ಕಾಸರಗೋಡು: ಆರ್ಥಿಕ ಸಂಕಷ್ಟ ಹಾಗೂ ವಾಸಿಯಾಗದ ಕಾಯಿಲೆ ಹಿನ್ನೆಲೆಯಲ್ಲಿ ಎಣ್ಮಕಜೆ ಪಂಚಾಯಿತಿಯ ಕಾಟುಕುಕ್ಕೆಯ ಕೃಷಿಕರೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆಗೈದಿದ್ದಾರೆ. ಕಾಟುಕುಕ್ಕೆ ಕುಂಚಿನಡ್ಕ ನಿವಾಸಿ ಗೋಪಾಲಕೃಷ್ಣ ಭಟ್(86)ಆತ್ಮಹತ್ಯೆಗೆ ಶರಣಾದವರು.
ತೋಟಕ್ಕೆ ತೆರಳಿದವರು ಬಹಳ ಹೊತ್ತಿನ ವರೆಗೂ ವಾಪಸಾಗದಿರುವುದರಿಂದ ಪತ್ನಿ ದೇವಕಿ ಹುಡುಕಿಕೊಂಡು ತೆರಳಿದಾಗ ಇವರ ಮೃತದೇಹ ತೋಟದಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಇವರು ಬರೆದಿಟ್ಟಿದ್ದಾರೆ ಎನ್ನಲಾದ ಪತ್ರವೊಂದು ಮನೆಯಲ್ಲಿ ಲಭಿಸಿದ್ದು, ಇದರಲ್ಲಿ ಆರ್ಥಿಕ ಮುಗ್ಗಟ್ಟು ಹಾಗೂ ಅಸೌಖ್ಯದಿಂದ ತಾನು ಬಳಲುತ್ತಿರುವುದಾಗಿ ಬರೆದಿಡಲಾಗಿತ್ತು ಎನ್ನಲಾಗಿದೆ. ಬದಿಯಡ್ಕ ಠಾಣೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.
ಆರ್ಥಿಕ ಮುಗ್ಗಟ್ಟು: ಕಾಟುಕುಕ್ಕೆಯಲ್ಲಿ ಕೃಷಿಕ ಆತ್ಮಹತ್ಯೆ
0
ಜನವರಿ 16, 2023
Tags