ಕೋಝಿಕ್ಕೋಡ್: ಕೆಲವು ಚಿತ್ರಗಳು ಅರೇಬಿಕ್ ಭಾಷೆಯನ್ನು ಭಯೋತ್ಪಾದಕ ಭಾಷೆ ಎಂದು ಬಿಂಬಿಸಲು ಪ್ರಯತ್ನಿಸುತ್ತಿವೆ ಎಂದು ಲೋಕೋಪಯೋಗಿ ಸಚಿವ ಪಿಎ ಮುಹಮ್ಮದ್ ರಿಯಾಝ್ ಹೇಳಿದ್ದಾರೆ.
ಕೋಝಿಕ್ಕೋಡ್ ಟೌನ್ ಹಾಲ್ ನಲ್ಲಿ ನಿನ್ನೆ ಆಯೋಜಿಸಲಾಗಿದ್ದ ಭಾಷಾ ವಿಚಾರ ಸಂಕಿರಣದಲ್ಲಿ ಮೊಹಮ್ಮದ್ ರಿಯಾಝ್ ಮಾತನಾಡಿದರು.
ಕೇರಳ ಸರಕಾರ ಇಂತಹ ಕ್ರಮಗಳನ್ನು ತೀವ್ರವಾಗಿ ವಿರೋಧಿಸುತ್ತಿದೆ ಎಂದರು. ಭಯೋತ್ಪಾಧನೆಯನ್ನು ಒಂದೇ ಭಾಷೆಗೆ ಸೀಮಿತಗೊಳಿಸುವ ಪ್ರಯತ್ನ ಮಾಡಲಾಗಿದೆ. ಎಲ್ಲಾ ಭಾಷೆಗಳನ್ನು ಗೌರವಿಸಲು, ಪ್ರಚಾರ ಮಾಡಲು ಮತ್ತು ಸಮಾನವಾಗಿ ಕಲಿಸಲು ಅವಕಾಶವನ್ನು ಸೃಷ್ಟಿಸುವ ನೀತಿಯನ್ನು ಸರ್ಕಾರ ಅಳವಡಿಸಿಕೊಂಡಿದೆ. ಅರೇಬಿಕ್ ಭಾಷೆ ಮತ್ತು ವಿವಿಧತೆಯಲ್ಲಿ ಏಕತೆಯನ್ನು ಕಣ್ಣಿನ ರೆಪ್ಪೆಯಂತೆ ಕಾಪಾಡುವ ಸರಕಾರ ಇದಾಗಿದೆ. ಭಾರತದ ಎಲ್ಲಾ ಭಾμÉಗಳನ್ನು ರಕ್ಷಿಸುವ ಜವಾಬ್ದಾರಿಯನ್ನು ರಾಜ್ಯ ಸರ್ಕಾರ ನಿರ್ವಹಿಸಲಿದೆ ಎಂದು ಮುಹಮ್ಮದ್ ರಿಯಾಝ್ ಹೇಳಿದ್ದಾರೆ.
ಸಿನಿಮಾಗಳಲ್ಲಿ ಅರೇಬಿಕ್ ಅನ್ನು ಭಯೋತ್ಪಾದಕ ಭಾಷೆ ಎಂದು ಬಿಂಬಿಸುವ ಯತ್ನ: ಎಲ್ಲಾ ಭಾಷೆಯನ್ನು ಸಮಾನವಾಗಿ ಪರಿಗಣಿಸುವ ಕಾಳಜಿ ರಾಜ್ಯ ಸರ್ಕಾರದ್ದು: ಮಹಮ್ಮದ್ ರಿಯಾಝ್
0
ಜನವರಿ 05, 2023