ಬದಿಯಡ್ಕ: ಮಾನ್ಯ ಸಮೀಪದ ಕಾರ್ಮಾರು ಮಹಾವಿಷ್ಣು ಕ್ಷೇತ್ರದ ವಾರ್ಷಿಕ ಜಾತ್ರಾ ಮಹೋತ್ಸವದ ಅಂಗವಾಗಿ ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ವಿದುಷಿ ಯೋಗೀಶ್ವರಿ ಜಯಪ್ರಕಾಶ್, ವೈಷ್ಣವಿ ನಾಟ್ಯಾಲಯ ಪುತ್ತೂರು ಇದರ ಬದಿಯಡ್ಕ ಹಾಗೂ ಕುಂಬಳೆ ಶಾಖೆಯ ವಿದ್ಯಾರ್ಥಿಗಳಿಂದ ನೃತ್ಯಾರ್ಪಣಂ ಕಾರ್ಯಕ್ರಮ ಜನಮನಸೂರೆಗೊಂಡಿತು.
ಹಾಡುಗಾರಿಕೆಯಲ್ಲಿ ರಾಷ್ಟ್ರಪ್ರಶಸ್ತಿ ವಿಜೇತ ವಿದ್ವಾನ್.ವೆಳ್ಳಿಕೋತ್ ವಿಷ್ಣು ಭÀಟ್, ವಸಂತಕುಮಾರ್ ಗೋಸಾಡ, ನಟುವಾಂಗ ವಿದುಷಿ ಯೋಗೇಶ್ವರೀ ಜಯಪ್ರಕಾಶ್ ಹಾಗೂ ಕುಂಬಳೆ ಶಾಖೆಯ ಶಿಕ್ಷಕಿ ವಿದುಷಿ ಹರ್ಷಿತ ಕನಕಪಾಡಿ, ಮೃದಂಗದಲ್ಲಿ ಗೀತೇಶ್ ಕುಮಾರ್ ನೀಲೇಶ್ವರ, ಕೊಳಲು ರಾಜಗೋಪಾಲ ಕಾಞಂಗಾಡು, ಕೀಬೋರ್ಡ್‍ನಲ್ಲಿ ಬಾಬಣ್ಣ ಪುತ್ತೂರು, ರಿದಂಪ್ಯಾಡ್‍ನಲ್ಲಿ ರವಿಕಾಂತ್ ಮಾನ್ಯ ಸಹಕರಿಸಿದ್ದರು.