ಬದಿಯಡ್ಕ: ಕಳೆದ 15 ವರ್ಷಗಳಿಂದ ಬದಿಯಡ್ಕ ಮೃಗಾಸ್ಪತ್ರೆಯಲ್ಲಿ ವೈದ್ಯಾಧಿಕಾರಿಯಾಗಿ ಸೇವೆ ಸಲ್ಲಿಸಿ ಭಡ್ತಿಹೊಂದಿ ವರ್ಗಾವಣೆಗೊಂಡ ಡಾ. ಚಂದ್ರಬಾಬು ಅವರನ್ನು ನೀರ್ಚಾಲು, ಬದಿಯಡ್ಕ ಹಾಗೂ ಪಳ್ಳತ್ತಡ್ಕ ಕ್ಷೀರೋತ್ಪಾದಕ ಸಹಕಾರಿ ಸಂಘಗಳ ವತಿಯಿಂದ ಬದಿಯಡ್ಕದಲ್ಲಿ ಸನ್ಮಾನಿಸಿ ಬೀಳ್ಕೊಡಲಾಯಿತು. ಈ ಸಂದಭರ್À ನಡೆದ ಸಭೆÉಯಲ್ಲಿ ಬದಿಯಡ್ಕ ಗ್ರಾಮಪಂಚಾಯಿತಿ ಅಧ್ಯಕ್ಷೆ ಶಾಂತಾ ಬಿ. ಮಾತನಾಡಿ ಗ್ರಾಮಪಂಚಾಯಿತಿ ವ್ಯಾಪ್ತಿಯಲ್ಲಿ ಅವರು ಕೈಗೊಂಡ ಸೇವೆಯನ್ನು ಶ್ಲಾಘಿಸಿದರು. ವಿವಿಧ ಯೋಜನೆಗಳನ್ನು ಯಥಾರ್ಥ ಫಲಾನುಭವಿಗಳಿಗೆ ತಲುಪಿಸುವಲ್ಲಿ ಅವರು ಮುತುವರ್ಜಿಯನ್ನು ವಹಿಸಿ ಮಾದರಿ ಕಾರ್ಯವನ್ನು ಕೈಗೊಂಡಿದ್ದಾರೆ ಎಂದು ಶುಭÀಹಾರೈಸಿದರು.
ಗ್ರಾಮಪಂಚಾಯಿತಿ ಅಭಿವೃದ್ಧಿ ಸ್ಥಾಯಿಸಮಿತಿ ಅಧ್ಯಕ್ಷೆ ಸೌಮ್ಯ ಮಹೇಶ್ ನಿಡುಗಳ ಮಾತನಾಡಿ ಕ್ಷೀರೋತ್ಪಾದಕರೊಂದಿಗೆ ಅನ್ಯೋನ್ಯವಾಗಿ ಕಾರ್ಯನಿರ್ವಹಿಸುತ್ತಾ ಅನೇಕ ಜನರು ಈ ಕಾರ್ಯದಲ್ಲಿ ತೊಡಗಿಸಿಕೊಳ್ಳುವಲ್ಲಿ ಇವರ ಕಾರ್ಯ ಪ್ರಶಂಸನೀಯವೆಂದರು. ಸನ್ಮಾನವನ್ನು ಸ್ವೀಕರಿಸಿ ಡಾ. ಚಂದ್ರಬಾಬು ಮಾತನಾಡಿ ಇಲ್ಲಿನ ಜನರ ಸಹಕಾರವು ನನ್ನ ಕರ್ತವ್ಯವನ್ನು ನಿರ್ವಹಿಸಲು ತುಂಬಾ ಸಹಕಾರಿಯಾಗಿದೆ. ಮುಂದೆಯೂ ತಮ್ಮೊಂದಿಗಿರುವುದಾಗಿ ತಿಳಿಸಿದರು.
ಗ್ರಾಮಪಂಚಾಯಿತಿ ಸದಸ್ಯ ಬಾಲಕೃಷ್ಣ ಶೆಟ್ಟಿ ಕಡಾರು, ಬದಿಯಡ್ಕ ಕ್ಷೀರೋತ್ಪಾದಕ ಸಂಘದ ಅಧ್ಯಕ್ಷ ದಿನೇಶ್ ಕರಿಂಬಿಲ, ನೀರ್ಚಾಲು ಸಂಘದ ಮಾಜಿ ಅಧ್ಯಕ್ಷ ವೆಂಕಟಕೃಷ್ಣ ಪೆರ್ವ, ಪಳ್ಳತ್ತಡ್ಕ ಸಂಘದ ಅಧ್ಯಕ್ಷ ಶಿವಶಂಕರ ಭಟ್ ಗುಣಾಜೆ ಶುಭÀಹಾರೈಸಿದರು. ಕ್ಷೀರೋತ್ಪಾದಕ ಸಹಕಾರಿ ಸಂಘದ ನಿರ್ದೇಶಕರು, ಕ್ಷೀರೋತ್ಪಾದಕರು ಪಾಲ್ಗೊಂಡಿದ್ದರು. ಬದಿಯಡ್ಕ ಸಂಘದ ಕಾರ್ಯದರ್ಶಿ ಸುರೇಖ ಸ್ವಾಗತಿಸಿ, ನೀರ್ಚಾಲು ಸಂಘದ ಅಧ್ಯಕ್ಷ ಉದನೇಶ ವೀರ ವಂದಿಸಿದರು.
ವರ್ಗಾವಣೆಗೊಂಡ ಬದಿಯಡ್ಕ ಮೃಗಾಸ್ಪತ್ರೆಯ ವೈದ್ಯಾಧಿಕಾರಿಗೆ ಕ್ಷೀರೋತ್ಪಾದಕರಿಂದ ಸನ್ಮಾನ
0
January 10, 2023
Tags