HEALTH TIPS

ಚಳಿಗಾಲದಲ್ಲಿ ದಿನಾ ಸ್ವಲ್ಪ ನೆಲಗಡಲೆ ತಿಂದ್ರೆ ಇಷ್ಟೊಂದು ಪ್ರಯೋಜನಗಳಿವೆ, ಗೊತ್ತಾ?

ಬಡವರ ಬಾದಾಮಿ ಎಂದು ಕರೆಯಲ್ಪಡುವ ನೆಲಗಡಲೆಯನ್ನು ಸಾಮಾನ್ಯವಾಗಿ ಎಲ್ಲಾ ಕಾಲದಲ್ಲಿ ತಿನ್ನುತ್ತೇವೆ, ಆದರೆ ಈ ಬೆಳೆ ಬರುವುದು ಚಳಿಗಾಲದಲ್ಲಿ. ಚಳಿಗಾಲದಲ್ಲಿ ನಿಮಗೆ ಹಸಿ ನೆಲಗಡಲೆ ಮಾರುಕಟ್ಟೆಯಲ್ಲಿ ಕಾಣ ಸಿಗುತ್ತದೆ. ನಮ್ಮ ಬೆಂಗಳೂರಿನಲ್ಲಿ ಕಡ್ಲೆಕಾಯಿ ಪರಿಷೆ ಕೂಡ ಮಾಡಲಾಗುವುದು. ಈ ನೆಲಗಡಲೆಯನ್ನು ಚಳಿಗಾಲದಲ್ಲಿ ನೀವು ಪ್ರತಿದಿನ ತಿನ್ನಬೇಕು, ಏಕೆ ಗೊತ್ತೇ?

ಚಳಿಗಾಲದಲ್ಲಿ ದಿನಾ ನೆಲಗಡೆಲೆ ತಿನ್ನುವುದರಿಂದ ಈ ಪ್ರಯೋಜನಗಳು ಸಿಗುವುದು:

ಚಳಿಗಾಲದಲ್ಲಿ ವ್ಯಾಯಾಮ ಮಾಡಲು ಸೋಮಾರಿತನ ತೋರುತ್ತೇವೆ, ಅಲ್ಲದೆ ಸಂಜೆ ಹೊತ್ತಿನಲ್ಲಿ ಟೀ ಹೀರುತ್ತಾ ಕರಿದ ತಿಂಡಿಗಳನ್ನು ತಿನ್ನುವುದೆಂದರೆ ಖುಷಿಯೋ ಖುಷಿ, ಆದರೆ ಇವೆಲ್ಲಾ ನಮ್ಮ ತೂಕ ಹಾಗೂ ಆರೋಗ್ಯದ ಮೇಲೆ ತುಂಬಾ ಕೆಟ್ಟ ಪರಿಣಾಮ ಬೀರುತ್ತದೆ. ದಿನಾ ವ್ಯಾಯಾಮ ತಪ್ಪದೆ ಮಾಡಿ, ಜೊತೆಗೆ ಸ್ನ್ಯಾಕ್ಸ್ ಆಗಿ ಕರಿದ ತಿಂಡಿ ಬದಲಿಗೆ ಹುರಿದ ಅಥವಾ ಬೇಯಿಸಿದ ನೆಲಗಡಲೆ ಬಳಸಿ. ಅಲ್ಲದೆ ನೆಲಗಡಲೆ ತಿಂದರೆ ಮತ್ತೊಂದು ಪ್ರಯೋಜನವೆಂದರೆ ಬೇಗನೆ ಹಸಿವು ಉಂಟಾಗುವುದಿಲ್ಲ, ಇದರಿಂದ ಅದಿಕ ತಿನ್ನುವುದನ್ನು ಕೂಡ ನಿಯಂತ್ರಿಸಬಹುದು.

ಪೋಷಕಾಂಶಗಳು: ಚಳಿಗಾಲದಲ್ಲಿ ದೊರೆಯುವ ಆಹಾರವಾಗಿರುವುದರಿಂದ ಇದನ್ನು ಚಳಿಗಾಲದಲ್ಲಿ ಹೆಚ್ಚಾಗಿ ಬಳಸುವುದರಿಂದ ನಿಮ್ಮಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚುವುದು.

ನೀವು 100 ಗ್ರಾಂ ನೆಲಗಡಲೆ ತಿಂದರೆ

567 ಕ್ಯಾಲೋರಿ, 49 ಗ್ರಾಂ ಕೊಬ್ಬು, 0 ಕೊಲೆಸ್ಟ್ರಾಲ್‌, 18mg ಸೋಡಿಯಂ, 705mg ಪೊಟಾಷ್ಯಿಯಂ, 16 ಗ್ರಾಂ, 9 ಗ್ರಾಂ ನಾರಿನಂಶ, 26 ಗ್ರಾಂ ಪ್ರೊಟೀನ್‌, ವಿಟಮಿನ್‌ ಸಿ, ಕಬ್ಬಿಣದಂಶ, ವಿಟಮಿನ್‌ ಬಿ6, ಮೆಗ್ನಿಷ್ಯಿಯಂ ದೊರೆಯುತ್ತದೆ.

