ಕಾಸರಗೋಡು: ಆಲಂಗೋಡು ಶ್ರೀ ಧೂಮಾವತೀ ಮಹಿಳಾ ಭಕ್ತವೃಂದ ಮನ್ನಿಪ್ಪಾಡಿ ವತಿಯಿಂದಸ್ವಾಮಿ ವಿವೇಕಾನಂದ ಜಯಂತಿ ದಿನದಂದು ಕನಕದಾಸ ಪ್ರಶಸ್ತಿ ವಿಜೇತರು, ಹರಿದಾಸ ಜಯಾನಂದ ಕುಮಾರ್ ಹೊಸದುರ್ಗ ಅವರಿಗೆ ಗುರುವಂದನಾ ಕಾರ್ಯಕ್ರಮ ಜರುಗಿತು.
ಮಧೂರು ಗ್ರಾಪಂ ಸದಸ್ಯ ಉಮೇಶ್ ಗಟ್ಟಿ ಅಧ್ಯಕ್ಷತೆ ವಹಿಸಿದ್ದರು. ಆಲಂಗೋಡು ಶ್ರೀ ಧೂಮಾವತೀ ದೈವಸ್ಥಾನ ಸಏವಾ ಸಮಿತಿ ಅಧ್ಯಕ್ಷ ಉದಯಕುಮಾರ್ ಮನ್ನಿಪ್ಪಾಡಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ ಭಕ್ತಿ ಹಾಗೂ ಶ್ರದ್ಧೆಯಿಂದ ಶ್ರೀದೇವರಿಗೆ ಭಜನಾಸೇವೆ ಸಲ್ಲಿಸುವ ಮೂಲಕ ನಮಗೆ ಭಗವಂತನನ್ನು ಕಂಡುಕೊಳ್ಳಲು ಸಾಧ್ಯ ಎಂದು ತಿಳಿಸಿದರು.ಶ್ರೀ ಮುತ್ತಪ್ಪ ಭಜನಾ ಸಂಘದ ಅಧ್ಯಕ್ಷೆ ನೇತ್ರಾವತಿ, ಉಷಾರಾಜನ್, ಸರೋಜ, ನಳಿನಿ, ಗಿರಿಜಾ ಗಟ್ಟಿ, ಪುಷ್ಪಾಗಟ್ಟಿ, ಪೂರ್ಣಿಮಾ ಮುಂತಾದವರು ಉಪಸ್ಥಿತರಿದ್ದರು. ರೇಖಾ ಮನ್ನಿಪ್ಪಾಡಿ ಸ್ವಾಗತಿಸಿದರು. ಲತಾ ನಂದನ್ ಕಾರ್ಯಕ್ರಮ ನಿರೂಪಿಸಿದರು. ಸಾವಿತ್ರಿ ಮನ್ನಿಪ್ಪಾಡಿ ಸನ್ಮಾನಿತರ ಪರಿಚಯ ನೀಡಿದರು. ವನಿತಾ ಜಯಂತ ವಂದಿಸಿದರು.
ಹರಿದಾಸ ಜಯಾನಂದ ಕುಮಾರ್ ಹೊಸದುರ್ಗ ಅವರಿಗೆ ಸನ್ಮಾನ
0
ಜನವರಿ 14, 2023
Tags