ಕಾಸರಗೋಡು: ಎಂಡೋಸಲ್ಫಾನ್ ಪೀಡಿತ ಪ್ರದೇಶದಲ್ಲಿ ರಾಜ್ಯ ಸರ್ಕಾರ ಜಾರಿಗೊಳಿಸುತ್ತಿರುವ ವಿವಿಧ ಅಭಿವೃದ್ಧಿ ಮತ್ತು ಕಲ್ಯಾಣ ಯೋಜನೆಗಳನ್ನು ವಿವರಿಸಿ ಜಿಲ್ಲಾ ಮಾಹಿತಿ ಕಛೇರಿ ಸಿದ್ಧಪಡಿಸಿದ 'ಬೆಳಕು'ಸಾಕ್ಷ್ಯಚಿತ್ರದ ಪ್ರದರ್ಶನ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಜಿಲ್ಲಾ ಅಭಿವೃದ್ಧಿ ಸಮಿತಿ ಸಭೆಯಲ್ಲಿ ನಡೆಯಿತು. ಜಿಲ್ಲಾಧಿಕಾರಿ ಭಂಡಾರಿ ಸ್ವಾಗತ್ ರಣವೀರ್ ಚಂದ್ ಸಾಕ್ಷ್ಯಚಿತ್ರ ಬಿಡುಗಡೆ ಮಾಡಿದರು.
ಶಾಸಕರಾದ ಸಿ. ಎಚ್. ಕುಂಞಂಬು, ಇ.ಚಂದ್ರಶೇಖರನ್, ಎಂ. ರಾಜಗೋಪಾಲನ್, ಎ ಕೆ ಎಂ ಅಶ್ರಫ್, ಜಿಲ್ಲಾ ಯೋಜನಾಧಿಕಾರಿ ಎ. ಎಸ್. ಮಾಯಾ, ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಕಛೇರಿ ಮುಖ್ಯಸ್ಥರು ಮತ್ತಿತರರು ಚಿತ್ರ ವೀಕ್ಷಿಸಿದರು. ಎಲ್ಲಾ ಸಂತ್ರಸ್ತರಿಗೆ ನಷ್ಟ ಪರಿಹಾರ ನೀಡುವುದಕ್ಕಾಗಿ 206 ಕೋಟಿ ರೂಪಾಯಿ ಖರ್ಚು ಮಾಡಿ ಜಿಲ್ಲೆಯ ಬಡ್ಸ್ ಶಾಲೆಗಳಲ್ಲಿ ಮೂಲಸೌಕರ್ಯ ಅಭಿವೃದ್ಧಿ, ಪುನರ್ವಸತಿ ಗ್ರಾಮದ ನಿರ್ಮಾಣ ಪ್ರಗತಿ, ಆರೋಗ್ಯ ಕ್ಷೇತ್ರದ ವಿವಿಧ ಅಭಿವೃದ್ಧಿ ಚಟುವಟಿಕೆಗಳ ಕುರಿತು ಯೋಜನೆ ಫಲಾನುಭವಿಗಳು ವ್ಯಕ್ತಪಡಿಸುತ್ತಿರುವ ತಮ್ಮ ಅನಿಸಿಕೆಗಳು ಈ ಸಾಕ್ಷ್ಯದಲ್ಲಿ ಒಳಗೊಮಡಿದೆ.
ಜಿಲ್ಲಾ ಮಾಹಿತಿ ಅಧಿಕಾರಿ ಎಂ. ಮಧುಸೂದನನ್ ಅವರು ಸಿದ್ಧಪಡಿಸಿರುವ ಸಾಕ್ಷ್ಯಚಿತ್ರದ ಛಾಯಾಗ್ರಹಣ ಸುನಿಲ್ ಕುಟ್ಟಿಕೋಲ್. ಹಾಗೂ ಎಡಿಟಿಂಗ್ ಅಭಿಲಾಷ್ ಕುಟ್ಟಿಕೋಲ್ ನಿರ್ವಹಿಸಿದ್ದಾರೆ.
ಎಂಡೋಸಲ್ಫಾನ್: ಜಿಲ್ಲಾ ಮಾಹಿತಿ ಕಛೇರಿಯಿಂದ ಸಿದ್ಧಪಡಿಸಿದ 'ಬೆಳಕು'ಸಾಕ್ಷ್ಯಚಿತ್ರದ ಪ್ರದರ್ಶನ
0
ಜನವರಿ 30, 2023
Tags