ದಿನಾ 100 ಗ್ರಾಂ ನೆಲಗಡಲೆ ತಿಂದರೆ ನಿಮ್ಮ ದೇಹಕ್ಕೆ ದಿನನಿತ್ಯ ಬೇಕಾಗುವ ಪೋಷಕಾಂಶಗಳಲ್ಲಿ ಬಹುಪಾಲು ಪೋಷಕಾಂಶ ಇದರಲ್ಲಿಯೇ ದೊರೆಯುತ್ತದೆ. ಆದ್ದರಿಂದಲೇ ಇದಕ್ಕೆ ಬಡವರ ಬಾದಾಮಿ ಹೇಳುವುದು.

ಮೂಳೆಗಳ ಆರೋಗ್ಯಕ್ಕೆ ಒಳ್ಳೆಯದು

ಚಳಿಯಲ್ಲಿ ಮೂಳೆಗಳ ಆರೋಗ್ಯಕ್ಕೆ ಸ್ವಲ್ಪ ಕಡಿಮೆಯಾಗುತ್ತದೆ, ಅದರಲ್ಲೂ ಸಂಧಿವಾತದ ಸಮಸ್ಯೆ ಇರುವವರಿಗೆ ಚಳಿಗಾಲದಲ್ಲಿ ನೋವು ಹೆಚ್ಚುವುದು. ಚಳಿಗಾಲದಲ್ಲಿ ಮೂಳೆಗಳ ಆರೋಗ್ಯ ಕಾಪಾಡಿ, ಮೂಳೆಗಳನ್ನು ಬಲಪಡಿಸಲು ಇದು ಸಹಕಾರಿಯಾಗಿದೆ.

ಮಧುಮೇಹಿಗಳಿಗೆ ರುಚಿಕರವಾದ ಸ್ನ್ಯಾಕ್ಸ್

ನೆಲಗಡಲೆಯನ್ನು ಮಧುಮೇಹಿಗಳು ಧೈರ್ಯವಾಗಿ ತಿನ್ನಬಹುದು, ಇದರಿಂದ ಬಾಯಿಗೆ ರುಚಿ ಆರೋಗ್ಯಕ್ಕೂ ಒಳ್ಳೆಯದು. ಮೈ ತೂಕ ನಿಯಂತ್ರಣಕ್ಕೆ, ರಕ್ತದಲ್ಲಿ ಸಕ್ಕರೆಯಂಶ ನಿಯಂತ್ರಣಕ್ಕೆ ನೆಲಗಡಲೆ ಸಹಕಾರಿ.

ತ್ವಚೆಯ ಆರೋಗ್ಯಕ್ಕೆ ಒಳ್ಳೆಯದು:

ಚಳಿಗಾಲದಲ್ಲಿ ತ್ವಚೆ ಡ್ರೈಯಾಗುವುದು, ತ್ವಚೆ ಕಾಂತಿ ಕಳೆ ಕುಂದುವುದು ಈ ಬಗೆಯ ಸಮಸ್ಯೆ ಕಂಡು ಬರುತ್ತದೆ, ನೆಲಗಡಲೆಯಲ್ಲಿರುವ ಕೊಬ್ಬಿನಂಶ ತ್ವಚೆಯನ್ನು ಆಂತರಿಕವಾಗಿ ಪೋಷಣೆ ಮಾಡಿ ತ್ವಚೆ ಕಾಂತಿಯನ್ನು ಹೆಚ್ಚಿಸುತ್ತದೆ.

ಮೆದುಳಿನ ಆರೋಗ್ಯಕ್ಕೆ ಒಳ್ಳೆಯದು
ಪ್ರತಿದಿನ ನೆಲಗಡಲೆ ತಿಂದರೆ ಮೆದುಳಿನ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು. ಮೆದುಳು ತುಂಬಾ ಚುರುಕಾಗುವುದು.

ಗಾಲಾ ಸ್ಟೋನ್‌ ತಡೆಗಟ್ಟುತ್ತದೆ
ಗಾಲಾಸ್ಟೋನ್‌ ಸಮಸ್ಯೆ ಶೇ. 10ರಷ್ಟು ಜನರಲ್ಲಿದೆ. ದಿನಾ ನೆಲಗಡಲೆ ತಿಂದರೆ ಗಾಲಾಸ್ಟೋನ್‌ ಅಪಾಯ ಕಡಿಮೆಯಾಗುವುದು. ಇದರ ಕುರಿತು ಇನ್ನಷ್ಟು ಅಧ್ಯಯನಗಳು ನಡೆಯುತ್ತಿದೆ ಎಂದು ಹೆಲ್ತ್‌ ಲೈನ್‌ ಹೇಳಿದೆ.

