕ ಪದಾಧಿಕಾರಿಗಳ ಆಯ್ಕೆ
0
ಜನವರಿ 30, 2023