ಕಾಸರಗೋಡು: ಕುಷ್ಠರೋಗ ನಿರ್ಮೂಲನೆಗಾಗಿ ಕೇರಳ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಆಯೋಜಿಸಿರುವ 'ಅಶ್ವಮೇಧ' ಗೃಹ ಸಂದರ್ಶನದ ಐದನೇ ಹಂತದ ಕಾರ್ಯಕ್ರಮ ಜ.18ರಂದು ಜಿಲ್ಲೆಯಲ್ಲಿ ಆರಂಭವಾಗಲಿದೆ. ಕುಷ್ಠರೋಗದ ರೋಗಲಕ್ಷಣಗಳ ಆರಂಭಿಕ ಪತ್ತೆ ಮತ್ತು ಚಿಕಿತ್ಸೆ ಕಾರ್ಯಕ್ರಮದ ಉದ್ದೇಶªಕರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಜನವರಿ 18 ರಿಂದ ಎರಡು ವಾರಗಳ ಕಾಲ ಆರೋಗ್ಯ ಇಲಾಖೆಯ ನೇತೃತ್ವದಲ್ಲಿ ಸ್ಥಳೀಯಾಡಳಿತ ಸಂಸ್ಥೆ, ಪ.ಜಾತಿ ಅಭಿವೃದ್ಧಿ ಇಲಾಖೆ, ಶಿಕ್ಷಣ ಇಲಾಖೆ, ಮೀನುಗಾರಿಕೆ ಇಲಾಖೆ ಹಾಗೂ ಕಾರ್ಮಿಕ ಇಲಾಖೆ ಸಹಯೋಗದಲ್ಲಿ ಭೇಟಿ ಕಾರ್ಯಕ್ರಮ ನಡೆಸಲಾಗುತ್ತಿದೆ.
2018-2022 ರವರೆಗೆ ಜಿಲ್ಲೆಯಲ್ಲಿ ನಾಲ್ಕು ಹಂತಗಳಲ್ಲಿ ಅಶ್ವಮೇಧ ಕಾರ್ಯಕ್ರಮ ಈಗಾಗಲೇ ಆಯೋಜಿಸಲಾಗಿದೆ. 2018 ರ ಡಿಸೆಂಬರ್‍ನಲ್ಲಿ ಮೊದಲ ಹಂತದ ಅಭಿಯಾನದಲ್ಲಿ 24 ಕುಷ್ಠರೋಗ ಪ್ರಕರಣಗಳು, 2019-20 ರಲ್ಲಿ 33, 2020-21 ರಲ್ಲಿ 18 ಮತ್ತು 2021-22 ರಲ್ಲಿ 21 ಪ್ರಕರಣಗಳು ಪತ್ತೆಯಾಗಿವೆ.
ಜಿಲ್ಲೆಯಲ್ಲಿ ಪ್ರಸ್ತುತ ಒಂದು ಮಗು ಸೇರಿದಂತೆ 31 ರೋಗಿಗಳು ಚಿಕಿತ್ಸೆ ಪಡೆಯುತ್ತಿದ್ದಾರೆ. ಇವರಲ್ಲಿ ಯಾವುದೇ ರೋಗಿಗಳು ಪ್ರಸ್ತುತ ಅಂಗವಿಕಲರಾಗಿಲ್ಲ.
ಅಶ್ವಮೇಧ ಕಾರ್ಯಕ್ರಮದನ್ವಯ ಆರೋಗ್ಯ ಕಾರ್ಯಕರ್ತರು ಜಿಲ್ಲೆಯ ಪ್ರತಿ ಮನೆಗೆ ಭೇಟಿ ನೀಡಿ ಕುಷ್ಠ ರೋಗಲಕ್ಷಣಗಳನ್ನು ಹೊಂದಿರುವ ಜನರನ್ನು ಗುರುತಿಸುತ್ತಾರೆ ಮತ್ತು ರೋಗನಿರ್ಣಯಕ್ಕಾಗಿ ಆಸ್ಪತ್ರೆಗೆ ತೆರಳಲು ಸೂಚನೆ ನೀಡುತ್ತಾರೆ. ಮನೆಗೆ ಭೇಟಿ ನೀಡಲು ಅನುಕೂಲವಾಗುವಂತೆ 2722 ಸ್ವಯಂಸೇವಕರನ್ನು ತರಬೇತಿ ನೀಡಿ ನೇಮಕ ಮಾಡಿಕೊಳ್ಳಲಾಗಿದೆ ಎಂದು ಆರ್‍ಸಿಎಚ್ ಜಿಲ್ಲಾ ಅಧಿಕಾರಿ ಡಾ. ಸಿ.ಆಮಿನಾ ತಿಳಿಸಿದ್ದಾರೆ.
ಕುಷ್ಠರೋಗ ಲಕ್ಷಣ ಪತ್ತೆ, ಚಿಕಿತ್ಸೆಗೆ'ಅಶ್ವಮೇಧ'ಗೃಹಸಂದರ್ಶನ ಕಾರ್ಯಕ್ರಮ
0
ಜನವರಿ 16, 2023
Tags