ತ್ರಿಶೂರ್: ಹೊಸ ವμರ್Áಚರಣೆಗೆಂದು ನೀರಿನ ಟ್ಯಾಂಕ್ ಮೇಲೆ ಹತ್ತಿದ ವ್ಯಕ್ತಿಯನ್ನು ಅಗ್ನಿಶಾಮಕ ದಳ ರಕ್ಷಿಸಿದೆ. ಹೊಸ ವμರ್Áಚರಣೆಗಾಗಿ ತ್ರಿಶೂರ್ ಕಾಪೆರ್Çರೇಷನ್ ವ್ಯಾಪ್ತಿಯ ಡಿವಿಷನ್ 3ರಲ್ಲಿ ನೀರಿನ ಟ್ಯಾಂಕ್ ಮೇಲೆ ಹತ್ತಿದ ವಿಯೂರು ಕುಳಂಗರ ಮನೆಯಲ್ಲಿ ಸುಜೀಶ್ (45) ಎಂಬಾತನನ್ನು ರಕ್ಷಿಸಲಾಗಿದೆ.
ಸುಜೀಶ್ ಮತ್ತು ಆತನ ಸ್ನೇಹಿತ ಶಿಜೋ ಮಧ್ಯರಾತ್ರಿ ನೀರಿನ ಟ್ಯಾಂಕ್ ಮೇಲೆ ಹತ್ತಿದ್ದರು. ಈ ನಡುವೆ ಶಿಜೋ ಆಕಸ್ಮಿಕವಾಗಿ ಕೆಳಗೆ ಬಿದ್ದರು. ಬಳಿಕ ಸ್ಥಳೀಯರು ಆತನನ್ನು ರಕ್ಷಿಸಲು ಮುಂದಾದರು. ಆದರೆ ವಿಫಲರಾದ ಹಿನ್ನೆಲೆಯಲ್ಲಿ ಅಗ್ನಿಶಾಮಕ ದಳದವರು ಸಹಾಯಕ್ಕೆ ಬಂದರು.
40 ಅಡಿ ಎತ್ತರದ ಏಣಿಯನ್ನು ಬಳಸಲಾಗಿದೆ. ನೀರಿನ ಟ್ಯಾಂಕ್‍ನಲ್ಲಿ ಅಗ್ನಿಶಾಮಕ ಮತ್ತು ರಕ್ಷಣಾ ಅಧಿಕಾರಿಗಳಾದ ವಿ. ಎಸ್.ಸ್ಮಿನೇಶ್ ಕುಮಾರ್, ವಿ.ವಿ. ಜಿಮೋದ್ ಅವರು ಮೇಲಕ್ಕೆ ಹತ್ತಿ ಸುಜೀಶ್ ನನ್ನು ಹಗ್ಗ ಮತ್ತು ಬಲೆಯಿಂದ ಕಟ್ಟಿ ಸುರಕ್ಷಿತವಾಗಿ ರಕ್ಷಿಸಿದರು.
ಹೊಸ ವರ್ಷದ ಆಚರಣೆಯ ಸಂದರ್ಭ ನೀರಿನ ತೊಟ್ಟಿಯಲ್ಲಿ ಸಿಲುಕಿದ ವ್ಯಕ್ತಿ: ಅಗ್ನಿಶಾಮಕ ದಳದಿಂದ ರಕ್ಷಣೆ
0
ಜನವರಿ 01, 2023