ಭೋಪಾಲ್: ಇಡೀ ಜಗತ್ತು ಭಾರತದತ್ತ ಆಶಾಭಾವನೆಯಿಂದ ನೋಡುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.
ಮಧ್ಯಪ್ರದೇಶದ ಇಂದೋರ್‌ನಲ್ಲಿ ನಡೆದ 17ನೇ ಪ್ರವಾಸಿ ಭಾರತೀಯ ದಿವಸ್‌ನಲ್ಲಿ ಮಾತನಾಡಿದ ಅವರು, ವಿದೇಶಗಳಲ್ಲಿ ವಾಸಿಸುವ ಪ್ರತಿಯೊಬ್ಬ ಭಾರತೀಯ ಮೂಲದ ವ್ಯಕ್ತಿಯೂ ಭಾರತದ ರಾಯಭಾರಿ ಎಂದರು.
'ವಿಶೇಷವಾಗಿ ಕೋವಿಡ್ -19 ಸಾಂಕ್ರಾಮಿಕ ಸಂಕಷ್ಟದ ಹೊರತಾಗಿಯೂ ಭಾರತವು ಹಲವಾರು ಕ್ಷೇತ್ರಗಳಲ್ಲಿ ಹೆಚ್ಚಿನ ಬೆಳವಣಿಗೆಯನ್ನು ಸಾಧಿಸಿರುವುದರಿಂದ ಇಡೀ ಜಗತ್ತು ನಮ್ಮನ್ನು ತೀವ್ರವಾಗಿ ಗಮನಿಸುತ್ತಿದೆ. ಅಡೆ-ತಡೆಗಳ ನಡುವೆಯೂ ಭಾರತದ ಶಕ್ತಿ ಹೇಗೆ ಬಲವಾಗುತ್ತಿದೆ ಎಂಬುದನ್ನು ತಿಳಿಯಲು ಪ್ರಯತ್ನಿಸುತ್ತಿವೆ. ಮುಂಬರುವ ವರ್ಷಗಳಲ್ಲಿ ಭಾರತ ಇನ್ನಷ್ಟು ಪ್ರಗತಿ ಸಾಧಿಸಲಿದ್ದು, ವಿವಿಧ ದೇಶಗಳಲ್ಲಿ ವಾಸಿಸುವ ಪ್ರತಿಯೊಬ್ಬ ಭಾರತೀಯರ ಪಾತ್ರವು ಮುಖ್ಯವಾಗಿದೆ' ಎಂದು ಮೋದಿ ಹೇಳಿದರು.
30 ನಿಮಿಷಗಳ ಭಾಷಣದಲ್ಲಿ ಪ್ರಧಾನಿ ಮೋದಿ ಇಂಗ್ಲಿಷ್‌ನಲ್ಲಿಯೂ ಸಂಕ್ಷಿಪ್ತವಾಗಿ ಮಾತನಾಡಿದರು. ಅನಿವಾಸಿ ಭಾರತೀಯರು ದೇಶದ ಪ್ರಗತಿಗೆ ಕೊಡುಗೆ ನೀಡುವಂತೆ ಸಭೆಗೆ ಮನವಿ ಮಾಡಿದರು.
ಪ್ರತಿಯೊಬ್ಬ ಅನಿವಾಸಿ ಭಾರತೀಯರು ಭಾರತದ ಪ್ರಗತಿಯ ಬಗ್ಗೆ ತಿಳಿದುಕೊಳ್ಳಬೇಕು. ಈ ವರ್ಷ ಭಾರತವು ಜಿ 20 ಶೃಂಗದ ಅಧ್ಯಕ್ಷ ಸ್ಥಾನವನ್ನು ವಹಿಸಿಕೊಂಡಿದೆ. ಇದು ಭಾರತದ ಸುಸ್ಥಿರತೆಯ ಗುರಿಗಳನ್ನು ತೋರಿಸಲು ಉತ್ತಮ ಅವಕಾಶವಾಗಿದೆ. ಇದರಲ್ಲಿ ಜನರೂ ಭಾಗಿಯಾಗುವಂತೆ ಮಾಡುತ್ತೇವೆ
ಎಂದರು.