ಕೊಚ್ಚಿ: ಹೆಣ್ಣನ್ನು ಗೌರವಿಸುವುದು ಹಳೇ ಪದ್ಧತಿಯಲ್ಲ ಎಂಬುದನ್ನು ಪ್ರತಿಯೊಬ್ಬ ಹುಡುಗನೂ ಅರ್ಥಮಾಡಿಕೊಳ್ಳಬೇಕು ಎಂದು ಹೈಕೋರ್ಟ್ ಹೇಳಿದೆ.
ಸಂಪೂರ್ಣ ಅನುಮತಿಯಿಲ್ಲದೆ ಮಹಿಳೆಯರ ದೇಹವನ್ನು ಮುಟ್ಟಬಾರದು ಎಂದು ಹುಡುಗರಿಗೆ ಕಲಿಸಬೇಕು ಎಂದು ನ್ಯಾಯಮೂರ್ತಿ ದೇವನ್ ರಾಮಚಂದ್ರನ್ ಹೇಳಿದ್ದಾರೆ.
ಕಾಲೇಜಿನಲ್ಲಿ ಬಾಲಕಿಯೊಂದಿಗೆ ಅನುಚಿತವಾಗಿ ವರ್ತಿಸಿದ ಆರೋಪದ ಮೇಲೆ ಪ್ರಾಂಶುಪಾಲರು ಕೈಗೊಂಡಿರುವ ಶಿಸ್ತು ಕ್ರಮವನ್ನು ಪ್ರಶ್ನಿಸಿ ವಿದ್ಯಾರ್ಥಿಯೊಬ್ಬ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ದೇವನ್ ರಾಮಚಂದ್ರನ್ ಅವರು ಈ ಆದೇಶ ನೀಡಿದ್ದಾರೆ.
ಕೊಲ್ಲಂ ಇಂಜಿನಿಯರಿಂಗ್ ಕಾಲೇಜಿನಲ್ಲಿ ಈ ಘಟನೆ ನಡೆದಿದೆ. ಕಾಲೇಜಿನ ಆಂತರಿಕ ಸಮಿತಿಯು ವಿದ್ಯಾರ್ಥಿಯನ್ನು ತಪ್ಪಿತಸ್ಥ ಎಂದು ಘೋಷಿಸಿತ್ತು. ನಂತರ ಪ್ರಾಂಶುಪಾಲರು ಶಿಸ್ತು ಕ್ರಮ ಕೈಗೊಂಡರು. ಆದರೆ ಪ್ರಾಂಶುಪಾಲರು ತಮ್ಮ ಪರ ಟಿiಟuvu ಕೇಳದೆ ಕ್ರಮ ಕೈಗೊಂಡಿದ್ದಾರೆ ಎಂದು ಆರೋಪಿಸಿ ವಿದ್ಯಾರ್ಥಿ ಹೈಕೋರ್ಟ್ ಮೆಟ್ಟಿಲೇರಿದ್ದ. ದೂರು ಇತ್ಯರ್ಥಕ್ಕೆ ಎರಡು ವಾರಗಳಲ್ಲಿ ಸಮಿತಿ ರಚಿಸುವಂತೆ ಹೈಕೋರ್ಟ್ ಸೂಚಿಸಿದೆ.
ಶಾಲಾ-ಕಾಲೇಜುಗಳಲ್ಲಿ ಲೈಂಗಿಕ ದೌರ್ಜನ್ಯ ಹೆಚ್ಚುತ್ತಿರುವುದನ್ನು ಗಮನಿಸಿದ ನ್ಯಾಯಾಲಯ, ಅದರ ಬಗ್ಗೆ ಆಳವಾಗಿ ಯೋಚಿಸುವ ಸಮಯ ಬಂದಿದೆ ಎಂದು ಹೇಳಿದೆ. ದುರ್ಬಲ ಪುರುಷರು ಮಹಿಳೆಯರನ್ನು ಶೋಷಿಸಲು ಪ್ರಯತ್ನಿಸುತ್ತಾರೆ. ಚಿಕ್ಕ ವಯಸ್ಸಿನಿಂದಲೂ ಹುಡುಗರಲ್ಲಿ ಲೈಂಗಿಕತೆಯ ವರ್ತನೆಗಳು ಕಂಡುಬರುತ್ತವೆ ಎಂದು ನ್ಯಾಯಾಲಯ ಹೇಳಿದೆ.
ಪಠ್ಯಕ್ರಮದಲ್ಲಿ ಉತ್ತಮ ನಡತೆಯನ್ನು ಸೇರಿಸಬೇಕು ಎಂಬ ನ್ಯಾಯಾಲಯದ ಆದೇಶದ ಪ್ರತಿಯನ್ನು ಮುಖ್ಯ ಕಾರ್ಯದರ್ಶಿ, ಸಿಬಿಎಸ್‍ಇ, ಐಸಿಎಸ್‍ಇ ಮತ್ತು ಉನ್ನತ ಶಿಕ್ಷಣ ಕಾರ್ಯದರ್ಶಿಗಳಿಗೂ ನೀಡುವಂತೆ ಸೂಚಿಸಲಾಗಿದೆ.
ಹೆಣ್ಣನ್ನು ಗೌರವಿಸುವುದು ಹಳೆಯ ಪದ್ದತಿಯಲ್ಲ; ಈಗಲೂ ಊರ್ಜಿತ: ಹೈಕೋರ್ಟ್
0
ಜನವರಿ 22, 2023
Tags