ತಿರುವನಂತಪುರ: ತಿರುವನಂತಪುರದಲ್ಲಿ ನಿನ್ನೆಯಿಂದ ಎಬಿವಿಪಿ 38ನೇ ರಾಜ್ಯ ಸಮ್ಮೇಳನ ಆರಂಭಗೊಂಡಿತು. ಸಾರ್ವಜನಿಕ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಎಬಿವಿಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಆಶಿಶ್ ಚೌಹಾಣ್ ಅವರು ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಜಾರಿಗೆ ತರಲು ಕೇರಳ ಸರ್ಕಾರ ಸಿದ್ಧವಾಗಬೇಕು ಎಮದು ಕರೆನೀಡಿದರು. ಎಡಪಂಥೀಯ ಇತಿಹಾಸಕಾರರು ಭಾರತದ ಸಂಸ್ಕøತಿಯನ್ನು ಕೆಡಿಸುತ್ತಿದ್ದಾರೆ ಎಂದರು.
ಎಬಿವಿಪಿ ರಾಜ್ಯ ಕಾರ್ಯದರ್ಶಿ ಎನ್.ಸಿ.ಟಿ ಶ್ರೀಹರಿ ಮಾತನಾಡಿ, ಎಡ ಸರಕಾರವು ಭ್ರμÁ್ಟಚಾರ ಮಾಡಲು ಸ್ವಯಂ ಉದ್ಯೋಗಿ ಖಾಸಗಿ ಕಂಪನಿಗಳನ್ನು ಕೇರಳಕ್ಕೆ ಆಹ್ವಾನಿಸುತ್ತಿದೆ ಎಂದರು.
ರಾಷ್ಟ್ರೀಯ ಶಿಕ್ಷಣ ನೀತಿಯನ್ನು ವಿರೋಧಿಸಿ ಕೇರಳದ ಎಲ್ಲಾ ಕಲೆ ಮತ್ತು ಕರಕುಶಲ ಶಿಕ್ಷಣ ಸಂಸ್ಥೆಗಳಲ್ಲಿ ಹಿಂಬಾಗಿಲ ನೇಮಕಾತಿಗಳನ್ನು ಮಾಡುತ್ತಿರುವ ಸರಕಾರವು ಕೇವಲ ಭ್ರμÁ್ಟಚಾರವನ್ನು ಮಾತ್ರ ಗಮನದಲ್ಲಿಟ್ಟುಕೊಂಡು ಸ್ವಯಂ ಬೆಂಬಲಿತ ಖಾಸಗಿ ಸಂಸ್ಥೆಗಳನ್ನು ಕೇರಳಕ್ಕೆ ಆಹ್ವಾನಿಸುತ್ತಿದೆ ಎಂದು ಶ್ರೀಹರಿ ಆರೋಪಿಸಿದರು.
ಸರಕಾರ ಉನ್ನತ ಶಿಕ್ಷಣ ಕ್ಷೇತ್ರವನ್ನು ಹಾಳು ಮಾಡುತ್ತಿದೆ ಎಂದು ಶ್ರೀಹರಿ ಹೇಳಿದರು.
ಎಬಿವಿಪಿ ಕೇಂದ್ರ ಕಾರ್ಯಕಾರಿ ಸಮಿತಿ ಸದಸ್ಯ ಶ್ರವಣ್ ಬಿ.ರಾಜ್ ಕೇರಳದಲ್ಲಿ ಸಂಶೋಧನಾ ಕ್ಷೇತ್ರದ ಬೆಳವಣಿಗೆ ದಿನದಿಂದ ದಿನಕ್ಕೆ ಕುಸಿಯುತ್ತಿದೆ ಎಂದು ಸೂಚಿಸಿದರು. ಸಾಮಾನ್ಯ ಸಭೆಯಲ್ಲಿ ಎಬಿವಿಪಿ ರಾಜ್ಯ ಜಂಟಿ ಕಾರ್ಯದರ್ಶಿಗಳಾದ ಕಲ್ಯಾಣಿ ಚಂದ್ರನ್, ಎಸ್.ಅರವಿಂದ್, ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯೆ ಅವನಿ ಟಿ.ವಿ. ಮಾತನಾಡಿದರು. ಎಬಿವಿಪಿ ತಿರುವನಂತಪುರ ಜಿಲ್ಲಾ ಕಾರ್ಯದರ್ಶಿ ಸ್ಟೀಫನ್ ಸ್ಟೀಫನ್ ಸ್ವಾಗತಿಸಿ, ಜಿಲ್ಲಾ ಸಮಿತಿ ಸದಸ್ಯೆ ಬಿ.ಆರ್.ಗೌರಿ ವಂದಿಸಿದರು. ಎಬಿವಿಪಿ 38ನೇ ರಾಜ್ಯ ಸಮ್ಮೇಳನದ ಅಂಗವಾಗಿ ನಡೆದ ವಿದ್ಯಾರ್ಥಿ ಸಮಾವೇಶ ಟ್ಯಾಗೋರ್ ರಂಗಮಂದಿರದಿಂದ ಆರಂಭವಾಯಿತು. ಸುಮಾರು 3000ಕ್ಕೂ ಹೆಚ್ಚು ಕಾರ್ಯಕರ್ತರು ಪಾಲ್ಗೊಂಡಿದ್ದ ರ್ಯಾಲಿಯು ನಾಯನಾರ್ ಪಾರ್ಕ್‍ನಲ್ಲಿ ಕೊನೆಗೊಂಡಿತು.
ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಸಂಪೂರ್ಣವಾಗಿ ಜಾರಿಗೆ ತರಲು ಕೇರಳ ಸರ್ಕಾರ ಸಿದ್ಧವಾಗಿರಬೇಕು; ಆಶಿಶ್ ಚೌಹಾಣ್: ಎಬಿವಿಪಿ ರಾಜ್ಯ ಸಮ್ಮೇಳನ ಉದ್ಘಾಟನೆ
0
ಜನವರಿ 16, 2023