ಕೊಚ್ಚಿ: ಕಪ್ಪು ಹಣದ ವ್ಯವಹಾರಕ್ಕೆ ಸಂಬಂಧಿಸಿದಂತೆ ನಿಲಂಬೂರ್ ಶಾಸಕ ಪಿವಿ ಅನ್ವರ್ ಅವರನ್ನು ಜಾರಿ ನಿರ್ದೇಶನಾಲಯ (ಇಡಿ) ಕೊಚ್ಚಿಯಲ್ಲಿ ವಿಚಾರಣೆಗೆ ಒಳಪಡಿಸಿದೆ.
ವಿದೇಶದಲ್ಲಿರುವ ಇಂಜಿನಿಯರ್ ನಡುಡಿ ಸಲೀಂ ಅವರ ದೂರಿನ ಅನ್ವಯ ಕಪ್ಪುಹಣ ವ್ಯವಹಾರಕ್ಕೆ ಸಂಬಂಧಿಸಿದಂತೆ ಇಡಿ ಕ್ರಮವಾಗಿದೆ ಎಂದು ತಿಳಿದುಬಂದಿದೆ. ಮಂಗಳೂರಿನ ಬೆಳ್ತಂಗಡಿಯಲ್ಲಿ ಜಲ್ಲಿ ಕ್ರಷರ್ ಒಂದರಲ್ಲಿ ಶೇ.10ರಷ್ಟು ಪಾಲು ಹಾಗೂ ಮಾಸಿಕ ಅರ್ಧ ಲಕ್ಷ ಡಿವಿಡೆಂಡ್ ನೀಡುವುದಾಗಿ ಪಿ.ವಿ.ಅನ್ವರ್ ವಂಚಿಸಿದ್ದಾರೆ ಎಂಬುದು ನಡುಡಿ ಸಲೀಂ ಅವರ ದೂರು. ಈ ವಹಿವಾಟಿನಲ್ಲಿ ಕಪ್ಪುಹಣ ಸೇರಿರುವ ಬಗ್ಗೆ ಇಡಿ ಮಾಹಿತಿ ಪಡೆದಿತ್ತು. ದೂರುದಾರ ಸಲೀಂ ಇಡಿಗೆ ಈ ಹೇಳಿಕೆ ನೀಡಿದ್ದರು. ಇದರ ಬೆನ್ನಲ್ಲೇ ಇ.ಡಿ ಅನ್ವರ್ ಅವರನ್ನು ಪ್ರಶ್ನಿಸಿದೆ.
ಪೋಲೀಸರಿಗೆ ದೂರು ನೀಡಿದರೂ ಯಾವುದೇ ಕ್ರಮ ಕೈಗೊಳ್ಳದ ಕಾರಣ ಸಲೀಂ ನ್ಯಾಯಾಲಯದ ಮೆಟ್ಟಿಲೇರಿದ್ದರು. ಮಂಚೇರಿ ಮುಖ್ಯ ಜ್ಯುಡಿಷಿಯಲ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯದ ಆದೇಶದ ಮೇರೆಗೆ ಪೆÇಲೀಸರು ಅನ್ವರ್ ವಿರುದ್ಧ ವಂಚನೆ ಪ್ರಕರಣ ದಾಖಲಿಸಲು ಸಿದ್ಧರಾಗಿದ್ದರು. ಪ್ರಕರಣವನ್ನು ಅನೂರ್ಜಿತಗೊಳಿಸುವ ಪೆÇಲೀಸರ ಕ್ರಮದ ವಿರುದ್ಧ ಸಲೀಂ ಸಲ್ಲಿಸಿದ ಮನವಿಯ ಮೇರೆಗೆ ಹೈಕೋರ್ಟ್ ಅಪರಾಧ ವಿಭಾಗದ ತನಿಖೆಗೆ ಆದೇಶಿಸಿತ್ತು. ಅನ್ವರ್ ವಿರುದ್ಧ ಪ್ರಕರಣ ದಾಖಲಿಸುವಂತೆ ನ್ಯಾಯಾಲಯ ಅಪರಾಧ ವಿಭಾಗಕ್ಕೆ ಸೂಚಿಸಿದೆ.
ಏತನ್ಮಧ್ಯೆ, ಮುಸ್ಲಿಂ ಲೀಗ್ ಸಮಸ್ಯೆಯನ್ನು ಮಧ್ಯಸ್ಥಿಕೆ ವಹಿಸಲು ಪ್ರಯತ್ನಿಸಿತು, ಆದರೆ ವಿಫಲವಾಯಿತು.
ಮಂಗಳೂರು ಕಪ್ಪುಹಣ ಅವ್ಯವಹಾರ: ನಿಲಂಬೂರು ಶಾಸಕ ಪಿ.ವಿ.ಅನ್ವರ್ ರನ್ನು ಪ್ರಶ್ನಿಸಿದ ಇ.ಡಿ.
0
ಜನವರಿ 17, 2023