ಸನ್ನಿಧಾನಂ: ಶಬರಿಮಲೆಗೆ ಮಹಿಳೆಯರ ಪ್ರವೇಶ ವಿಚಾರಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ವಿಭಿನ್ನ ತೀರ್ಪು ನೀಡಿದ್ದ ನ್ಯಾಯಮೂರ್ತಿ ಇಂದು ಮಲ್ಹೋತ್ರಾ ಶಬರಿಮಲೆಗೆ ಭೇಟಿ ನೀಡಿದ್ದಾರೆ.
ಶುಕ್ರವಾರ ಸಂಜೆ ಸನ್ನಿಧಿಗೆ ತಲುಪಿದ ಬಳಿಕ ಶನಿವಾರ ಬೆಳಗ್ಗೆ ದರ್ಶನ ಪಡೆದರು. ಪಂಬಾದಿಂದ ಡೋಲಿ ಮೂಲಕ ಸನ್ನಿಧಿಗೆ ತಲುಪಿದ್ದರು.
ವಿವಾದಾತ್ಮಕ ಶಬರಿಮಲೆ ಪ್ರವೇಶ ವಿಚಾರದಲ್ಲಿ ತೀರ್ಪು ನೀಡಿದ್ದ ಐವರು ನ್ಯಾಯಮೂರ್ತಿಗಳ ಪೀಠದಲ್ಲಿ ಇಂದು ಮಲ್ಹೋತ್ರಾ ಏಕೈಕ ಮಹಿಳಾ ನ್ಯಾಯಾಧೀಶರಾಗಿದ್ದಾರೆ. ಇಂದು ಮಲ್ಹೋತ್ರ ಮಾತ್ರವೇ ಮಹಿಳೆಯರ ಪ್ರವೇಶವನ್ನು ವಿರೋಧಿಸಿದ್ದರು.
ನ್ಯಾಯಾಲಯವು ಧಾರ್ಮಿಕ ಭಾವನೆಗಳು ಮತ್ತು ಧಾರ್ಮಿಕ ಆಚರಣೆಗಳನ್ನು ಸಂಪೂರ್ಣವಾಗಿ ಸಾಮಾನ್ಯ ವಿಷಯಗಳಾಗಿ ಹಸ್ತಕ್ಷೇಪ ಮಾಡಲು ಸಾಧ್ಯವಿಲ್ಲ ಎಂದು ನ್ಯಾಯಮೂರ್ತಿ ಇಂದು ಮಲ್ಹೋತ್ರಾ ಅಭಿಪ್ರಾಯಪಟ್ಟಿದ್ದಾರೆ. ಧಾರ್ಮಿಕ ವಿಷಯಗಳಲ್ಲಿ ನ್ಯಾಯವನ್ನು ನಿರ್ಧರಿಸಲು ಸಾಧ್ಯವಿಲ್ಲ ಎಂದು ಅವರು ತಿಳಿಸಿದ್ದರು. ಸಂವಿಧಾನದ 25 ಮತ್ತು 26 ನೇ ವಿಧಿಯ ಅಡಿಯಲ್ಲಿ, ಶಬರಿಮಲೆ ದೇವಸ್ಥಾನ ಮತ್ತು ಅದರ ಆರಾಧನಾ ಪದ್ದತಿಗೆ ರಕ್ಷಣೆ ಖಾತರಿಪಡಿಸುತ್ತದೆ ಎಂದು ಅವರು ಹೇಳಿದ್ದರು.
ನ್ಯಾಯಮೂರ್ತಿ ಇಂದು ಮಲ್ಹೋತ್ರಾ ಶಬರಿಮಲೆಗೆ ಭೇಟಿ: ಮಹಿಳೆಯ ಪ್ರವೇಶ ನಿರ್ಧಾರದ ಬಗ್ಗೆ ತೀರ್ಪು ನೀಡಿದ್ದ ತಂಡದಲ್ಲಿದ್ದ ನ್ಯಾಯಾಧೀಶೆ
0
ಜನವರಿ 14, 2023