ತಿರುವನಂತಪುರಂ: ಪತ್ತನಂತಿಟ್ಟ ಮಲ್ಲಪ್ಪಳ್ಳಿಯಲ್ಲಿ ನಡೆದ ಕ್ರೈಸ್ತ ದೀಕ್ಷಾಸ್ನಾನ ಸಮಾರಂಭದಲ್ಲಿ ಪಾಲ್ಗೊಂಡಿದ್ದವರÁ್ತಹಾರ ವಿಷಬಾಧೆಗೊಳಗಾದ ಘಟನೆ ನಡೆದಿದ್ದು, ಆರೋಗ್ಯ ಸಚಿವೆ ವೀಣಾ ಜಾರ್ಜ್ ತನಿಖೆಗೆ ಆದೇಶಿಸಿದ್ದಾರೆ.
ಘಟನೆ ಕುರಿತು ತನಿಖೆ ನಡೆಸಿ ತಕ್ಷಣ ವರದಿ ಸಲ್ಲಿಸುವಂತೆ ಆಹಾರ ಸುರಕ್ಷತಾ ಇಲಾಖೆ ಆಯುಕ್ತರಿಗೆ ಸೂಚಿಸಲಾಗಿದೆ.
ಕಿರ್ವಾಯಿಪುರದ ಮಲ್ಲಪ್ಪಳ್ಳಿ ನಿವಾಸಿ ರೋಜ್ ಎಂಬುವರ ಪುತ್ರಿಯ ದೀಕ್ಷಾಸ್ನಾನ ಸಮಾರಂಭಕ್ಕೆ ಬಂದಿದ್ದವರಿಗೆiÁಹಾರ ವಿಷವಾಗಿದೆ. ಸುಮಾರು 70 ಮಂದಿಗೆ ಭೇದಿ ಮತ್ತು ವಾಂತಿ ಕಾಣಿಸಿಕೊಂಡಿದೆ. ಕಾರ್ಯಕ್ರಮದಲ್ಲಿ ಭಾಗವಹಿಸಿದ ಮರುದಿನದಿಂದ(ನಿನ್ನೆಯಿಂದ) ಜನರು ಆರೋಗ್ಯ ಸಮಸ್ಯೆ ಎದುರಿಸುತ್ತಿದ್ದಾರೆ. ಅಸ್ವಸ್ಥತೆ ಅನುಭವಿಸಿದವರು ಜಿಲ್ಲೆಯ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದರು.
ಚೆಂಗನ್ನೂರ್ ಓವನ್ ಫ್ರೆಶ್ ಕ್ಯಾಟರಿಂಗ್‍ನಿಂದ ಆಹಾರವನ್ನು ತರಲಾಗಿದೆ. ಮೀನಿನ ಪದಾರ್ಥದಿಂದ ವಿಷಬಾಧೆ ಉಂಟಾಗಿದೆ ಎಂದು ವರದಿಯಾಗಿದೆ. ಘಟನೆಯಲ್ಲಿ ಮನೆಯವರು ಕೇಟರಿಂಗ್ ಸಂಸ್ಥೆಯ ವಿರುದ್ಧ ಪೋಲೀಸ್ ದೂರು ದಾಖಲಿಸಿದ್ದಾರೆ.
ದೀಕ್ಷಾಸ್ನಾನ ಸಮಾರಂಭದಲ್ಲಿ ಭಾಗವಹಿಸುವವರಿಗೆ ಆಹಾರ ವಿಷಬಾಧೆ: ತುರ್ತು ವರದಿ ಸಲ್ಲಿಸುವಂತೆ ಆರೋಗ್ಯ ಸಚಿವರಿಂದ ಸೂಚನೆ
0
ಜನವರಿ 01, 2023