ಬದಿಯಡ್ಕ: ಶ್ರೀ ವಿಷ್ಣುಮೂರ್ತಿ ಸೇವಾ ಸಮಿತಿ ಬದಿಯಡ್ಕ ಇದರ ಆಶ್ರಯದಲ್ಲಿ ಏಪ್ರಿಲ್ ತಿಂಗಳಲ್ಲಿ ಒತ್ತೇಕೋಲ ಕೆಂಡಸೇವೆ ಮಹೋತ್ಸವ ನಡೆಯಲಿರುವುದು. ಇದರ ಪೂರ್ವ ಬಾವಿಯಾಗಿ ಕೊಳ್ಳಿಮಹೂರ್ತ ಸಮಾರಂಭ ವಳಮಲೆ ಜನನದ ವಿಷ್ಣುಮೂರ್ತಿ ದೇವಸ್ಥಾನದ ಸಮೀಪ ನಡೆಯಿತು. ಬಳಿಕ ಮೆರವಣಿಗೆ ಮೂಲಕ ಮುಹೂರ್ತದ ಕೊಳ್ಳಿಯನ್ನು ಬೋಳುಕಟ್ಟೆ ಪರಿಸರಕ್ಕೆ ವಾದ್ಯ ಚೆಂಡೆಯಮೆರವಣಿಯೊಂದಿಗೆ ತರಲಾಯಿತು.
ಸೇವಾ ಸಮಿತಿ ಅಧ್ಯಕ್ಷ ತಿರುಪತಿ ಕುಮಾರ್ ಭಟ್, ಪ್ರಧಾನ ಕಾರ್ಯದರ್ಶಿ ಪದ್ಮನಾಭ ಶೆಟ್ಟಿ ವಳಮಲೆ, ಉಪಾಧ್ಯಕ್ಷರಾದ ಪಿ.ಜಿ. ಚಂದ್ರಹಾಸ ರೈ, ಗಿರೀಶ್ ರೈ ವಳಮಲೆ, ಕೋಶಾಧಿಕಾರಿ ಜಗನ್ನಾಥ ರೈ ಪೆರಡಾಲ, ಪದಾಧಿಕಾರಿಗಳಾದ ಅಶೋಕ್ ರೈ ಕೊರೆಕ್ಕಾನ, ಜಗನ್ನಾಥ ರೈ ಕೊರೆಕ್ಕಾನ, ಲಕ್ಷ್ಮಣ ಪ್ರಭು, ರಾಮ ಮುರಿಯಂಕೂಡ್ಲು, ಸುಂದರ ಸಿ.ಎಚ್., ನಾರಾಯಣ ಮಣಿಯಾಣಿ, ವಿಜಯ ಸಾಯಿ ಮೊದಲಾದವರು ನೇತೃತ್ವ ನೀಡಿದರು. ಸದಸ್ಯರು ಭಕ್ತರು ಉಪಸ್ಥಿತರಿದ್ದರು.
ಬದಿಯಡ್ಕದ ಶ್ರೀ ವಿಷ್ಣುಮೂರ್ತಿ ಸೇವಾ ಸಮಿತಿಯಿಂದ ಕೊಳ್ಳಿಮುಹೂರ್ತ
0
ಜನವರಿ 13, 2023