ಕುಂಬಳೆ: ವಿವಿಧ ಕ್ಷೇತ್ರಗಳ ಸಮೀಕ್ಷೆ ನಡೆಸಲು ಆರ್ಥಿಕ ಅಂಕಿಅಂಶಗಳ ಇಲಾಖೆ ಸನ್ನದ್ದತೆ ನಡೆಸಿದೆ. ಕೇರಳದಲ್ಲಿ ಬಂಜೆತ ಸಮಸ್ಯೆ ಇರುವವರ ಸಂಖ್ಯೆ ಹೆಚ್ಚುತ್ತಿರುವುದನ್ನು ಅಧ್ಯಯನ ಮಾಡಲು ಮತ್ತು ಚಿಕಿತ್ಸೆ ಅಗತ್ಯವಿರುವವರಿಗೆ ಚಿಕಿತ್ಸಾಲಯಗಳಲ್ಲಿ ಯಾವ ಚಿಕಿತ್ಸೆ ಲಭ್ಯವಿದೆ ಎಂಬುದನ್ನು ತಿಳಿದುಕೊಳ್ಳಲು, ``ಕೇರಳದಲ್ಲಿ ಬಂಜೆತನ ಮತ್ತು ಚಿಕಿತ್ಸೆ'', ಕೋವಿಡ್ ಸಂದರ್ಭ ಅನಿವಾಸಿಗಳು ಎದುರಿಸಿದ ಸವಾಲುಗಳನ್ನು ಅರ್ಥಮಾಡಿಕೊಳ್ಳುವ ಉದ್ದೇಶದಿಂದ ಕೋವಿಡ್ ಅವಧಿಯಲ್ಲಿಯ ಸವಾಲುಗಳ ನಿರ್ವಹಣೆ, ನಿರುದ್ಯೋಗಿಗಳು ಮತ್ತು ತಾಯ್ನಾಡಿಗೆ ಮರಳಲು ಸಾಧ್ಯವಾಗದ ಅನಿವಾಸಿಗಳ ಸಾಮಾಜಿಕ-ಆರ್ಥಿಕ ಸ್ಥಿತಿ ಎಂಬ ವಿಭಾಗಗಳಲ್ಲಿ ಸಮೀಕ್ಷೆಯನ್ನು ನಡೆಸಲಾಗುತ್ತಿದೆ. ಎರಡು ಹಂತಗಳಲ್ಲಿ ನಡೆಸುವ ಸಮೀಕ್ಷೆಯ ಮೊದಲ ಹಂತದಲ್ಲಿ ಜಿಲ್ಲೆಯಲ್ಲಿನ ಬಂಜೆತನ ಚಿಕಿತ್ಸಾ ಚಿಕಿತ್ಸಾ ಕೇಂದ್ರಗಳ ಪಟ್ಟಿ, ಜಿಲ್ಲೆಯಲ್ಲಿ ಆಯ್ಕೆಯಾಗಿರುವ 24 ಮಾದರಿ ಘಟಕಗಳಲ್ಲಿ ಅಧ್ಯಯನ ಆಧಾರಿತ ದಂಪತಿಗಳ ಪತ್ತೆಗೆ ಮಾಹಿತಿ ಸಂಗ್ರಹಣೆ, ಅನಿವಾಸಿಗಳ ಪತ್ತೆಗೆ ಮನೆಗಳ ಪಟ್ಟಿ ಸಿದ್ಧಪಡಿಸಲಾಗಿದೆ. ಎರಡನೇ ಹಂತದಲ್ಲಿ ವಿಸ್ತೃತ ಸಮೀಕ್ಷೆ ನಡೆಸಲಾಗುವುದು. ಆರ್ಥಿಕ ಅಂಕಿಅಂಶಗಳ ಇಲಾಖೆಯಲ್ಲಿ ಅಂಕಿಅಂಶಗಳ ತನಿಖಾಧಿಕಾರಿಗಳು ಡೇಟಾ ಸಂಗ್ರಹಣೆಯನ್ನು ಮಾಡುತ್ತಾರೆ. ಫೆಬ್ರವರಿ 28, 2023 ರೊಳಗೆ ಸಮೀಕ್ಷೆಗಳು ಪೂರ್ಣಗೊಳ್ಳುತ್ತವೆ. ಸಮೀಕ್ಷೆಗಳ ಮೂಲಕ ಲಭಿಸುವ ವೈಯಕ್ತಿಕ ಮಾಹಿತಿಯನ್ನು ಗೌಪ್ಯವಾಗಿಡಲಾಗಿದ್ದು, ಸಾರ್ವಜನಿಕರು ಸಮೀಕ್ಷೆಗೆ ಸಹಕರಿಸಬೇಕು ಎಂದು ಆರ್ಥಿಕ ಸಾಂಖ್ಯಿಕ ಇಲಾಖೆಯ ಕಾಸರಗೋಡು ಜಿಲ್ಲಾ ಉಪನಿರ್ದೇಶಕ ಎಸ್.ಎಸ್.ಅಭಿನೇಶ್ ತಿಳಿಸಿದ್ದಾರೆ.
ಕೋವಿಡ್ ಸಂದರ್ಭದ ಅನಿವಾಸಿಗಳು ಎದುರಿಸಿದ ಸವಾಲುಗಳು: ಆರ್ಥಿಕ ಅಂಕಿಅಂಶ ಇಲಾಖೆಯಿಂದ ಸಮೀಕ್ಷೆ
0
ಜನವರಿ 02, 2023