ನೆಲಗಡಲೆ ತಿನ್ನುವುದರಿಂದ ಮಕ್ಕಳಿಗೆ ಈ ಪ್ರಯೋಜನಗಳು ದೊರೆಯಲಿದೆ
* ಮಕ್ಕಳ ಬೆಳವಣಿಗೆಗೆ ಸಹಕಾರಿ
ನೆಲಗಡಲೆಯಲ್ಲಿರುವ ಪೋಷಕಾಂಶಗಳು ಮಕ್ಕಳ ಬೆಳವಣಿಗೆಗೆ ಸಹಕಾರಿಯಾಗಿದೆ. ಮಕ್ಕಳ ಬೆಳವಣಿಗೆಗೆ ಪೋಷಕಾಂಶವಿರುವ ಆಹಾರ ನೀಡಬೇಕು. ಪೀನಟ್‌ ಬಟರ್‌, ಬೇಯಿಸಿದ ನೆಲಗಡಲೆ ಇವುಗಳನ್ನು ನೀಡಿ.

* ಪೋಷಕಾಂಶದ ಕೊರತೆ ತಡೆಗಟ್ಟುತ್ತದೆ
ಮಕ್ಕಳಲ್ಲಿ ಪೋಷಕಾಂಶದ ಕೊರತೆ ಉಂಟಾದರೆ ಅನೇಕ ತೊಂದರೆಗಳು ಉಂಟಾಗುತ್ತದೆ, ಇದರಿಂದ ಮಕ್ಕಳು ಆಗಾಗ ಕಾಯಿಲೆ ಬೀಳುತ್ತಾರೆ ಅಲ್ಲದೆ ಅವರ ಬೆಳವಣಿಗೆ ಕೂಡ ತಡೆಗಟ್ಟುತ್ತದೆ. ಇದರಲ್ಲಿರುವ ನಿಯಾಸಿನ್, ತಾಮ್ರದಂಶ, ಪೋಲೆಟ್, ಮ್ಯಾಂಗನೀಸ್, ಬಯೋಟಿನ್, ರಂಜಕ, ಮೆಗ್ನಿಷ್ಯಿಯಂಶ ಮಕ್ಕಳಲ್ಲಿ ಪೋಷಕಾಂಶದ ಕೊರತೆ ತಡೆಗಟ್ಟುತ್ತದೆ.

* ಮಕ್ಕಳ ಮೆದುಳು ಚುರುಕಾಗಿಸುತ್ತದೆ
* ಮಕ್ಕಳಲ್ಲಿ ಒಬೆಸಿಟಿ ಸಮಸ್ಯೆ ತಡೆಗಟ್ಟಲು ನೆಲಗಡಲೆ ಸಹಕಾರಿಯಾಗಿದೆ.

ಗರ್ಭಿಣಿಯರಿಗೂ ಒಳ್ಳೆಯದು
ನೆಲಗಡಲೆ ಗರ್ಭಿಣಿಯರಿಗೂ ಅತ್ಯುತ್ತಮವಾದ ಸ್ನ್ಯಾಕ್ಸ್ ಆಗಿದೆ. ಇದು ಭ್ರೂಣದಲ್ಲಿರುವ ಮಗುವಿನ ಬೆಳವಣಿಗೆಗೆ ಸಹಕಾರಿ, ದಿನಾ ಸ್ವಲ್ಪ ನೆಲಗಡಲೆಯನ್ನು ಸ್ನ್ಯಾಕ್ಸ್ ಆಗಿ ತೆಗೆದುಕೊಳ್ಳಿ.

ನೆಲಗಡಲೆಯಿಂದ ಅಡ್ಡಪರಿಣಾಮವಿದೆಯೇ?
ಸಾಮಾನ್ಯವಾಗಿ ನೆಲಗಡಲೆಯಿಂದ ಯಾವುದೇ ಅಡ್ಡಪರಿಣಾಮವಿಲ್ಲ, ಆದರೆ ಕೆಲವೊಮ್ಮೆ ಇದನ್ನು ತಿಂದಾಗ ಕೆಲವರಿಗೆ ಬೇಧಿ ಉಂಟಾಗುವುದು. ನೆಲಗಡಲೆಯನ್ನು ಸರಿಯಾಗಿ ಸಂಗ್ರಹಿಸಿಡದಿದ್ದರೆ ಅದನ್ನು ಬಳಸಿದಾಗ ಫುಡ್‌ ಪಾಯಿಸನ್‌ ಆಗಿ ಈ ರೀತಿಯಾಗುವುದು.

ನೆಲಗಡಲೆ ಅಲರ್ಜಿ ಇದ್ದರೆ: ಕೆಲವರಿಗೆ ಒಂದೊಂದು ಆಹಾರ ಆಗಿ ಬರಲ್ಲ, ನೆಲಗಡಲೆ ಅಲರ್ಜಿ ಸಮಸ್ಯೆಯಿದ್ದರೆ ತಿನ್ನಬೇಡಿ.


 

 

 

 

 

 

 

Tags

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries