ಇತ್ತೀಚಿಗೆ ಮಹಿಳೆಯರು ತುಂಬಾನೇ ಚೂಸಿ ಆಗಿರ್ತಾರೆ. ಉತ್ತಮ ಸ್ನೇಹಿತನಹುಡುಕಾಟದಲ್ಲಿ ಕೆಲ ಮಹಿಳೆಯರು ಡೇಟಿಂಗ್ ಆಪ್‌ಗಳ ಮೊರೆ ಹೋಗ್ತಾರೆ. ಕೆಲವೊಂದು ಬಾರಿ ಇಲ್ಲೂ ಕೂಡ ಮೋಸದ ಪ್ರೀತಿಗೆ ಒಳಗಾಗಿ ಮತ್ತೇ ಮತ್ತೇ ಪ್ರೀತಿಯಲ್ಲಿ ಸೋತವರು ಇದ್ದಾರೆ. ಕಾರಣ ಮೊದ ಮೊದಲು ಪ್ರೀತಿಯಲ್ಲಿ ಎಲ್ಲವೂ ಚೆನ್ನಾಗಿರುವಂತೆ ಕಂಡರೂ ಕೂಡ ಕಾಲ ಕಳೆದಂತೆ ಪ್ರೀತಿ ಕಡಿಮೆಯಾಗಿ ಮನಸ್ತಾಪಗಳೇ ಹೆಚ್ಚಾಗುವುದುಂಟು.
ಹಾಗಾಗಿ ಇತ್ತೀಚಿನ ದಿನಗಳಲ್ಲಿ ಮಹಿಳೆಯರು ತಮ್ಮ ಗೆಳೆಯನಲ್ಲಿ ಈ ಗುಣಗಳು ಇರಲೇಬೇಕೆಂದು ಇಚ್ಚಿಸುತ್ತಾರೆ.
1. ಗೆಳೆಯನಾದವನು ತನ್ನ ಗೆಳತಿಯನ್ನ ಚೆನ್ನಾಗಿ ಅರ್ಥ ಮಾಡಿಕೊಂಡಿರಬೇಕು
ಸಂತೋಷ-ದುಖಃ,ನೋವು-ನಲಿವಿನಲ್ಲಿ ಸದಾ ಪಾಲುದಾರನಾಗಿರಬೇಕೆಂದು ಆಕೆ ಬಯಸುತ್ತಾಳೆ. ಒಟ್ಟಿನಲ್ಲಿ ಇಬ್ಬರ ನಡುವಿನಲ್ಲಿ ಸರಿಯಾದ ಕೆಮಿಸ್ಟ್ರಿ ಇದ್ದಾಗ ಮಾತ್ರ ಜೀವನ ಉತ್ತಮವಾಗಿರಲು ಸಾಧ್ಯ.
ಗೆಳೆಯನಾದವನು ಯಾವಾಗಲು ಪ್ರಬುದ್ಧನಾಗಿರಬೇಕು
ತನ್ನ ಗೆಳತಿಗೆಗೈಡ್ ಮಾಡಿ ಆಕೆಯನ್ನು ಸಮಸ್ಯೆಗಳಿಗೆ ಸ್ಪಂದಿಸುವವನಾಗಿರಬೇಕು. ಮುಖ್ಯವಾಗಿ ಆತ ತಾನು ಆಡಿದ ಮಾತಿನ ಮೇಲೆ ನಿಲ್ಲುವವನಂತಾಗಿರಬೇಕು. ಅದರಲ್ಲೂ ಸಂಬಂಧ ಎಂದ ಮೇಲೆ ಸಮಯಕ್ಕೆ ಇಬ್ಬರು ಬೆಲೆ ಕೊಡಲೇಬೇಕು.
ಮಹಿಳೆಯರಲ್ಲಿ ಮೂಡ್ ಸ್ವಿಂಗ್ ಸಾಮಾನ್ಯವಾಗಿ ಇದ್ದೇ ಇರುತ್ತದೆ. ತುಂಬಾ ಬೇಜಾರಾದಾಗ ಆತ್ಮೀಯರಾದವರು ಹತ್ತಿರವಿದ್ದು ಸಾಂತ್ವಾನ ಹೇಳಬೇಕೆಂದು ಬಯಸೋದು ಸಹಜ. ಈ ವೇಳೆ ಗೆಳತಿಯಾದವಳು ದುಃಖಕ್ಕೆ ಹೆಗಲು ಕೊಡೋ ಗೆಳೆಯನನ್ನು ಬಯಸುತ್ತಾಳೆ.
2.ರಿಲೇಷನ್‌ಶಿಪ್‌ನಲ್ಲಿ ಸ್ಥಿರತೆ ಎಂಬುದು ತುಂಬಾನೇ ಮುಖ್ಯವಾಗುತ್ತದೆ
ಮೊದಲನೇಯದ್ದು ಗೆಳೆಯನಾದವನು ಭಾವನಾತ್ಮಕವಾಗಿ ಸ್ಥಿರವಾಗಿರಬೇಕು. ಎರಡನೇಯದ್ದು ಆರ್ಥಿಕವಾಗಿ ಸ್ಥಿರವಾಗಿರಬೇಕು. ಮೂರನೇಯದ್ದು ಒಂದೇ ಸಂಬಂಧಕ್ಕೆ ಸೀಮಿತವಾಗಿರಬೇಕು. ಫ್ಲಟ್೯ ಮಾಡೋ ಹುಡುಗರನ್ನ ಮಹಿಳೆಯರು ಇಷ್ಟ ಪಡುವುದಿಲ್ಲ.
ಸಂಬಂಧಗಳು ನಂಬಿಕೆ, ವಿಶ್ವಾಸದ ಮೇಲೆ ನಿಂತಿರುತ್ತದೆ
ಗಂಡು -ಹೆಣ್ಣು ಇಬ್ಬರೂ ಕೂಡ ಈ ಸಂಬಂಧಕ್ಕೆ ಸೇತುವೆಯಾಗಬೇಕು. ಇಬ್ಬರ ಬಂಧ ಗಟ್ಟಿ ಇದ್ದಾಗ ಮಾತ್ರ ಸಂಬಂಧಕ್ಕೆ ಬೆಲೆ ಬರಲು ಸಾಧ್ಯ. ಹೀಗಾಗಿ ಮಹಿಳೆಯರು ವಿಶ್ವಾಸಾರ್ಹ ಸ್ನೇಹಿತನನ್ನು ಬಯಸುತ್ತಾರೆ.
ಸಂಬಂಧದಲ್ಲಿ ಚರ್ಚೆಗಳು ನಡೆಯೋದು ಸಹಜ. ಆರೋಗ್ಯಕರ ಡಿಬೇಟ್ ನಡೆದಾಗ ಒಂದೇ ವಿಚಾರವನ್ನು ಇಟ್ಟುಕೊಂಡು ಅವರನ್ನು ಜಡ್ಜ್ ಮಾಡೋದಕ್ಕೆ ಹೋಗಬಾರದು. ಇಬ್ಬರ ಒಪಿನಿಯನ್ ಗೂ ಪರಸ್ಪರ ಗೌರವ ನೀಡಬೇಕು. ಸಂಬಂಧದಲ್ಲಿ ಗರಿಷ್ಠ-ಕನಿಷ್ಠ ಎಂಬ ಮಾತು ಬರಬಾರದು.
3. ಪುರುಷ ಅಹಂ ಇರಬಾರದು
ಹಿಂದಿನ ಕಾಲದಲ್ಲಿ ಪುರುಷ ಪ್ರಾಬಲ್ಯ ಹೆಚ್ಚಾಗಿತ್ತು. ಇಂದಿನ ಕಾಲದಲ್ಲಿ ಮಹಿಳೆಯಾದವಳು ಪುರುಷನಿಗೆ ಸಮನಾಗಿ ಬದುಕಲು ಇಷ್ಟ ಪಡುತ್ತಾಳೆ.
ಗೆಳೆಯನಾದವನು ಕೂಡ ತನ್ನ ಗೆಳತಿಯನ್ನ ಸಮಾನವೆಂಬಂತೆ ಕಾಣಬೇಕೆಂದು ಆಕೆ ಬಯಸುತ್ತಾಳೆ. ರಿಲೇಷನ್‌ಶಿಪ್‌ನಲ್ಲಿ ಪ್ರಬಲ-ದುರ್ಬಲವೆಂಬ ವಿಚಾರ ಎಂದಿಗೂ ಬರಬಾರದು.
ಅವನು ನನ್ನನ್ನು ಗೌರವಿಸಬೇಕು ನನಗೂ ಆತನ ಮೇಲೆ ಗೌರವ ಭಾವನೆ ಮೂಡುವಂತೆ ಆತನ ಗುಣವಿರಬೇಕು ಎಂದು ಗೆಳತಿ ಬಯಸುತ್ತಾಳೆ. ನನ್ನ ಮನೆಯವರನ್ನು ಆತ ಗೌರವ ಭಾವದಿಂದಲೇ ಕಾಣಬೇಕು. ಹೀಗಾದಾಗ ಮಾತ್ರ ಆತ ನನ್ನಿಂದ ಅದನ್ನು ಬಯಸಬಹುದು.
ಮಹಿಳೆಯರು ಸಹಜವಾಗಿ ಭಾವುಕ ಜೀವಿಗಳು. ಗೆಳೆಯನಾದವನು ಆಕೆಯ ಭಾವನೆಗಳನದನು ಅರ್ಥ ಮಾಡಿಕೊಂಡು ಆಕೆಗೆ ದೈರ್ಯ ತುಂಬಬೇಕು. ಭಾವನೆಗಳಿಗೆ ಸ್ಫಂದಿಸದ ಹುಡುಗರು ಮಹಿಳೆಯರಿಗೆ ಸುತಾರಾಂ ಹಿಡಿಸೋದಿಲ್ಲ.
4. ತನ್ನಲ್ಲಿ ಸುರಕ್ಷಿತೆಯ ಭಾವನೆ ತುಂಬಬೇಕು
ಮಹಿಳೆಯು ತನ್ನ ಗೆಳಯನ ಜೊತೆ ಇದ್ದಾಗ ತಾನು ಸುರಕ್ಷಿತಳಾಗಿದ್ದೀನಿ ಎಂಬ ಭಾವ ಮೂಡಬೇಕೆಂದು ಇಚ್ಚಿಸುತ್ತಾಳೆ. ಗೆಳೆಯನ ಜೊತೆಯಲ್ಲಿ ಕಳೆದ ಎಲ್ಲಾ ಕ್ಷಣವು ಆಕೆಗೆ ಸುಮಧುರವಾಗಿರಬೇಕು. ಅಷೇ ಅಲ್ಲ, ಆತನು ಆಕೆಯ ಇಷ್ಟ-ಕಷ್ಟಗಳಿಗೆ ಸ್ಪಂದಿಸುವವನಾಗಿರಬೇಕು ಎಂದು ಆಕೆ ಬಯಸುತ್ತಾಳೆ.
5. ಎಂಥದ್ದೇ ಕಷ್ಟದಲ್ಲಿ ಜೊತೆಯಾಗಿ ನಿಲ್ಲುವವ
ಪುರುಷರಿಗೆ ತಾಳ್ಮೆ ತುಂಬಾನೇ ಮುಖ್ಯ. ಯಾವುದೇ ವಿಚಾರಕ್ಕಾದರೂ ಒಮ್ಮಿಂದೊಮ್ಮೆಲೇ ರಿಯಾಕ್ಟ್ ಮಾಡ್ಬಾದ್ರು. ಬದಲಿಗೆ ವಿಚಾರವನ್ನು ನಿಧಾನವಾಗಿ ಆಲಿಸುವ ಗುಣವಿರಬೇಕು.
Never give up" ಆ್ಯಟಿಟ್ಯೂಡ್ ಜೀವನದಲ್ಲಿ ಅಳಡಿಸಿಕೊಂಡಿರೋ ಹುಡುಗರು ಹುಡುಗಿಯರಿಗೆ ಇಷ್ಟವಾಗುತ್ತಾರೆ. ಅದು ಹುಡುಗಿಯ ವಿಷಯದಲ್ಲಿ ಆಗಲೀ ಅಥವಾ ಜೀವನದ ಪ್ರತಿ ಹಂತದಲ್ಲೂ ಇದೊಂದು ಗುಣ ಇರಲೇಬೇಕು
ತಿಯಲ್ಲಿ, ಸಂಬಂಧದಲ್ಲಿ ಕಾಂಪ್ರಮೈಸ್ ಇರಲೇಬೇಕು. ಜಗಳ-ಮನಸ್ಥಾಪಗಳು ಉಂಟಾದಾಗ ಯಾರಾದರೂ ಒಬ್ಬರು ಕಾಂಪ್ರಮೈಸ್ ಆಗಲೇಬೇಕು. ಆಗ ಮಾತ್ರ ಸಂಬಂಧ ಗಟ್ಟಿಯಾಗಲು ಸಾಧ್ಯ. ಅದ್ರಲ್ಲೂ ಪುರುಷರಲ್ಲಿ ಇಂತಹ ಗುಣವಿದ್ದರೇ ಮಹಿಳೆಯರು ಬೇಗನೇ ಮನಸೋಲುತ್ತಾರೆ.